ಬೀದರ – ಚುನಾವಣೆಗೂ ಮೊದಲು, ಹೋಯ್ತು ಹೋಯ್ತು ಪ್ರಭು ಚೌಹಾಣ್ ಹೋಯ್ತು ಅಂದ್ರು ಆದ್ರೆ, ಜನರ ಆಶೀರ್ವಾದ ನನ್ನ ಮೇಲೆ ಇದೆ, ನಾಲ್ಕು ಬಾರಿ ಗೆದ್ದಿದ್ದೇನೆ ಎಂದು ಸರ್ಕಾರಿ ವೇದಿಕೆಯ ಮೇಲೆ ಭಗವಂತ ಖೂಬಾ ಅವರಿಗೆ ಪ್ರಭು ಚೌಹಾಣ್ ಟಾಂಗ್ ಕೊಟ್ಟರು.
ಬೀದರ್‌ನ ಔರಾದ್ ತಾಲೂಕಿನ ಹೆಡಗಾಪುರದ ಜಾನುವಾರು ತಳಿ ಸಂವರ್ಧನಾ ತರಬೇತಿ ಕೇಂದ್ರದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾಷಣದ ವೇಳೆ ಹೆಸರು ಹೇಳದೇ ತಮ್ಮದೇ ಪಕ್ಷದ ನಾಯಕ ಭಗವಂತ ಖೂಬಾಗೆ ಟಾಂಗ್ ಕೊಟ್ಟ ಚೌಹಾಣ್ ಮಾತು ಮುಂದುವರೆಸುತ್ತ, ಈಶ್ವರ ಖಂಡ್ರೆಜೀ ಒಳ್ಳೆಯ ಕೆಲಸ ಮಾಡ್ತಿದ್ದೀರಿ. ಸಚಿವ ಸಂಪುಟ ಸಭೆಯಲ್ಲಿ ಬಹಳಷ್ಟು ಕೆಲಸ ಮಂಜೂರು ಮಾಡಿಸಿದ್ದೀರಿ. ನಮ್ಮ ಔರಾದ್ ಕಡೆಗೂ ಗಮನ ಕೊಡ್ರಿ. ನಮ್ಮ ತಾಲೂಕಿನ ಕೆರೆ ತುಂಬಿಸುವ ಕೆಲಸವನ್ನ ಶೀಘ್ರವೇ ಪ್ರಾರಂಭ ಮಾಡಬೇಕು. ಕ್ಷೇತ್ರದ ಜನರ, ರೈತರ ಸಲುವಾಗಿ ಅನೇಕ ಕೆಲಸಗಳನ್ನ ಮಾಡಿದ್ದೇನೆ. ಜನರ ಆಶೀರ್ವಾದ ನನ್ನ ಮೇಲಿದ್ದು ನಾಲ್ಕು ಬಾರಿ ಗೆದ್ದಿದ್ದೇನೆ ಎಂದರು.
ಚವ್ಹಾಣ ಹೋಯ್ತು, ಚವ್ಹಾಣ ಹೋಯ್ತು ಎನ್ನುತ್ತಿದ್ದರು ಆದರೆ, ನಾನು ಎಲ್ಲೂ ಹೋಗಲ್ಲ ಎಂದು ಚವ್ಹಾಣ ಕಾಲೆಳೆದರು.
ಖಂಡ್ರೆಯವರೇ ನಿಮ್ಮ ಮನೆಗೆ ಬಹಳ ಜವಾಬ್ದಾರಿ ಸಿಕ್ಕಿದೆ. ಎಂಎಲ್‌ಎ, ಮಂತ್ರಿ, ಎಂಪಿ ಎಲ್ಲವೂ ಸಿಕ್ಕಿದ್ದು ಬೀದರ್‌ನಲ್ಲಿ ಏರ್‌ಪೋರ್ಟ್ ಪ್ರಾರಂಭಿಸಬೇಕು. ನಾನು ಜಿಲ್ಲಾ ಕಚೇರಿಗಳ ಸಂಕೀರ್ಣ ಮಾಡುವಾಗ ಎಷ್ಟು ವಿರೋಧಿಸಿದ್ರಿ ಈಗ ಮಾಡುತ್ತಿದ್ದೀರಿ. ಬಹಳಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ನಿಮಗೆ ಅಭಿನಂದನೆಗಳು ಎಂದು ವ್ಯಂಗ್ಯ ಮಾಡಿದರು.