ಮಕ್ಕಳಿಗೆ ಮನೆಯಿಂದಲೇ ಸುಸಂಸ್ಕೃತ ಶಿಕ್ಷಣ ಕೊಡಿಸಬೇಕು

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸಂಬಂಧ ಗಳನ್ನು ಜ್ಞಾನದಿಂದ ಬೆಳೆಸಿಕೊಂಡರೆ ಉತ್ತಮ. ವಿಜ್ಞಾನದಿಂದ ಬೆಳೆಸುತ್ತಿದ್ದರೆ ಸಂಬಂಧವಿಲ್ಲದ ವಿಚಾರಗಳನ್ನು ತಲೆಗೆ ತೂರಿಸಿಕೊಂಡು ತಲೆಕೆಟ್ಟ ಸಮಾಜವಾಗುತ್ತದೆ. ಹಿಂದಿನ ಕಾಲದಿಂದಲೂ ಮಾನವ ಸಂಬಂಧಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡೋದಕ್ಕೆ ತನ್ನ ಸಾಮಾನ್ಯಜ್ಞಾನ ವನ್ನು ಬಳಸಿ ಇದ್ದ ಸ್ಥಳದಲ್ಲಿಯೇ ಸುಖ,ಶಾಂತಿ,ನೆಮ್ಮದಿಯ ಉಸಿರಾಡಿ ಜೀವನ ನಡೆಸಿದ್ದನು.

ಆದರೆ ,ಯಾವಾಗ ಸಂಬಂಧ ಗಳು ಹೊರಗಿನಿಂದ ಬೆಳೆಯುತ್ತಾ ಹೊರಬಂದವೋ ಆಗಲೇ ಒಳ ಸಂಬಂಧದಲ್ಲಿ ಒಡಕು ಹೆಚ್ಚಾಯಿತು. ಇದಕ್ಕೆ ಕಾರಣ ವ್ಯವಹಾರ ಜ್ಞಾನ,ರಾಜಕೀಯ ಜೀವನ. ಇಲ್ಲಿ ಕೊಟ್ಟು ಪಡೆಯೋದರಲ್ಲಿಯೇ ಜೀವನ ಮುಗಿದಿರುತ್ತದೆ. ಮತ್ತೆ ಪಡೆದಿದ್ದನ್ನು ಕೊಡುವುದಕ್ಕೆ ಜನ್ಮ ತಾಳುವುದು.

ಇದೇ ಭೂಮಿಯಲ್ಲಿ ನಡೆದಿರೋದೆನ್ನುವುದು ಎಲ್ಲರಿಗೂ ತಿಳಿದಿದೆ. ಕೊಟ್ಟು ಮರೆಯುವುದು ಮಹಾತ್ಮರ ಲಕ್ಷಣ, ಕೊಟ್ಟು ಪಡೆಯುವುದು ಮಾನವನ ಲಕ್ಷಣ, ಕೊಡದೆ ಪಡೆಯುವುದು ಅಸುರರ ಲಕ್ಷಣ. ಮೂರೂ ರೀತಿಯಲ್ಲಿ ವ್ಯವಹಾರ ನಡೆದಿದ್ದರೂ ಕೊನೆಯ ವ್ಯವಹಾರದ ಸಂಬಂಧ ಬೆಳೆದಂತೆಲ್ಲಾ ಸಮಾಜ ಹಾಳಾಗಿ ಹೋಗುತ್ತದೆ.

- Advertisement -

ಭೂಮಿ ತಾಯಿ, ಹೆತ್ತತಾಯಿ, ಸ್ತ್ರೀ ಶಕ್ತಿಯ ಋಣ ತೀರಿಸಲು ಬಹಳ ಕಷ್ಟ. ಹೀಗಾಗಿ ಮಹಾತ್ಮರಾದವರು ಕೊಟ್ಟು ಮುಕ್ತಿ ಪಡೆದರು. ಕೊಟ್ಟು,ಬಿಟ್ಟು ಹೋದದ್ದನ್ನು ಮಾನವರು ಬಳಸಿಕೊಂಡು ವ್ಯವಹಾರ ನಡೆಸಿ ತಮ್ಮ ಜೀವನ ಸಾಗಿಸುವಾಗ ಅದರ ಹಿಂದಿನ ಆಧ್ಯಾತ್ಮ ಸತ್ಯ ಅರ್ಥವಾದರೆ “ಕೆರೆಯ ನೀರನು ಕೆರೆಗೆ ಚೆಲ್ಲಿ” ಆಗುತ್ತದೆ. ಆದರೆ ಇದನ್ನು ಅಸುರರಿಗೆ ಕೊಟ್ಟು ಕೈಮುಗಿದರೆ ಅದು ಮುಂದೆ ಹರಿಯದ ಕೆಸರಾಗಿ ಅದರಲ್ಲಿರುವ ಕಮಲ ಕಿತ್ತು ಲಕ್ಮಿ ಪೂಜೆ ಮಾಡಿ ಶ್ರೀಮಂತರಾಗಿ ಹಣಗಳಿಸಿ ದೇವರನ್ನೇ ಆಳೋದಕ್ಕೆ ಹೋಗುತ್ತಾರೆ.

ಭಾರತೀಯರ ಈ ಸ್ಥಿತಿಗೆ ಕಾರಣವೇ ವಿಜ್ಞಾನವನ್ನು ಬೆಳೆಸುತ್ತಾ ವಿದೇಶಿ ಶಿಕ್ಷಣ ಒಳಗೆಳೆದುಕೊಂಡು, ವಿಧರ್ಮ, ವಿಜಾತಿ, ವಿವಿಧ ರೀತಿ, ನೀತಿ, ಸಂಸ್ಕೃತಿ, ಸಂಪ್ರದಾಯಗಳಿಂದ ನಮ್ಮವರ ಮೂಲ ಅರ್ಥ ಮಾಡಿಕೊಳ್ಳದೆ ಪರರ ಸಂಬಂಧವನ್ನು ಗಟ್ಟಿಗೊಳಿಸಲು ವಿದೇಶದವರೆಗೆ ಹೋಗಿರುವುದಾಗಿದೆ.

ದೇಶದೊಳಗಿರುವ ನಮ್ಮವರನ್ನೇ ಶತ್ರುವಾಗಿಸಿಕೊಂಡು ವಿದೇಶಿಗಳಿಗೆ ಸತ್ಕಾರ ಮಾಡಿದರೆ ಮನೆಯೊಡೆಯ ಸುಮ್ಮನಿರುವನೆ? ನಮ್ಮೊಳಗೇ ಮೊದಲೇ ಇದ್ದ ಸಂಬಂಧ ಬಿಟ್ಟು ಹೊರಗಿನ ಸಂಬಂಧ ಬೆಳೆಸಿದರೆ ತಾತ್ಕಾಲಿಕ ಸಂತೋಷ. ನಂತರ ಅವರೇ ನಮ್ಮನ್ನು ಆಳುವಾಗ ದೂರವಾಗಿರುವ ಮೂಲ ಸಂಬಂಧಿಕರು ಹತ್ತಿರ ಬರೋದಕ್ಕೆ ಕಷ್ಟ. ಇದನ್ನು ನಾವು ಪ್ರತಿಯೊಂದು ವಿಚಾರದಲ್ಲಿಯೂ ತಿಳಿಯಬಹುದು. ಸುಖವಾಗಿ, ಸುಲಭವಾಗಿ ಹಣ, ಸಾಲ,ಸೌಲಭ್ಯಗಳನ್ನು ಪಡೆದ ಮನಸ್ಸಿಗೆ ಕಷ್ಟ ಬಂದಾಗ ಹಿಂದಿರುಗಿಸಲಾಗದೆ ವಿರೋಧಿಗಳ , ವಿದೇಶಿಗಳ, ವಿಧರ್ಮಗಳ ಕಡೆ ವಾಲಿದರೆ ಇದರಿಂದಾಗಿ ಇನ್ನಷ್ಟು ಆತ್ಮಹತ್ಯೆಯಾಗುತ್ತದೆ.

ಇಲ್ಲಿ ಸಂಬಂಧ ಕೂಡಿರುವುದೆ ಹಿಂದಿನ ಜನ್ಮದ ಋಣ ತೀರಿಸಲು. ಆ ಋಣ ಅಥವಾ ಸಾಲ ತೀರಿಸುವುದಕ್ಕೆ ಮೂಲದ ಧರ್ಮ ಕರ್ಮವನ್ನು ಬೆಳೆಸಿಕೊಂಡು ದುಡಿದು ಕಷ್ಟಪಡಲೇಬೇಕೆಂಬುದೆ ಸನಾತನ ಧರ್ಮದ ಸತ್ಯ. ಈ ಮೂಲ ಹುಡುಕುವುದಕ್ಕೆ ಕಷ್ಟವಿಲ್ಲ. ನಾವೆಲ್ಲಿ ಹುಟ್ಟಿದ್ದೇವೆ? ನಮ್ಮ ಸಂಬಂಧವನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಿಕೊಂಡರೆ ತಿರುಗಿ ನಡೆಯಲು ಕಷ್ಟವಿಲ್ಲ. ನಾವೀಗ ಶ್ರೀ ರಾಮಚಂದ್ರನಂತಹ ಮಹಾತ್ಮ, ಮಹಾಪುರುಷ, ಮಹಾಜ್ಞಾನಿ, ಮಹಾರಾಜ ಮಹಾದೇವನನ್ನು ಆರಾಧಿಸಿ ಪೂಜಿಸಿ ನಮ್ಮ ಬೇಡಿಕೆ ಮುಂದಿಟ್ಟು ರಾಮರಾಜ್ಯದ ಕನಸು ಕಾಣುತ್ತೇವೆ.

ಆದರೆ ಶ್ರೀ ರಾಮನ ಕಾಲವೇ ಬೇರೆ ಈಗ ಬೇರೆ ಆಗಿದ್ದರೂ ಅಂದಿನ ರಾಜಪ್ರಭುತ್ವದ ಪ್ರಕಾರ ರಾಜನಾದವನು ತನ್ನ ಪ್ರಜೆಗಳನ್ನು ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುವ ಜ್ಞಾನ ಪಡೆದಿದ್ದರು. ಈಗಲೂ ಎಷ್ಟೋ ರಾಜಕಾರಣಿಗಳು ಜನರ ಜೀವ ಉಳಿಸಲು ಸಾಕಷ್ಟು ಪ್ರಯತ್ನಮಾಡಿದ್ದಾರೆ. ಆದರೆ ಇಲ್ಲಿ ಪ್ರಜೆಗಳಿಗಿಲ್ಲದ ಸತ್ಯಜ್ಞಾನದ ಕೊರತೆಯೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿರುವಾಗ ಯಾವುದೇ ಧಾರ್ಮಿಕ ಸಂಬಂಧ, ರಾಜಕೀಯ, ಆರ್ಥಿಕ, ಹಾಗು ಸಾಮಾಜಿಕ ಸಂಬಂಧ ಗಳಲ್ಲಿ ನಿಸ್ವಾರ್ಥ, ನಿರಹಂಕಾರ ಹಿಂದುಳಿದಿದ್ದರೆ, ಪ್ರತಿಯೊಂದು ಮನೆ ಮನೆಯೊಳಗಿನ ಸಂಬಂಧ ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗುತ್ತದೆ.

ಹೀಗಾಗಿ ಸಂಸಾರ ನಡೆಸಲು ಬೇಕಾದ ಆತ್ಮಜ್ಞಾನದ ಶಿಕ್ಷಣವನ್ನು ಮಕ್ಕಳಿಗೂ ಕಲಿಸಿ ನಮ್ಮಲ್ಲಿ ಬೆಳೆಸಿಕೊಂಡು ಸಮಾಜದಲ್ಲಿ ಜೀವನ ನಡೆಸುವಾಗ ಸಮಾಜದ ಋಣ ತೀರಿಸುವ ಬಗ್ಗೆ ಚಿಂತನೆ ನಡೆಸಿ, ದೇಶದೊಳಗಿರುವಾಗ ದೇಶದ ಋಣ ತೀರಿಸೋ ದೇಶ ಭಕ್ತಿ ದೇಶವಾಸಿಗಳಲ್ಲಿದ್ದರೆ ಯಾವುದೇ ಹೊರಗಿನವರ ಸಂಬಂಧ ಗಳಿಂದ ಮೂಲದ ಧರ್ಮ ಕರ್ಮಕ್ಕೆ ಹಾನಿ ಆಗೋದಿಲ್ಲ. ಇಲ್ಲಿ ಸ್ವಾರ್ಥ ಕ್ಕಾಗಿ ಬೆಳೆಸಿಕೊಂಡಿರುವ ವ್ಯಾವಹಾರಿಕ ಸಂಬಂಧ ಋಣ ಹೆಚ್ಚಿಸುತ್ತಾ ಹೊರಗೆ ನಡೆದಿದೆ. ಹೀಗಾಗಿ ಮೂಲ ಗಟ್ಟಿಯಾಗದೆ ಟೊಳ್ಳಾಗಿದೆ. ನಮ್ಮ ಮೂಲ ಗಟ್ಟಿಯಾಗಿಸಿಕೊಳ್ಳಲು ಶಿಕ್ಷಣದಿಂದಲೇ ಸಾಧ್ಯವಿದೆ. ನಮ್ಮಂತೆ ಮುಂದಿನ ಪೀಳಿಗೆ ಟೊಳ್ಳಾಗಿ ಅಶಕ್ತರಾಗದೆ ಗಟ್ಟಿಯಾಗಿರಬೇಕಾದರೆ ಪ್ರಜೆಗಳೇ ತಮ್ಮ ಮಕ್ಕಳನ್ನು ಸುಶಿಕ್ಷಿತರಾಗಿಸಿ, ಸಂಸ್ಕಾರ ಕಲಿಸಿ, ಸತ್ಯ ತಿಳಿಸಿ, ರಾಜಕೀಯದಿಂದ ದೂರವಿಟ್ಟು ಬೆಳೆಸಿದರೆ ಮಕ್ಕಳಲ್ಲಿರುವ ಅಗಾಧವಾದ ಜ್ಞಾನಕ್ಕೆ ಹೊಳಪುಸಿಗಲು ಸಾಧ್ಯವಿದೆ.

ಸ್ವಯಂ ಪ್ರಕಾಶಮಾನರಾಗಿ ಬೆಳೆಯಲು ವ್ಯವಹಾರದಿಂದ ಕಷ್ಟ. ಓದಿದ್ದನ್ನು ತಿಳಿಸೋದಕ್ಕೆ ನೆನಪಿನ ಶಕ್ತಿ ಬುದ್ದಿಶಕ್ತಿ ಬೇಕು.ಅದನ್ನು ಅಳವಡಿಸಿಕೊಳ್ಳಲು ಸತ್ಯಜ್ಞಾನ ಬೇಕು ಸತ್ಯವೇ ದೇವರಾಗಬೇಕು. ಧರ್ಮದ ಅಗತ್ಯವಿದೆ.ಕರ್ಮ ಅದಕ್ಕೆ ಪೂರಕವಾಗಿರಬೇಕು. ಕರ್ಮವೇ ವಿರುದ್ದದಿಕ್ಕಿನಲ್ಲಿದ್ದರೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇಲ್ಲಿ ನಮ್ಮ ಸಂಬಂಧ ಗಳಲ್ಲಿ ಗುಣಜ್ಞಾನ ಹೊಂದಿಕೆ ಆಗಿದ್ದರೆ ಉತ್ತಮ ಜೀವನ. ಈ ಕಾರಣಕ್ಕಾಗಿಯೇ ಹಿಂದೆ ಮದುವೆ ಸಂಬಂಧ ಗಳಲ್ಲಿ ಜಾತಕದೊಳಗಿರುವ ಗ್ರಹಗತಿ ಲಕ್ಷಣ, ಸ್ವಭಾವಗಳನ್ನು ನೋಡಿ ಹೊಂದಿಕೆಯಾದರೆ ಮಾತ್ರ ಮದುವೆ ಮಾಡುತ್ತಿದ್ದರು.

ಆದರೆ ಕೊನೆಕೊನೆಗೆಕೇವಲ ಸ್ತ್ರೀ ಯನ್ನು ಆಳೋ ಮಟ್ಟಿಗೆ ಜಾತಕ ಹೊಂದಿಸಿ ಅವಳನ್ನು ಶಕ್ತಿಹೀನವಾಗಿಸಿ, ಆಸೆ,ಆಕಾಂಕ್ಷೆಗಳನ್ನು  ಬದಿಗೊತ್ತಿ ನರಕತೋರಿಸಿದವರು ಈಗಲೂ ಜೀವನದಲ್ಲಿ ‌ ಕಷ್ಟ ಅನುಭವಿಸುತ್ತಲೇ ಇದ್ದಾರೆ ಎಲ್ಲಿಯವರೆಗೆ ಸ್ತ್ರೀ ಶಕ್ತಿಯನ್ನು, ಭೂಮಿಯನ್ನು, ತಾಯಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಂಬಂಧ ಗಳು ಗಟ್ಟಿಯಿರೋದಿಲ್ಲ. ಹಣದಿಂದ ಸಂಬಂಧ ಜೋಡಿಸಿಕೊಂಡು ಹಣ ಖಾಲಿ ಆದಾಗ ಬಿಟ್ಟು ನಡೆದರೆ, ಋಣ ತೀರೋದಿಲ್ಲ.

ನಾವೀಗ ಕಾಣುತ್ತಿರುವ ಹಿಂದೂ ಧರ್ಮದವರ ಸಂಬಂಧ ಬೆಳೆದಿರೋದು ಹಣ, ಒಡವೆ, ವಸ್ತ್ರ, ಆಸ್ತಿ, ಅಂತಸ್ತಿನ ಲೆಕ್ಕಾಚಾರದಲ್ಲಿ.ಇದನ್ನು ನಾವು ಪರಧರ್ಮದವರಲ್ಲಿ ಹೆಚ್ಚು ಕಾಣೋದಿಲ್ಲ.ಅವರು ದುಡಿದ ಹಣದಲ್ಲಿ ತಮ್ಮವರ ಜೊತೆಗೆ ಪರರನ್ನೂ ಬೆಳೆಸಿಕೊಂಡು ಸಂಖ್ಯೆ ಬೆಳೆಸಿಕೊಳ್ಳಲು ಒಂದಾಗುತ್ತಾರೆ. ಇದರಿಂದಾಗಿ ಹಿಂದೂ ಧರ್ಮದಲ್ಲಿ ಹಿಂದುಳಿದವರು ಹೆಚ್ಚು. ಇಲ್ಲಿ ದೇಶ ಒಂದೇ ಅದೂ ನಮಗೆ ಇರೋದು ಒಂದೇ ದೇಶ. ಅದನ್ನು ಗಟ್ಟಿ ಮಾಡೋದಕ್ಕೆ ನಮಗೇ ಕಷ್ಟವಾದರೆ ಪರಕೀಯರಿಗೆ ಸಾಧ್ಯವೆ? ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವುದನ್ನು ಈಗ ನಾವೇ ಪ್ರತ್ಯಕ್ಷ ಸಾಕ್ಷಿ. ನಮ್ಮವರ ಸಂಬಂಧ ದಲ್ಲಿ ಧರ್ಮ ಜ್ಞಾನವಿಲ್ಲದೆ ರಾಜಕೀಯವಾಗಿ ಬಳಸಿ, ವ್ಯವಹಾರಕ್ಕೆ ಬಳಸಿ ಹಣದ ಲಾಭ ಪಡೆದು ಜ್ಞಾನದಲ್ಲಿಯೇ ಹಿಂದುಳಿದು ಮೋಸ ಹೋಗಿರೋದು ನಮಗೆ ನಾವೇ ಮಾಡಿಕೊಂಡಿರುವ ವ್ಯವಹಾರಿಕ ಸಂಬಂಧ. ಜೀವನದಲ್ಲಿ ವ್ಯವಹಾರವಿರಲಿ, ಜೀವನವೇ ವ್ಯವಹಾರವಾಗದಿರಲಿ.

ಇದು ಭಾರತೀಯರಿಗೆ ತಿಳಿಯಲಿ ವಿದೇಶಿಗಳ ಸಾಲ ಬಿಟ್ಟು ಸ್ವದೇಶಿಗಳ ಧರ್ಮ ಕರ್ಮಕ್ಕೆ ಬೆಲೆಕೊಡಲಿ.ಸಂಸಾರ ಬಿಟ್ಟು ರಾಜಕೀಯ ನಡೆಸೋದು ಸುಲಭ, ಸಂಸಾರದಲ್ಲಿದ್ದು ರಾಜಕೀಯಕ್ಕಿಳಿಯೋದು ಸಹಜ, ಸಂಸಾರದಲ್ಲಿದ್ದು ರಾಜಕೀಯದಿಂದ ದೂರ ಇರೋದು ಬಹಳ‌ಕಷ್ಟ. ಸಮಾಜದಿಂದ ದೂರ ಇರಲು ಸಂನ್ಯಾಸಿಗಳಿಗೆ ಸಾಧ್ಯ. ಇವರು ಸಂಬಂಧಗಳನ್ನು ಕಡಿದು ಮುಂದೆ ನಡೆದರೂ ಭೂಮಿಯ ಸಂಬಂಧ ಕಡಿಯಲಾಗದು. ನೆಲಜಲವೂ ಜೀವಕ್ಕೆ ಆಧಾರ. ಹೀಗಾಗಿ ಮನುಕುಲದ ಸಂಬಂಧ ಕೆಟ್ಟು ಹೋಗಿರುವುದು ಮೂಲ ಮರೆತು ಹೊರನಡೆದು ವ್ಯವಹಾರ ನಡೆಸಿರೋದಷ್ಟೆ.

ಈಗಿದು ಸರಿಪಡಿಸಲು ಕಷ್ಟವಾದರೂ ಮಾರ್ಗವಿದೆ. ಶಿಕ್ಷಣದಿಂದಲೇ ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಶಿಕ್ಷಣ ನೀಡುತ್ತಾ ಜ್ಞಾನ ಹೆಚ್ಚಿಸಿ ಸ್ವಾವಲಂಬನೆ, ಸ್ವಾಭಿಮಾನ ದ ಕಡೆಗೆ ಸ್ವತಂತ್ರ ವಾಗಿ ನಡೆಯಲು ಸಹಕರಿಸುವುದು. ಸರ್ಕಾರ ಉಚಿತ ಶಿಕ್ಷಣ ನೀಡುವುದು ತಪ್ಪಲ್ಲ. ಆದರೆ ಶಿಕ್ಷಣದಲ್ಲಿ ಉಚಿತವಾದ ವಿಚಾರ ಅಳವಡಿಸದಿರೋದು ತಪ್ಪು. ಇದನ್ನು ಪೋಷಕರೆ ಗುರುತಿಸಿ ಮನೆಯೊಳಗಿನಿಂದಲೇ ಸಂಸ್ಕಾರ ನೀಡಿದರೆ ಮಕ್ಕಳನ್ನು ಸತ್ಪ್ರಜೆಯಾಗಿಸಬಹುದು.

ದೇಶದ ಪ್ರಜೆಗಳ ಉತ್ತಮ ಸಂಬಂಧಗಳೇ ದೇಶವನ್ನು ಗಟ್ಟಿಗೊಳಿಸುವುದಾಗಿತ್ತು. ಆದರೆ ಅಸಂಖ್ಯಾತ ಧರ್ಮ ಜಾತಿ, ಪಕ್ಷ, ಸಂಘ, ಸಂಸ್ಥೆಗಳ ಸ್ವಾರ್ಥ ದ ವ್ಯವಹಾರಕ್ಕೆ ದೇಶವೇ ಸಾಲಕ್ಕೆ ಬಲಿಯಾಯಿತು. ಈಗಿದನ್ನು ತೀರಿಸಲು ವಿದೇಶಿ ಸಾಲ ಮಾಡಿದರೆ ವಿದೇಶಿಗಳ ಸಂಬಂಧ ಹೆಚ್ಚಾಗಿ ಏಕತೆ ಎಲ್ಲಿರುತ್ತದೆ? ತತ್ವವನ್ನು ತಲೆಯೊಳಗೆ ಹಾಕಿಕೊಂಡು ಬಾಯಿಯಿಂದ ಹೊರಹಾಕೋದು ಸುಲಭ.

ಆದರೆ ಅದನ್ನು ಹೃದಯದವರೆಗೆ ಎಳೆದುಕೊಂಡು ಸತ್ಯದ ಅನುಭವ ಮಾಡಿಕೊಳ್ಳದಿದ್ದರೆ ಅದ್ವೈತ ವಾಗೋದಿಲ್ಲ. ಹೊರಗಿನ ಓದುವಿಕೆ ಒಳಗಿನ ಜ್ಞಾನಕ್ಕೆ ಹೊಂದಿಕೆಯಾಗದಿದ್ದರೆ ವ್ಯರ್ಥ ಶಿಕ್ಷಣವಾಗುತ್ತದೆ. ಶಿಕ್ಷಣವು ವ್ಯವಹಾರಕ್ಕೆ ಮಾತ್ರ ಬಳಸಿ, ಧರ್ಮ ಸತ್ಯ ಬಿಟ್ಟು ಹೊರನಡೆದರೆ ವ್ಯಾಪಾರ ಆಗುತ್ತದೆ. ಹೀಗಾಗಿ ಮಕ್ಕಳಿಗೆ ಪೋಷಕರಲ್ಲಾಗಲಿ, ಶಿಕ್ಷಕರಲ್ಲಾಗಲಿ, ಗುರುಹಿರಿಯಲ್ಲಾಗಲಿ ಗೌರವವಿಲ್ಲದೆ ಕೇವಲ ಬೌತಿಕದಲ್ಲಿ ಮುಂದೆ ನಡೆದಿರೋದು.

ನಮ್ಮ ಜೀವಕ್ಕೆ ಎಷ್ಟು ಬೇಕೋ ಅಷ್ಟು ತಿಂದರೆ ಆರೋಗ್ಯ ಇಲ್ಲವಾದರೆ ರೋಗ. ಮಕ್ಕಳ ಮೊಮ್ಮಕ್ಕಳಕಾಲದವರೆಗೆ ಆಸ್ತಿ ಮಾಡಿಟ್ಟರೆ ಮಕ್ಕಳು ಮೊಮ್ಮಕ್ಕಳಿಗೂ ಸಾಲದ ಹೊರೆ ಇರುತ್ತದೆ. ಹೀಗಾಗಿ ಸಂಬಂಧ ಗಟ್ಟಿಯಾಗಿರದೆ ಮುರಿದು ಬೀಳುತ್ತದೆ. ಸಮಾಜದ ಋಣ ತೀರಿಸಲು ಸಮಾಜ ಸೇವೆಗೆ ದಾನಧರ್ಮಕ್ಕೆ ಹಣ ಬಳಸಿ.ನಮ್ಮ ಇಂದಿನ ಜೀವನವನ್ನು ಸ್ವಚ್ಚವಾಗಿಟ್ಟುಕೊಂಡರೆ ಉತ್ತಮ.

ಅವರವರ ಹಿಂದಿನ ಋಣ ಕರ್ಮಕ್ಕೆ ತಕ್ಕಂತೆ ಭಗವಂತ ನಡೆಸುವಾಗ ಮೊದಲೇ ಹೆಚ್ಚು ಆಸ್ತಿ ಮಾಡಿ ಇನ್ನಷ್ಟು ಋಣಭಾಧೆ ಪೋಷಕರು ಮಕ್ಕಳಿಗೆ ಹಾಕದೆ ಇದ್ದರೆ ಸ್ವಯಂ ಪ್ರಕಾಶಕರಾಗಿ ಜೀವನದಲ್ಲಿ ಸಾಧನೆ ಮಾಡಬಹುದು. ಇದಕ್ಕೆ ಸೂಕ್ತವಾದ ಶಿಕ್ಷಣ ನೀಡುವುದಷ್ಟೇ ಪೋಷಕರ ಧರ್ಮ. ಸಂಬಂಧಕ್ಕೆ ಹಣಕ್ಕಿಂತ ಉತ್ತಮ ಜ್ಞಾನ ಮುಖ್ಯ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!