spot_img
spot_img

‘ತನ್ಮಯ ಪ್ರಕಾಶನ’ ಬೆಳಗಾವಿ ಅವರಿಂದ ‘ಚಿಂತನ ಚಾವಡಿ ಗೋಷ್ಠಿ’

Must Read

- Advertisement -

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಚಿಂತಕರು ಸೇರಿಕೊಂಡು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹತ್ತು ಹಲವು ವೈವಿಧ್ಯಮಯ ಚಿಂತನ ಗೋಷ್ಠಿಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ವಿಚಾರಗೋಷ್ಠಿ, ಪುಸ್ತಕ ವಿಮರ್ಶೆ, ವ್ಯಕ್ತಿ ಅಧ್ಯಯನ, ಐತಿಹಾಸಿಕ ಘಟನೆಗಳ ಮೆಲುಕು, ಇತಿಹಾಸದಲ್ಲಿ ಮರೆತುಹೋದ ಮಹಾನ್ ಸಾಧಕರ ಕುರಿತು ಚರ್ಚೆ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಚಿಂತನ ಗೋಷ್ಠಿಯ ಅಡಿಯಲ್ಲಿ ಶನಿವಾರ ದಿ.12 ರಂದು ಸಂಜೆ 4.30 ಗಂಟೆಗೆ ಆರೋಗ್ಯ ವಿಷಯ ಕುರಿತು ಚಿಂತನ ಕಾರ್ಯಕ್ರಮದಲ್ಲಿ “ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ “ಬೆಳಗಾವಿ ಶಾಖೆಯ ಕಾರ್ಯಕ್ರಮ ನಿರ್ವಹಣೆ ಅಧಿಕಾರಿಗಳಾದ ಕೃಷ್ಣ ಗುಮಾಸ್ತೆ ರವರು “ಹದಿಹರೆಯದ ಶಿಕ್ಷಣದ ಕುರಿತು ಮಾರ್ಗದರ್ಶನದಲ್ಲಿ ಎನ್. ಜಿ. ಓ. ಗಳ ಸಹಯೋಗ” ವಿಷಯದ ಕುರಿತು ಮಾತನಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ನಿವೃತ್ತ ಪ್ರಾಚಾರ್ಯರಾದ ಶೇಷಗಿರಿ ಮುತಾಲಿಕ ದೇಸಾಯಿ ರವರು ವಹಿಸಲಿದ್ದಾರೆ. ಕಾರ್ಯಕ್ರಮವು ಎಸ್. ಎನ್. ಮುತಾಲಿಕ್ ದೇಸಾಯಿ #ನಂ.6681′ ಪ್ರಾಣೇಶ್ ‘ಸೆಕ್ಟರ್ ನಂಬರ್ 10 ನಂದಿನಿ ಮಾರ್ಗ ನಂದಿನಿ ಡೈರಿ ಹತ್ತಿರ ಆಂಜನೇಯ ನಗರ ಬೆಳಗಾವಿ . ನಲ್ಲಿ ನಡೆಯಲಿದೆ. ಸಾಹಿತಿಗಳು, ಚಿಂತಕರು,ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಸ. ರಾ. ಸುಳಕೂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ಸಂಪರ್ಕಿಸಿ ಎಂ.ವೈ.ಮೆಣಸಿನಕಾಯಿ. M:9449209570.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group