- Advertisement -
ಎನ್ ವಿ ರಮೇಶ ಅವರ ಭುವನೇಶ್ವರದಿಂದ ಭೂತಾನವರೆಗೆ ಪ್ರವಾಸ ಕಥನ ಅನಾವರಣ
ಬೆಂಗಳೂರು – ನಗರದ ಗಾಂಧಿ ಭವನದ ಕಸ್ತೂರ್ಬಾ ಸಭಾಂಗಣದಲ್ಲಿ ಹುಬ್ಬಳ್ಳಿಯ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ರಾಜಧಾನಿಯಲ್ಲಿ ಕಚುಸಾಪ ಸಂಭ್ರಮ ಆಯೋಜಿಸಲಾಗಿತ್ತು
ಶಿರಸಿಯ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಹುಬ್ಬಳ್ಳಿಯ ಕನಕದಾಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿ ಶ್ರೀಧರರಾಯಸಂ, ಮೈಸೂರಿನ ನಿವೃತ್ತ ಆಕಾಶವಾಣಿ ಅಧಿಕಾರಿ ಎನ್. ವಿ.ರಮೇಶ್, ಸಂಚಾಲಕ ಕೃಷ್ಣಮೂರ್ತಿ ಕುಲಕರಣಿ, ಶ್ರೇಯಾ ಜನ ಸೇವಾ ಫೌಂಡೇಶನ್ನ ವಿ ಜಿ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
- Advertisement -
ಪ್ರಗತಿಪರ ರೈತ ಶೇಖರ ಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಜಿ. ಯು ನಾಯಕ್ ಮಹಾತ್ಮ ಗಾಂಧಿ ಪ್ರಸ್ತುತತೆ ಬಗ್ಗೆ ಮಾತನಾಡಿದರು. ಅಮರ ಬಾಪು ಚಿಂತನ ಪತ್ರಿಕೆಯ ಡಾ ಗುರುರಾಜ ಪೋಶೆಟ್ಟಿಹಳ್ಳಿ, ಉಮಾ ರಮೇಶ್
ಭಾಗವಹಿಸಿದ್ದರು. ಹಿರಿಯ ಕವಿಯತ್ರಿ ಭಾಗ್ಯಲಕ್ಷ್ಮಿ ಮಗ್ಗೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು.