spot_img
spot_img

ಎಸ್ಎಸ್ಎಲ್ ಸಿ ಮಕ್ಕಳಿಗೆ ಕ್ಲಸ್ಟರ್ ಮಟ್ಟದ ಫೋನ್ ಇನ್ ಕಾರ್ಯಕ್ರಮ

Must Read

- Advertisement -

ಮೂಡಲಗಿ: ಕೊರೋನ ಸಾಂಕ್ರಾಮಿಕ ರೋಗದ ಅಲೆಯ ಭೀತಿಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ತಯಾರಿ ಹಾಗೂ ಸಿದ್ದತೆ ಅತ್ಯವಶ್ಯಕವಾಗಿದೆ. ಯಾವುದೇ ಕಾರಣಕ್ಕೂ ಭಯ ಪಡದೆ ವಿದ್ಯಾರ್ಥಿಗಳು ಮತ್ತು ಪಾಲಕರು ಪರೀಕ್ಷೆಗಳಿಗೆ ಹಾಜರಾಗಬೇಕೆಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.

ಅವರು ಶುಕ್ರವಾರ ಮೂಡಲಗಿಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ‘ಕ್ಲಸ್ಟರ ಮಟ್ಟದ’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೋವಿಡ್-19 ಸಂದರ್ಭದಲ್ಲಿ ಶೈಕ್ಷಣಿಕವಾಗಿ ಭೌತಿಕವಾಗಿ ತರಗತಿಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಸಮೂಹ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳನ್ನು ನಡೆಸಲಾಗಿದೆ. ಇಲಾಖೆ ಹಾಗೂ ಸರಕಾರ ಪ್ರಸಕ್ತ ಸಾಲಿನ ಪರೀಕ್ಷಾ ಪದ್ದತಿಯನ್ನು ಬದಲಿಸಿ ಪ್ರಶ್ನೆ ಪತ್ರಿಕೆಗಳನ್ನು ಎರಡಕ್ಕೆ ಕಡಿಮೆ ಮಾಡಿದ್ದಾರೆ.

ಮೂಡಲಗಿ ಶೈಕ್ಷಣಿಕ ವಲಯದಲ್ಲಿ 78 ಪ್ರೌಢ ಶಾಲೆಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 6751 ಮಕ್ಕಳು ಹಾಜರಾಗುತ್ತಿದ್ದಾರೆ. ವಲಯದ 19 ಕ್ಲಸ್ಟರಗಳಲ್ಲಿ ಫೋನ್ ಇನ್ ಕಾರ್ಯಕ್ರಮ ಜರುಗಿದೆ. ನುರಿತ ಸಂಪನ್ಮೂಲ ಶಿಕ್ಷಕರಿಂದ ಮಕ್ಕಳಿಗೆ ಪಾಲಕರಿಗೆ ದೂರವಾಣಿ ಮುಖಾಂತರ ಪರೀಕ್ಷಾ ತಯಾರಿ, ಸಂಶಯಗಳು, ಕ್ಲಿಷ್ಟಾಂಶಗಳು, ಪ್ರವೇಶ ಪತ್ರ ಪಡೆಯುವ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು. ತಾಲೂಕಾ ಹಂತದಲ್ಲಿ ವಿಶೇಷ ಫೋನ್ ಇನ್ ಕಾರ್ಯಕ್ರಮವನ್ನು ಜು.11 ರಂದು ಜರುಗಿಸಲಾಗುವದು ಎಂದು ನುಡಿದರು.

- Advertisement -

ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫೋನ್ ಇನ್ ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿರುವದು ಮೆಚ್ಚುವಂತಹದು. ಉತ್ತಮ ಫಲಿತಾಂಶ ಪಡೆಯುವಲ್ಲಿ ವಿನೂತನ ಕಾರ್ಯ ಸಹಾಯಮಾಡಲಿದೆ. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳಿಂದ ಸಾಧ್ಯವಾಗುವದು. ಪರೀಕ್ಷಾ ಕೇಂದ್ರ ಹಾಗೂ ಸುತ್ತ ಮುತ್ತ ಸಾರ್ವಜನಿಕರು ಮತ್ತು ಪಾಲಕರು ಅನಗತ್ಯವಾಗಿ ತಿರುಗದೆ, ಪರೀಕ್ಷೆಗಳು ಯಶಸ್ವಿಯಾಗಲು ಸಹಕರಿಸಬೇಕೆಂದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಟಿ.ಕರಿಬಸವರಾಜು, ಸಿಆರ್‍ಪಿ ಸಮೀರಅಹ್ಮದ ದಬಾಡಿ, ಸಿ.ಎಸ್ ಮೊಹಿತೆ, ಎಸ್.ಎಸ್. ಕಿತ್ತೂರ, ಬಿ.ಎಚ್ ಹಲ್ಯಾಳ, ಎಸ್.ಎಸ್ ಪಾಟೀಲ, ಎಸ್.ಕೆ ಕೊತ್ತಲ, ಎಸ್.ಎಸ್ ಕಮ್ಮಾರ, ಎಸ್.ಎಮ್ ಪತ್ತಾರ, ಜಿ.ಎಮ್ ನಗಾರ್ಚಿ ಹಾಗೂ ಮೂಡಲಗಿ ಕ್ಲಷ್ಟರ ವ್ಯಾಪ್ತಿಯ ನುರಿತ ಅನುಭವಿ ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group