ಖಾನಟ್ಟಿಯಲ್ಲಿ ಸಿಆರ್‌ಪಿ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಮೂಡಲಗಿ: ‘ಮಕ್ಕಳು ಪಠ್ಯದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಸದೃಢತೆ ಮತ್ತು ದೈಹಿಕ ಸದೃಢತೆಯಿಂದೆ ಬೆಳೆಯುತ್ತಾರೆ’ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ. ಲೋಕನ್ನವರ ಹೇಳಿದರು.
ತಾಲ್ಲೂಕಿನ ಖಾನಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಆತಿಥ್ಯದಲ್ಲಿ ಶಿವಾಪುರ ಸಿಆರ್‌ಸಿ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಪ್ರಾಥಮಿಕ ಹಂತದಲ್ಲಿಯೇ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾಗವಹಿಸುವ ಕನಸು ಕಾಣಬೇಕು ಮತ್ತು ಸಾಧನೆಗೆ ಪರಿಶ್ರಮಪಡಬೇಕು ಎಂದರು.
ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಕ್ರೀಡಾಕೂಟಗಳು ಸೌಹಾರ್ದತೆಯನ್ನು ಬೆಳೆಸುತ್ತವೆ, ಮಕ್ಕಳಲ್ಲಿ ಆತ್ಮಸ್ಥೈರ್ಯ, ಶಿಸ್ತು ಬೆಳೆಸುತ್ತದೆ. ಕ್ರೀಡಾಕೂಟಗಳು ಮಕ್ಕಳಲ್ಲಿ ಕಲಿಕೆಯ ಉತ್ಸಾಹವನ್ನು ವೃದ್ದಿಸುತ್ತವೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾದೇವಿ ತುಪ್ಪದ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮಪ್ಪ ಕುಂದರಗಿ ಪೂಜೆ ನೆರವೇರಿಸಿಕೊಟ್ಟರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೇತನ ರಡ್ಡೇರಟ್ಟಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಶಿಕ್ಷಕ ಶೇಗುಣಸಿ ಪ್ರತಿಜ್ಞಾವಿಧಿ ಬೋಧಿಸಿದರು. ಗೋಕಾಕದ ಟಿಎಎಂಸಿ ನಿರ್ದೇಶಕ ವೆಂಕನಗೌಡ ಪಾಟೀಲ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ರಾಷ್ಟ್ರ ಮಟ್ಟದ ಕ್ರೀಡಾಪಟು ಚೇತನ ಕುರಿಹುಲಿ ದ್ವಜಾರೋಹಣ ನೆರವೇರಿಸಿದರು.
ಅತಿಥಿಯಾಗಿ ಮಹಾಂತಪ್ಪ ರಡ್ಡೇರಟ್ಟಿ, ಅಜ್ಜಪ್ಪ ಲಂಗೋಟಿ, ಶಿವಬಸು ಬೆಳಗಲಿ, ಮೀನಾಕ್ಷಿ ಲಂಗೊಟಿ, ಅನುರಾಧ ಭಜಂತ್ರಿ, ಶಂಕರ ಡೋಣಿ, ಶ್ರೀಶೈಲ್ ತುಪ್ಪದ, ಗ್ರಾಮ ಪಂಚಾಯಿತಿ ಸದಸ್ಯರಾದ ನಿಂಬೆವ್ವ ಮೇತ್ರಿ, ವಂದನಾ ಸೋನಾರ, ಮಾಯವ್ವ ಲಂಗೋಟಿ, ಯಲ್ಲಪ್ಪ ಕರಗಣ್ಣಿ, ಜಗದೀಶ ಲಂಗೋಟಿ, ಬಾಳಯ್ಯ ಹಿರೇಮಠ, ಬಸಲಿಂಗಪ್ಪ ನಿಂಗನೂರ, ಶಿಕ್ಷಕರ ಸಂಘದ ತಾಲ್ಲೂಕಾ ಅಧ್ಯಕ್ಷ ಎಂ.ಜಿ. ಮಾವಿನಗಿಡದ, ಕಾರ್ಯದರ್ಶಿ ಎ.ಪಿ. ಪರಸನ್ನವರ, ಸುಭಾಸ ಕಡಾಡಿ, ಜಿ.ಎಸ್. ಜಂಬಗಿ, ಎನ್.ಜಿ. ಹೆಬ್ಬಳ್ಳಿ, ಪುಂಡಲಿಕ ಕರಗಣ್ಣಿ ಇದ್ದರು.
ಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾAತ ಕೊಡತೆ ಪ್ರಾಸ್ತಾವಿಕ ಮಾತನಾಡಿದರು.
ಸಿಆರ್‌ಪಿ ಎನ್.ಜಿ. ಹೆಬ್ಬಳ್ಳಿ ಸ್ವಾಗತಿಸಿದರು, ಬಸವ್ವ ಹೊಸತೋಟ, ಬಸಯ್ಯ ಹಿರೇಮಠ ವಂದಿಸಿದರು.
ಮುಗಿಯಿತು………………