ಬೀದರ – ವಿಧಾನ ಸಭೆಯಲ್ಲಿ ಇತ್ತೀಚೆಗೆ ಮತಾಂತರ ವಿರುದ್ಧು ದನಿಯೆತ್ತಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ವಿರುದ್ಧ ರಾಜ್ಯ ಕ್ರೈಸ್ತ ರಕ್ಷಣಾ ವೇದಿಕೆಯವರು ಪ್ರತಿಭಟನೆ ಕೈಗೊಂಡಿದ್ದರು.
ಕ್ರೈಸ್ತರು ಎಲ್ಲಾ ಧರ್ಮದವರೊಡನೆ ಸೌಹಾರ್ದದಿಂದ ಇದ್ದಾರೆ ಆದರೆ ಅವರ ಹೆಸರು ಕೆಡಿಸಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಶಾಂತಿ ಹಾಳಾಗುತ್ತಿದೆ. ನಾವು ಒತ್ತಾಯದಿಂದ ಮತಾಂತರ ಮಾಡುತ್ತಿಲ್ಲ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡಬಾರದು ಎಂದು ಈ ಸಂದರ್ಭದಲ್ಲಿ ನುಡಿದರು.
ಸ್ವತಃ ತಮ್ಮ ತಾಯಿಯೇ ಮತಾಂತರವಾಗಿರುವ ಬಗ್ಗೆ ಸದನದಲ್ಲಿ ಹೇಳಿಕೊಂಡಿದ್ದ ಶಾಸಕ ಗೊಳಿಹಟ್ಟಿ ಶೇಖರ್ ಮತಾಂತರ ವಿರುದ್ಧ ಕಾನೂನಿಗೆ ಒತ್ತಾಯ ಮಾಡಿದ್ದರು. ಇದರಿಂದ ಕೆರಳಿರುವ ಕ್ರೈಸ್ತರು ಆಗಿದ್ದು ಶೇಖರ್ ತಾಯಿ ಮತಾಂತರ ಆಗಿದ್ದು ಅವರ ತಾಯಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ