spot_img
spot_img

ಮುನವಳ್ಳಿಯಲ್ಲಿ ಮಕ್ಕಳ ಕಲಿಕಾ ಹಬ್ಬ

Must Read

- Advertisement -

ಮುನವಳ್ಳಿಯ ಜೆ.ಎಸ್.ಪಿ.ಸಂಸ್ಥೆಯ ಆರ್. ಬಿ. ವೈ. ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಕಲಿಕಾ ಹಬ್ಬದ ರಥಕ್ಕೆ ಚಾಲನೆ ನೀಡಲು ಪರಮಪೂಜ್ಯ ಮುರುಘೇಂದ್ರಸ್ವಾಮೀಜಿಯವರು ಆಗಮಿಸಿದ್ದರು.

ಈ ರಥದ ಅಕ್ಕ ಪಕ್ಕಗಳಲ್ಲಿ ಸ್ವಾಮಿ ವಿವೇಕಾನಂದ, ನೆಹರೂ, ಅಂಬೇಡ್ಕರ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಕಿತ್ತೂರ ಚನ್ನಮ್ಮ, ಸೈನಿಕ, ಕಾಡು ಜನಾಂಗದ ವೇಷಭೂಷಣ, ವೀರ ಪರಂಪರೆ, ಹುಬ್ಬಳ್ಳಿ, ಕೇರಳ, ಮಂಗಳೂರು, ಮಂಡ್ಯ, ಬೆಳಗಾವಿ ಸೇರಿದಂತೆ ವಿವಿಧ ವೇಷಭೂಷಣಗಳಲ್ಲಿ ಮಕ್ಕಳು ನೆರೆದಿದ್ದರು.

- Advertisement -

ಮುನವಳ್ಳಿಯ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಮೀರಾ ಮುರನಾಳ ಸ್ವಾಮೀಜಿಯವರನ್ನು ಸ್ವಾಗತಿಸಿ ಗೌರವಿಸುತ್ತ ಕಲಿಕಾ ಹಬ್ಬದ ಕುರಿತು ಮಾಹಿತಿ ನೀಡಿದರು.

ಇದೆಲ್ಲವನ್ನು ವೀಕ್ಷಿಸಿ ರಥಕ್ಕೆ ಚಾಲನೆ  ನೀಡಿದ ಮುರುಘೇಂದ್ರ ಸ್ವಾಮೀಜಿಯವರು, “ಕಲಿಕಾ ಹಬ್ಬದಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದೊಂದು ಸಡಗರ ಸಂಭ್ರಮದ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು ಚಟುವಟಿಕೆಯಿಂದ ಕೂಡಿರುವರು. ಈ ಸಂಪ್ರದಾಯ ನಿರಂತರವಾಗಿ ಸಾಗಲಿ. ನಮ್ಮ ದೇಶದ ಸಂಸ್ಕೃತಿ ಇಲ್ಲಿ ಮೇಳೈಸಿದೆ. ಎಲ್ಲ ಮಕ್ಕಳಿಗೂ ಶುಭವಾಗಲಿ” ಎಂದು ಹೇಳಿ ರಥಕ್ಕೆ ಚಾಲನೆ ನೀಡಿದರು.

- Advertisement -

ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕುಂಭ ಹೊತ್ತು ಕೋಲಾಟ ಲೇಜಿಂ ಆಡುತ್ತ ಸಾಗತೊಡಗಿದರೆ ಗೊಂದಿ ಶಾಲೆಯಿಂದ ಆಗಮಿಸಿದ್ದ ಚಕ್ಕಡಿಯಲ್ಲಿ ರೈತನ ವೇಷದಲ್ಲಿ ಮಕ್ಕಳು ಮುಂದೆ ಸಾಗಿದ್ದರು.

ಮೆರವಣಿಗೆಯ ಸಡಗರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಾಕಿದ್ದ ವೇದಿಕೆಯವರೆಗೂ ಸಾಗಿತು. ಮಕ್ಕಳ ಈ  ಸಡಗರವನ್ನು ಬಸ್ ನಲ್ಲಿ ಸಂಚರಿಸುತ್ತಿದ್ದ ಜನರು, ರಸ್ತೆಯ ಎರಡೂ ಬದಿಗಳಲ್ಲಿ ವ್ಯಾಪಾರಿಗಳು, ಜನಸಾಗರ ನೋಡುತ್ತಿದ್ದಂತೆ ಇಲ್ಲೇನು ಜರುಗಿದೆ ಎಂದು ಸೇರಿದ ಜನ ಮಾತಾಡ್ತಿರೋದು ಕಂಡು ಬಂದಿತು. 

ಪ್ರೌಢಶಾಲೆಯ ಆವರಣಕ್ಕೆ ಬರುವಷ್ಟರಲ್ಲಿ ಪುಷ್ಪಗಳ ಸುರಿಮಳೆಯ ಮೂಲಕ ಎಲ್ಲ ತಂಡಗಳನ್ನು ಸ್ವಾಗತಿಸುವ ಕಾರ್ಯ ಜರುಗಿತು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕ ಶಿಕ್ಷಕಿಯರು ತಮ್ಮ ತಮ್ಮ ಶಾಲೆಯ ಮಕ್ಕಳ ವೇಷಭೂಷಣಗಳನ್ನು ಮಾಡಿ ಅವರಲ್ಲಿ ಸಂತೋಷವನ್ನು ಕಣ್ತುಂಬಿಕೊಳ್ಳುತ್ತಿದ್ದ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು.

ಈ ಸಂದರ್ಭದ ವೇದಿಕೆಯಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜೋಶಿ.ಎಸ್.ಎನ್, ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ,  ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ವೈ.ಬಿ.ಕಡಕೋಳ, ಸಿ.ವ್ಹಿ.ಬಾರ್ಕಿ, ಡಿ.ಎಲ್.ಭಜಂತ್ರಿ, ಬಿ.ಆರ್.ಪಿ ಗಳಾದ ಡಾ.ಬಿ.ಐ.ಚಿನಗುಡಿ, ರಾಜು ಭಜಂತ್ರಿ, ರತ್ನಾ ಸೇತಸನದಿ, ಶಿಕ್ಷಕರ ಸಂಘದ ಪ್ರತಿನಿಧಿ ಎಂ.ಎಸ್.ಹೊಂಗಲ್, ವಿವಿಧ ಶಾಲೆಗಳಿಂದ ಆಗಮಿಸಿದ್ದ ಎಸ್.ಡಿ.ಎಂ.ಸಿ  ಸದಸ್ಯರಾದ ಎಲ್.ಕೆ.ಬಾವಲತ್ತಿ, ಸುಮಾ ಪತ್ತಾರ, ಮಹಾದೇವಿ ದಂಡಿನ, ಮಹಾದೇವಿ ತಾಂದಳೆ, ಗ್ರಾಮ ಪಂಚಾಯತಿ ಸದಸ್ಯರಾದ ಉಮೇಶ ದಂಡಿನ, ಸರಸ್ವತಿ ತಾಂದಳೆ, ಪಾಲಕರ ಪ್ರತಿನಿಧಿ ಕಾವೇರಿ ಪತ್ತಾರ, ನಿವೃತ್ತ ಶಿಕ್ಷಕ ವೈ.ಎಫ್.ಶಾನುಭೋಗ ಸೇರಿದಂತೆ ಶಿಕ್ಷಕ ಶಿಕ್ಷಕಿಯರಾದ ಎಸ್.ಜಿ.ತುಡುವೇಕರ, ನದಾಫ, ಎನ್.ಎಲ್. ಕಿತ್ತೂರ, ಬಿ.ಎಚ್.ಖೊಂದುನಾಯ್ಕ, ಎಂ.ಎ.ಕಮತಗಿ, ವೈ.ಎಸ್.ಬಳಿಗಾರ, ಎನ್.ಎಸ್.ಕಾರಬಾರಿ, ವೀರಣ್ಣ ಕೊಳಕಿ, ಎನ್.ಎ.ಹೊನ್ನಳ್ಳಿ, ಎಲ್.ಎನ್.ವಿಶ್ವಜ್ಞ, ಆರ್.ಆರ್.ನಲವಡೆ, ಎಸ್.ಆರ್.ಪಾಟೀಲ, ಜೆ.ಆರ್.ಕುರುಬಗಟ್ಟಿ, ಎಂ.ಎಂ.ಬೆಳವಡಿ, ಶಾನುಭೋಗ, ಹೊನ್ನಳ್ಳಿ, ಪಿ.ಡಿ.ವಾಜಪೇಯಿ, ಕೆ.ಎಲ್.ರಾಗಾ, ಎಲ್.ಎಸ್.ನಾಗನ್ನವರ, ಎಸ್.ವ್ಹಿ.ಹಾವೇರಿ, ಪ್ರೋತ್ಸಾಹ ದಾನಿಗಳಾದ ಡಾ.ಬಸೀರ್ ಅಹ್ಮದ, ಬೈರಕದಾರ, ರಫೀಕ ಬೇಪಾರಿ,  ಸಿ.ಬಿ.ಕೋಣಿ, ಹೇಮಾವತಿ ಹೊನ್ನಳ್ಳಿ, ಸುಜಾತಾ ಹೊನ್ನಳ್ಳಿ, ವೈ.ಟಿ.ತಂಗೋಜಿ, ಭಾರತಿ ಹೋಟಿ, ಎಸ್.ವೈ.ನಿಪ್ಪಾಣಿ, ಎಂ.ಜಿ.ಹೊಸಮಠ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕ/ಶಿಕ್ಷಕಿಯರು ಉಪಸ್ಥಿತರಿದ್ದರು.

ಆರಂಭದಲ್ಲಿ ಗುರುಮಾತೆ ಏಣಗಿಮಠ ಪ್ರಾಥನಾ ಗೀತೆ ಹೇಳಿದರು. ಶಿಕ್ಷಕ ಸಿ.ಬಿ.ಕೋಣಿ ಸ್ವಾಗತಿಸಿದರು. 

ಇದೇ ಸಂದರ್ಭದಲ್ಲಿ ರಪೀಕ ಬೇಪಾರಿ ಹಾಗೂ ಡಾ.ಬಷೀರ ಅಹ್ಮದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿತರ ಪರವಾಗಿ ಮಾತನಾಡಿದ ಡಾ.ಬಷೀರ ಅಹ್ಮದ “ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಕಲಿಕಾ ಹಬ್ಬದ ವಾತಾವರಣವನ್ನು ತುಂಬಾ ಉತ್ಸಾಹ ಸಡಗರ ಸಂಭ್ರಮದಿಂದ ಆಚರಿಸುತ್ತಿರುವಿರಿ ಶಿಕ್ಷಕರು ಇಲ್ಲಿ ಮಕ್ಕಳೊಂದಿಗೆ ಮಕ್ಕಳಾಗಿರುವಿರಿ. ಇದು ನೀಡುವ ಸಂತೋಷ ಬೇರೆ ಏನೂ ನೀಡದು. ನಿಮ್ಮನ್ನೆಲ್ಲ ಕಂಡ ನನ್ನಮನಸ್ಸು ಬಾಲ್ಯಕ್ಕೆ ಕೊಂಡೊಯ್ಯುತ್ತಿದೆ. ಮಗುವಿನಲ್ಲಿ ಯಾವುದೇ ಕಲಿಕೆ ಆಗಬೇಕಿದ್ದರೂ ಅದು ಮಗುವಿಗೆ ಅನುಭವದ ಮೂಲಕ ಆಗಬೇಕು. ಅಂಕಗಳಿಗೆ ಮಾತ್ರ ಮಕ್ಕಳನ್ನು ಬೆಳೆಸದೇ ಅವರ ಪ್ರತಿಭೆಯ ಮೂಲಕ ಪಾಲಕರು ಮಕ್ಕಳನ್ನು ಬೆಳೆಸುವಂತಾಗಬೇಕು. ಮಕ್ಕಳಿಗೆ ಸದಾ ಪ್ರೋತ್ಸಾಹ  ನೀಡಿ ನನ್ನಿಂದ ಇಂತಹ ಚಟುವಟಿಕೆಗಳಿಗೆ ಏನು ಸಹಕಾರ ಬೇಕೋ ನೀಡುವೆ” ಎಂದು ತಿಳಿಸಿದರು.

ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಸಿ.ವ್ಹಿ.ಬಾರ್ಕಿ ಮಾತನಾಡಿ, “ಕಲಿಕಾ ಹಬ್ಬದಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಹಾಗೂ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಅವಕಾಶ ಒದಗುತ್ತದೆ.”ಎಂದು ಹೇಳಿದರು.

ನಿವೃತ್ತ ಶಿಕ್ಷಕ ವೈ.ಎಫ್.ಶಾನುಭೋಗ ಮಾತನಾಡಿ, “ಸರಳತೆ ಬದುಕಲ್ಲಿರಲಿ. ಕಂಠಪಾಠ ಮುಕ್ತವಾಗಿ ಮಕ್ಕಳಿಗೆ ಮಾತನಾಡುವುದನ್ನು ರೂಢಿಸಿ. ಮಕ್ಕಳಿಗೆ ಸ್ವಾತಂತ್ರ್ಯ ನೀಡಿ. ಅವರಲ್ಲಿನ ಕಲೆ ಹೊರಸೂಸುವ ಮಕ್ಕಳ ಕಲಿಕಾ ಹಬ್ಬ ನಿಜಕ್ಕೂ ಉತ್ತಮ ಕಾರ್ಯಕ್ರಮ ಎಂದು ಮಕ್ಕಳಿಗೆ ಜನಪದ ಕತೆ,ಅಕ್ಬರ್ ಬೀರಬಲ್ ಕಥೆಗಳನ್ನು ಹೇಳಿ ಜೀವನ ಮೌಲ್ಯಗಳನ್ನು ತಿಳಿಸಿದರು. ದೈಹಿಕ ಶಿಕ್ಷಕ ಭವಾನಿ ಖೊಂದುನಾಯ್ಕ ಪ್ರತಿ ಶಾಲೆಗಳಿಂದ ವಿವಿಧ ವೇಷಭೂಷಣಗಳಲ್ಲಿ ಬಂದ ಮಕ್ಕಳು ಮತ್ತು ಅದಕ್ಕೆ ಕಾರಣರಾದ ಶಿಕ್ಷಕ/ಶಿಕ್ಷಕಿಯರನ್ನು ವೇದಿಕೆಗೆ ಕರೆದು ಅವರನ್ನು ಪ್ರೋತ್ಸಾಹ ನೀಡುವ ಚಟುವಟಕೆಗೆ ನಾಂದಿ ಹಾಡಿದರು. ಮೀರಾ ಮುರನಾಳ ಕೊನೆಗೆ ವಂದಿಸಿದರು. ಎರಡು ದಿನಗಳ ಕಾಲ ಜರುಗಿದ ಕಲಿಕಾ ಹಬ್ಬ ಮಕ್ಕಳ ಮನಸ್ಸನ್ನು ಅರಳಿಸುವ ಚಟುವಟಿಕೆಗಳು ಜರುಗುವ ಮೂಲಕ ಕೊನೆಗೊಂಡಿತು.


ವೈ. ಬಿ. ಕಡಕೋಳ

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group