spot_img
spot_img

ಮಕ್ಕಳಿಗೆ ಅವರ ಇಷ್ಟಾನುಸಾರ ಶಿಕ್ಷಣ ಕಲಿಯಲು ಬಿಡಬೇಕು – ಅಶೋಕ ಮನಗೂಳಿ

Must Read

ಸಿಂದಗಿ; ವಿಶ್ವಕರ್ಮ ಸಮಾಜ ಎಲ್ಲ ಸಮಾಜದ ಅವಿಭಾಜ್ಯ ಅಂಗವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವೆಲ್ಲ ಪಾಲಕರು ನಮ್ಮ ಮಕ್ಕಳು ಇಂಜಿನಿಯರ, ಡಾಕ್ಟರಗಳಾಗಬೇಕು ಎನ್ನುವ ಕನಸು ಕಾಣುವ ಬದಲು ಬಾಲ್ಯದಿಂದ ಅವರ ಇಷ್ಟಾನುಸಾರವಾಗಿ ಶಿಕ್ಷಣ ಕಲಿಯಲು ಬಿಡಬೇಕು ಅಂದಾಗ ಇಂತಹ ಬರಹಗಾರರು, ಸಂಶೋಧಕರಾಗಿ ಹೊರಹೊಮ್ಮುವರು  ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ ಕಮಲಾಪುರ ಹಂಪಿ, ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ, ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರ ತ್ರಿವಳಿ ಸಂಸ್ಥೆಯಿಂದ ತಾಲೂಕಾ ವಿಶ್ವಕರ್ಮ ಸಮಾಜ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಯುವಬರಹಗಾರರ ಹಾಗೂ ಸಂಶೋಧಕರ 4ನೇ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಭಾರತದಲ್ಲಿ ರೀಡ್ ಆಂಡ್ ರೈಟ್ ಅಗಿದೆ ಇದರಿಂದ ಸಂಶೋದಕರು ರೂಪುಗೊಳ್ಳುವುದು ಕಷ್ಟ ಸಾಧ್ಯವಾಗಿದೆ ಸಂಶೋಧನೆ ಮಡಿ ವಿದ್ಯಾಭ್ಯಾಸ ಕೊಟ್ಟಿದ್ದಾದ್ದರೆ ಉತ್ತಮ ಸಂಶೋಧಕರನ್ನು ಕೊಡುಗೆಯಾಗಿ ಕೊಡಬಹುದು ಅಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾಗ ಅಭಿವೃದ್ಧಿ ಕಾಣಲು ಸಾಧ್ಯ ಎಂದ ಅವರು ವಿಶ್ವಕರ್ಮ ಅಧ್ಯಯನ ಪೀಠವಾಗಬೇಕೆನ್ನುವ ಬೇಡಿಕೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ ಅವರ ಮೂಲಕ ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೈಸೂರು ವಿವಿಯ ಪ್ರೋಡ್ಯುಜರ್ ಎಜುಕೇಶನ ಮಲ್ಟಿಮಿಡಿಯಾ ರಿಸರ್ಚ ಸೆಂಟರ ಡಾ ಬಿ. ಶ್ರೀಕಂಠಾಚಾರ್ ಮಾತನಾಡಿ, ಮನುಷ್ಯನ ಸಾವು ಬೇರೆ ಮತ್ತು ಕಾಯಿಲೆ ಬೇರೆ ಅದನ್ನೆ ಬಂಡವಾಳವನ್ನಿಟ್ಟುಕೊಮಡು ಟಿವ್ಹಿ ಸಿರಿಯಲ್‍ಗಳು ಮತ್ತು ಟಿವ್ಹಿ ಮಾಧ್ಯಮ ಜಾಹೀರಾತುಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ ಹಣ ಮಾಡುತ್ತಿವೆ ಕಾರಣ ಆರೋಗ್ಯ, ಹಣ, ವಿವೇಚನೆ ಮೂರು ಸೂತ್ರಗಳನ್ನು ಜಾಗೃತಿಯಿಂದ ನಿಬಾಯಿಸಿ ಪ್ರಜ್ಞಾಪೂರ್ವಕವಾಗಿ ಜೀವನ ನಡೆಸಿದರೆ ಮನುಷ್ಯ ವಿಚಲಗೊಳ್ಳಲಾರ ಎಂದರು.

ಸಾನ್ನಿಧ್ಯ ವಹಿಸಿದ್ದ ಆಲಮೇಲ ಮತ್ತು ಸಿಂದಗಿ ಮೂರುಝಾವಧೀಶ್ವರ ಮಠದ ಪೂಜ್ಯಶ್ರೀ ರಾಮಚಂದ್ರ ಮಹಾಸ್ವಾಮಿಗಳು, ಬೊರಗಿ ಪುರದಾಳ ವಿಶ್ವಾರಾಧ್ಯಮಠದ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಡಾ ವೀರೇಶ ಬಡಿಗೇರ, ಹಿರಿಯ ಪತ್ರಕರ್ತ ಶಾಂತೂ ಹಿರೇಮಠ, ಶಿಲ್ಪಾ ಚಿಂತಾಮಣಿ ಪತ್ತಾರ, ಶಿವು ಬಡಿಗೇರ ಮಾತನಾಡಿದರು.

ಗುಲಬರ್ಗಾ ಹಿರಿಯ ಲೇಖಕ ನರಸಿಂಗರಾವ ಹೇಮನೂರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ವಿಜಯಕುಮಾರ ಪತ್ತಾರ, ಸಮಾಜದ ಅದ್ಯಕ್ಷ ದಯಾನಂದ ಪತ್ತಾರ ಗಾಯತ್ರಿ ಮಹಿಳಾ ಮಂಡಳಿಯ ಅದ್ಯಕ್ಷೆ ಸುಹಾಸನಿ ವಿನೋದ ಹಂಚನಾಳ, ಕಲಬುರಗಿಯ ದತ್ತಾತ್ರೇಯ ವಿಶ್ವಕರ್ಮ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

$ಡಾ ಚಂದ್ರಶೇಖರ ಕಾಳನ್ನವರ ಸ್ವಾಗತಿಸಿದರು. ಸಂಚಾಲಕ ಬಸವರಾಜ ಬೋರಗಿ  ನಿರೂಪಿಸಿದರು. ಶ್ರಿಶೈಲ ಬಡಿಗೇರ ವಂದಿಸಿದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!