spot_img
spot_img

ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಬೇಕು – ಪ್ರಾ. ಸನ್ಹಳಿ

Must Read

- Advertisement -

ಸಿಂದಗಿ: ಮಕ್ಕಳಿಗೆ ಶಿಕ್ಷಣವನ್ನು ನೀಡುವುದರ ಜೊತೆಗೆ ಸಂಸ್ಕಾರವನ್ನು ನೀಡಬೇಕು ಅಂದಾಗ ಮಾತ್ರ ಉತ್ತಮ ನಾಗರಿಕನ್ನಾಗಿ ಸಮಾಜದಲ್ಲಿ ಬದುಕು ಕಟ್ಟುಕೊಳ್ಳಲು ಸಹಾಯವಾಗುವುದು, ಕೇವಲ ಪಠ್ಯ ಚಟುವಟಿಕೆ ಮಾತ್ರವಲ್ಲ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಬೇಕು ಎಂದು ಮುಖ್ಯ ಅತಿಥಿಗಳಾದ ಆರ್, ಡಿ. ಪಾಟೀಲ ಕಾಲೇಜಿನ ರಸಾಯನ ಶಾಸ್ತ್ರದ ಅಧ್ಯಾಪಕರು ಹಾಗೂ ವಿಶ್ರಾಂತಿ  ಪ್ರಾಂಶುಪಾಲ ಸಿದ್ರಾಮಪ್ಪ ಸನ್ಹಳಿ ಹೇಳಿದರು.

ಪಟ್ಟಣದ ಹೊರವಲಯದ ಭೀಮಾ ಯುನಿರ್ವಸಲ್ ಸೆಂಟ್ರಲ್ ಶಾಲೆಯಲ್ಲಿ ನಡೆದ ಎರಡು ದಿನಗಳ ಯುವಮಹೋತ್ಸವ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ಏಳಿ ಏದ್ದೇಳಿ ಗುರಿ ಮುಟ್ಟುವವರೆಗೆ ನಿದ್ರಿಸದಿರಿ ನೀವು ಜೀವನದಲ್ಲಿ ಶ್ರಮ ಪಟ್ಟಾಗ ಮಾತ್ರ ಯಶಸ್ಸು ಸಾಧಿಸುವಿರಿ ನಿಮ್ಮ ಜೀವನದಲ್ಲಿ ಗುರುತರವಾದ ಕೆಲಸವನ್ನು ಮಾಡಿದ್ದಾಗ ಮಾತ್ರ ಸಮಾಜ ನಿಮ್ಮನ್ನು ಗುರ್ತಿಸುತ್ತದೆ  ಎಂದರು.

ನಿರ್ಣಾಯಕರಾಗಿ ಆಗಮಿಸಿದ ಸರಕಾರಿ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ರಮೇಶ ಪವಾರ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ತರಹದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಇಂತಹ ಕಾರ್ಯಕ್ರಮಗಳು ಜರಗಿದಾಗ ಮಾತ್ರ ಮಗುವಿನ ಕಲಿಕೆಗೆ ಸಹಕಾರವಾಗುವುದುವೆಂದು ಹೇಳಿದರು. 

- Advertisement -

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಮಿಮಿಕ್ರಿ, ಫುಡ್ ಕಾರ್ನಿವಾಲ್, ಮಹಾನ್ ನಾಯಕರ ವೇಷಧಾರಿ ಪಾತ್ರ, ಮಡಿಕೆ ಮೇಲೆ ಕರಕುಶಲ ಚಿತ್ರಗಳು, ಬಳಕೆಮಾಡಿದ ಬರದ ವಸ್ತುಗಳನ್ನು ಇನ್ನೊಂದು ರೀತಿಯಲ್ಲಿ ಉಪಯೋಗಮಾಡಿಕೊಳ್ಳುವುದು. ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜರುಗಿದವು. 

ಕಾರ್ಯಕ್ರಮದಲ್ಲಿ ಸಹನಿರ್ದೇಕರಾದ ಡಾ. ಎಂ.ಎಂ.ಪಡಶೆಟ್ಟಿ, ಜಿ.ಕೆ. ಪಡಗಾನೂರ, ಶ್ರೀಮಂತ್ ಮಲ್ಲೆದ, ಭೀಮಾಶಂಕರ ತಾರಾಪುರ, ಪ್ರಶಾಂತ ಕಮತಗಿ, ದತ್ತು ಮಾವೂರ, ಶರಣು ಮಾವೂರ, ಶಾಂತು ಕುಂಬಾರ ಉಪಸ್ಥಿತರಿದ್ದರು.

- Advertisement -
- Advertisement -

Latest News

ದೆಹಲಿ ಮುಖ್ಯಮಂತ್ರಿ ಯಾರಾಗುತ್ತಾರೆ ?

ಹೊಸದಿಲ್ಲಿ - ತಮ್ಮ ಆಮ್ ಆದ್ಮಿ ಪಕ್ಷದಲ್ಲಿನ ಯಾರೋ ಒಬ್ಬರು ದೆಹಲಿ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಲಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ. ಮಾಜಿ ಉಪ...
- Advertisement -

More Articles Like This

- Advertisement -
close
error: Content is protected !!
Join WhatsApp Group