spot_img
spot_img

ಸಿದ್ಧರಾಮಯ್ಯ ವ್ಯಕ್ತಿತ್ವಕ್ಕೆ ಚ್ಯುತಿ – ರಾಜಶೇಖರ ಕೂಚಬಾಳ

Must Read

ಸಿಂದಗಿ: ಪ್ರಜಾಪ್ರಭುತ್ವದ ಒಳಿತನ್ನು ಬಯಸಿದ ಅಹಿಂಸಾವಾದಿ ಮಹಾತ್ಮ ಗಾಂಧೀಜಿಯನ್ನೇ ಕೊಂದ ಸಾವರ್ಕರ  ಹೆಸರಿನ ಮೇಲೆ ದೊಂಬಿ ಎಬ್ಬಿಸುತ್ತಿರುವ ಆರ್‍ಎಸ್‍ಎಸ್ ಕಾರ್ಯಕರ್ತರು ಸಾಮಾಜಿಕ ನ್ಯಾಯದಡಿ ರಾಜಕಾರಣ ನಡೆಸಿದ ಸಿದ್ದರಾಮಯ್ಯನವರಿಗೆ ಅವಮಾನ ಮಾಡಿದ್ದು ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವಂತಾಗಿದೆ ಎಂದು  ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡ ದಲಿತರ ಕುಂದುಕೊರತೆ ಚಿಂತನಾ ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ವಿರೋಧ ಪಕ್ಷದ ನಾಯಕರಿಗೆ ಭದ್ರತೆ ನೀಡುವುದು ಸರಕಾರದ ಕರ್ತವ್ಯ, ಆದರೆ ಉದ್ದೇಶ ಪೂರ್ವಕವಾಗಿ ಭದ್ರತೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಬಿಜೆಪಿ ಸರಕಾರದ ವಿರುದ್ಧ ಅವರ ಕಾರ್ಯಕರ್ತರೇ ಪ್ರತಿಭಟನೆ ಮಾಡಿದ್ದಾರೆ. ಸರಕಾರವನ್ನು ನಡೆಸಲಾಗುತ್ತಿಲ್ಲ ಎಂದರೆ ಸರಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ ತೋರಿಸಿದಂತಾಗಿದೆ ಅಲ್ಲದೆ ಸಂವಿಧಾನ ಅವಸಾನ ಹಂತದಲ್ಲಿದೆ ಕಾರಣ ಎಲ್ಲ ದಲಿತ ಸಂಘಟನೆಗಳು ಒಂದಾಗಿ ಶಕ್ತಿ ಪ್ರದರ್ಶನ  ನೀಡಿದ್ದಾಗ ಮಾತ್ರ ಸಂವಿಧಾನದ ತತ್ವಗಳನ್ನು ಉಳಿಸಲು ಸಾಧ್ಯ ಎಂದರು.

ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ ಮಾತನಾಡಿ, ಇಡೀ ರಾಜ್ಯದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯದಂತಹ ಹಲವಾರು ಕೃತ್ಯಗಳು ನಡೆಯುತ್ತಲೇ ಇವೆ ಕಾರಣ ವಲಯ ಮಟ್ಟದಿಂದ ಎಲ್ಲ ಸಂಘಟನೆಗಳು ಒಂದಾಗಿ ಪ್ರತಿಭಟಿಸಿದಾಗ ಮಾತ್ರ ಈ ನೀತಿಯನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದ ಅವರು, ದುರುದ್ದೇಶದಿಂದ ಆರೆಸೆಸ್, ಭಜರಂಗದಳ, ಸಂಘ ಪರಿವಾರದ ಕಾರ್ಯಕರ್ತರು   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ತತ್ತಿ ಎಸೆದ ಘಟನೆಯನ್ನು ದಲಿತ ಸಂಘರ್ಷ ಸಮಿತಿ ಉಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಅಹಿಂದ ಒಕ್ಕೂಟದ ಮುಖಂಡ ಸಂತೋಷ ಹರನಾಳ ಮಾತನಾಡಿ, ಈ ಹಿನ್ನೆಲೆಯಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ಜಾತಿ-ಧರ್ಮ ಸೇರಿದಂತೆ ಯಾವುದೇ ಅನಗತ್ಯ ಗೊಂದಲಗಳಿಗೆ ಮಣೆ ಹಾಕದೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಎಂ.ಎನ್.ಪಾಟೀಲ, ತಾಲೂಕಾ ಸಂಚಾಲಕ ಪರಸುರಾಮ ಕಾಂಬಳೆ, ಹುಯೋಗಿ ತಳ್ಳೋಳ್ಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ರಾಜು ಮದರಖಾನ, ರವಿ ಆಳಹಳ್ಳಿ, ರಾಜು ದೊಡಮನಿ, ಅಂಬಾದಾಸ ಬಳಮಗಿ, ಹಣಮಂತ ಹೊನ್ನಳ್ಲೀ, ಮಂಜು ಕಾಂಬಳೆ ಸೆರಿದಂತೆ ವಿವಿಧ ಗ್ರಾಮದ ಪದಾಧಿಕಾರಿಗಳು ಇದ್ದರು.

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!