ಸಿಂದಗಿ: ಬಸವಶ್ರೀ ಫೌಂಡೇಶನ್ ಚಿಕ್ಕರೂಗಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಇವರ ಸಂಯುಕ್ತಾಶ್ರಯದಲ್ಲಿ ಮೇ. 12 ಗುರುವಾರ ಸಂಜೆ ಚಿಕ್ಕರೂಗಿ ಗ್ರಾಮದಲ್ಲಿ ನಡೆಯುವ ವಿಶ್ವ ಜ್ಯೋತಿ ಬಸವಣ್ಣನವರ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ತಾಲೂಕಿನ ಬೋರಗಿ ಗ್ರಾಮದ ಪೊಲೀಸ್ ಕಾನ್ಸ್ಟೇಬಲ್ ಮೌಲಾಲಿ ಕೆ. ಆಲಗೂರ (ಸಾಹಿತ್ಯ ಸೇವೆ) ಮತ್ತು ಪ್ರತಿಭಾನ್ವಿತ ಗಾಯಕ ಕನ್ನಡ ಕೋಗಿಲೆ ವಿನ್ನರ್ ಖಾಸೀಮ್ ಅಲಿ (ಸಂಗೀತ ಸೇವೆ) ಖ್ಯಾತ ಗಾಯಕಿ ನಾದಿರ ಬಾನು (ಸಂಗೀತ ಸೇವೆ) ಯಲ್ಲಿ ಸಲ್ಲಿಸಿದ ಸಾಧನೆ ಗುರುತಿಸಿ ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಬಸವಶ್ರೀ ಫೌಂಡೇಶನ್ ಅಧ್ಯಕ್ಷ ಹಾಗೂ ರಾಜ್ಯ ಕರವೇ ವಕ್ತಾರರಾದ ಶ್ರೀಶೈಲ ಮುಳಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Articles Like This
- Advertisement -