spot_img
spot_img

ಕಪ್ಪತಗುಡ್ಡದ ಕಾಂತಾರದ ಮಡಿಲಲ್ಲಿ ಚಿಣ್ಣರ ಚಾರಣ

Must Read

- Advertisement -

ಕಪ್ಪತಗುಡ್ಡದ ಅಪರೂಪದ ಸಸ್ಯ ವೈವಿಧ್ಯತೆಯ ಅಧ್ಯಯನಕ್ಕಾಗಿ ಚಿಣ್ಣರ ಚಾರಣ ಸಂಭ್ರಮ ವಿನೂತನ ಕಾರ್ಯಕ್ರಮಕ್ಕೆ ಮಕ್ಕಳೊಂದಿಗೆ ಹೆಜ್ಜೆ ಹಾಕುವುದರೊಂದಿಗೆ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಚಾಲನೆ ನೀಡಿದರು. ಹಸಿರು ಕಾನನದ ಮೋಡ ಕವಿದ ವಾತಾವರಣ, ಶುದ್ಧ ಗಾಳಿ ಹಕ್ಕಿಗಳ ಕಲರವದಿಂದ ಮುದಗೊಂಡ ಮುಗ್ಧ ಚಿಣ್ಣರು ಗಿರಿ ಕಂದರಗಳಲ್ಲಿ ನಲಿ ನಲಿದಾಡುತ್ತಿದ್ದುದು ನೋಡುಗರ ಕಣ್ಣಿಗೆ ಹಬ್ಬದಂತಿತ್ತು.

ಜನಪದ ಕವಿ ಗವಿಸಿದ್ದಯ್ಯ ಹಳ್ಳಿಕೇರಿ ಮಠರವರ ಪರಿಸರ ಸಂರಕ್ಷಣ ಜಾಗೃತ ಗೀತೆಗಳು ಕೇಳುಗರಿಗೆ ಪ್ರೇರಣಾತ್ಮಕವಾಗಿದ್ದು ಪ್ರಕೃತಿಯೊಂದಿಗೆ ಲೀನಗೊಳಿಸುವ ಏಕತಾನತೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಸಸ್ಯ ಸಂಪತ್ತಿಗೆ ಮನಸೋತು ಆನಂದತುಂದಿಲರಾಗಿ ಚಿಣ್ಣರು ಮೈಮರೆತ ಅಪೂರ್ವ ಕ್ಷಣ ಜೀವನದ ಅವಿಸ್ಮರಣೀಯ ಘಟನೆಯಾಗಿತ್ತು.

- Advertisement -

ದೈಹಿಕ ಉಲ್ಲಾಸಕ್ಕಾಗಿ ಆಯೋಜಿಸಲಾಗಿದ್ದ ಚಾರಣದಲ್ಲಿ ಬೌದ್ಧಿಕ ವಿಕಸನಕ್ಕಾಗಿ ಸಸ್ಯಗಳ ಜೀವ ವೈವಿಧ್ಯತೆಯ ಅಧ್ಯಯನ ಕೂಡ ಒಂದು ಪ್ರಮುಖ ಭಾಗ.

ಅದರಂಗವಾಗಿ ಜರುಗಿದ ‘ಸಸ್ಯಾನುಭಾವ’ದಲ್ಲಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಚನ, ಪಾರಂಪರಿಕ ವೈದ್ಯರ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಕಾಡಿನ ಅಪರೂಪದ ಸಸ್ಯಗಳ ಗುರುತಿಸುವಿಕೆ, ಉಪಯುಕ್ತತೆ ಕುರಿತ ವಿವರಣೆಗಳನ್ನೊಳಗೊಂಡಿತ್ತು.

ಕಾರ್ಯಕ್ರಮದ ರೂವಾರಿ, ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ನಿನ ಅಧ್ಯಕ್ಷ ಭಾಲಚಂದ್ರ ಜಾಬಶೆಟ್ಟಿಯವರು ‘ಕಪ್ಪತಗುಡ್ಡದೊಂದಿಗೆ ಸಮುದಾಯದ ಭಾವ ಬಂಧ ಬೆಸೆಯುವ’ ಈ ವಿನೂತನ ಕಾರ್ಯಕ್ರಮ ಕುರಿತು ವಿವರಿಸಿದರು. ಈ ಪ್ರಕ್ರಿಯೆಯ ನಿರಂತರತೆಯನ್ನು ಕಾಪಾಡಲು ಶ್ರೀ ನಂದಿವೇರಿ ಸಂಸ್ಥಾನ ಮಠದ ಆಶ್ರಯದಲ್ಲಿ ಪ್ರತಿ ತಿಂಗಳ ಎರಡನೇ ರವಿವಾರದಂದು ‘ಚಾರಣ ಸಂಭ್ರಮ ಹಾಗೂ ಸಸ್ಯ ಜೀವ ವೈವಿಧ್ಯತೆಯ ಅಧ್ಯಯನ’ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಪ್ರಕೃತಿ ಸಂರಕ್ಷಣೆಯ ಪಾಠಗಳನ್ನು ಪ್ರಕೃತಿ ಮಡಿಲಲ್ಲಿ ಏರ್ಪಡಿಸಲಾಗುತ್ತದೆಂದು ತಿಳಿಸಿದರು.

- Advertisement -

ಕಪ್ಪತಗುಡ್ಡದ ಸಂರಕ್ಷಣೆಗಾಗಿ ರಾಜ್ಯದ ಜನರ ಗಮನ ಸೆಳೆಯಲು ರಾಜ್ಯ ಮಟ್ಟದ ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ನಿಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದ್ದು ಆಕರ್ಷಕ ಬಹುಮಾನ ನೀಡುವ ಯೋಜನೆಯ ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು ಅತೀ ಶೀಘ್ರದಲ್ಲಿ ವಿವರಗಳನ್ನು ಪ್ರಕಟಿಸಲಾಗುವುದೆಂದು ತಿಳಿಸಿದರು.

ಅರಿವು ಮುಖ್ಯ, ಅರಿವಿಗಿಂತ ಅಳವಡಿಕೆ ಶ್ರೇಷ್ಠ ಎಂದು ಮುನವಳ್ಳಿಯ ಪ್ರಗತಿಪರ ಸಾವಯವ ಕೃ಼ಷಿಕ ರಾಜೀವ ಹೆಬಸೂರ ನುಡಿದರು. ಮುಧೋಳ, ಬೀಳಗಿ, ಹುಬ್ಬಳ್ಳಿ ಹಾಗೂ ಕಪ್ಪತಗುಡ್ಡದ ತಪ್ಪಲಿನ ಪ್ರದೇಶದಿಂದ ಅನೇಕ ತಜ್ಞ ಪಾರಂಪರಿಕ ವೈದ್ಯರು ಆಗಮಿಸಿದ್ದರು.

ಹೊಸಪೇಟೆಯ ಜಿಲ್ಲಾಧಿಕಾರಿ ಕಛೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಅಭಿಯಂತರ ನಾಗೇಂದ್ರ, ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ನಾಗಣ್ಣ ಕಿಲಾರಿ, ಹುಬ್ಬಳ್ಳಿಯ ಎಸ್.ಕೆ.ಹುಲಿಹಳ್ಳಿ, ಡಂಬಳದ ಸಿದ್ದು ಸತ್ಯೆಣ್ಣವರ, ಶಿವಪ್ಪ ಹರ್ತಿ, ರಾಣೆಬೆನ್ನೂರಿನ ಬಸವರಾಜ ಮೈದೂರ, ಪಾರಂಪರಿಕ ವೈದ್ಯರುಗಳಾದ ಕಳಕಪ್ಪ ಜಲ್ಲಿಗೇರಿ, ಪಾಂಡುರಂಗ ಕೊಠಾರಿ, ಚೋರಗಸ್ತಿ, ಮುಧೋಳದ ಶಿವಯ್ಯ ಕಂಬಿ, ಬೀಳಗಿಯ ಮುರನಾಳ ನರೇಗಲ್ಲಿನ ಮಹೇಶ ಎಸ್.ಎಚ್. ಯಾವಗಲ್ಲಿನ ಬಿ.ಎಮ್ ಗಾಣಿಗೇರ, ವೀರಪ್ಪ ತಾಳದವರ ಮುಂತಾದವರು ಆಗಮಿಸಿದ್ದರು
ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ, ನಿರೂಪಿಸಿದರು,
ಮುಂಡರಗಿ ತಾಲೂಕಿನ ಹೆಸರೂರಿನ ಸರಕಾರಿ ಪ್ರೌಢಶಾಲೆಯ ನರೆಗಲ್ಲಿನ ಬಸವೇಶ್ವರ ಸಿ.ಬಿ.ಎಸ್.ಸಿಯ 40 ವಿದ್ಯಾಥಿಗಳನ್ನೊಳಗೊಂಡಂತೆ 75 ಕ್ಕೂ ಹೆಚ್ಚು ಜನರು ಚಾರಣ ಸಂಭ್ರಮದಲ್ಲಿ ಭಾಗವಹಿಸಿದ್ದರು.

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group