spot_img
spot_img

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಮಂತಗಿ

Must Read

spot_img

ಹಾನಗಲ್ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂತಗಿ ತಾ ಹಾನಗಲ್ ಇಲ್ಲಿ 2022-23 ನೇ ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ದಿ. 26 ರಂದು ಆಯೋಜಿಸಲಾಗಿತ್ತು.

ಸಮ್ಮಸಗಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂತಗಿ, ಸಮ್ಮಸಗಿ,ಸಾವಿಕೇರಿ, ಉರ್ದು ಹಿರಿಯ ಪ್ರಾಥಮಿಕ ಶಾಲೆ ಮಂತಗಿ ಹಾಗೂ ಕಾಮನ ಹಳ್ಳಿ ಐದು ಶಾಲೆಗಳ ಕ್ರೀಡಾಕೂಟವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂತಗಿ ಆತಿಥೇಯ ವಹಿಸಿತ್ತು.

ಕ್ರೀಡಾಕೂಟದಲ್ಲಿ ಆತಿಥೇಯ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಗಿರೀಶ್ ಹೊಸಮನಿ ಇವರು ಅಧ್ಯಕ್ಷತೆ ವಹಿಸಿದ್ದರು.

ಪ್ರಾಸ್ತಾವಿಕ ನುಡಿಗಳನ್ನು ಸಮ್ಮಸಗಿ ಕ್ಲಸ್ಟರಿನ ಶಿಕ್ಷಣ ಸಂಯೋಜಕರಾದ ವಿ ಟಿ ಪಾಟೀಲ ಮಾತನಾಡಿ, ಕ್ರೀಡೆಯಿಂದ ಮಕ್ಕಳಲ್ಲಿ‌ ಸಮಾನತೆ,ಸಹೋದರತ್ವ ಭಾವನೆ ಬೆಳೆಯಬೇಕು ಎಂದರು.

ಕ್ರೀಡಾಕೂಟದ ಕ್ರೀಡಾ ಜ್ಯೋತಿಯು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದಿಂದ ಪ್ರಾರಂಭಿಸಿ ಕ್ರೀಡಾಂಗಣಕ್ಕೆ ತಲುಪಿತು. ಗ್ರಾಮದ ಶಿಕ್ಷಣ ಪ್ರೇಮಿಗಳಾದ ಜಾಫರಸಾಬ ಹೀರೂರು ಕ್ರೀಡಾಪಟುಗಳಿಂದ ಓಲಂಪಿಕ್ ಜ್ಯೋತಿಯನ್ನು ಸ್ವೀಕರಿಸಿದರು. ಓಲಂಪಿಕ್ ಧ್ವಜಾರೋಹಣವನ್ನು ಗಿರೀಶ್ ಹೊಸಮನಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉತ್ತಮ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಪ್ರಶಸ್ತಿ ವಿಜೇತ ಗಜೇಂದ್ರ ಕುಮಾರ್ ಎಸ್ ಅವರನ್ನು ನೂತನ ಶಿಕ್ಷಣ ಸಂಯೋಜಕರಾದ ವಿ ಟಿ ಪಾಟೀಲ, ಅನಿಲ ಕುಮಾರ ಗೋಣೆಣ್ಣನವರ ಸನ್ಮಾನಿಸಿದರು.

ಈ ಕ್ರೀಡಾಕೂಟದಲ್ಲಿ ನಿರ್ಣಾಯಕರಾಗಿ ಬಸವರಾಜ ಕರೇಪ್ಯಾಟಿ ದೈಹಿಕ ಶಿಕ್ಷಕರು,ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಐದು ಶಾಲೆಗಳ ಪಥಸಂಚಲನ ಕಾರ್ಯಕ್ರಮ ನಡೆಯಿತು. ಇಂದೂಧರ್ ವೈ ಬಿ., ಮಾಲತೇಶ ಸಕನಳ್ಳಿ, ಇಂಗಳಗಿ ದಾವಲಮಲೀಕ, ಶ್ರೀಮತಿ ರೇಣುಕಾ ಕುಂಬಾರ‌ ಶ್ರೀಮತಿ ತನುಜಾ, ಸಂತೋಷ ಜಂಪಣ್ಣವರ, ಅನಿಲ ಕುಮಾರ ಗೋಣೆಣ್ಣನವರ, ಎಸ್ ಎಸ್ ಗೌಳಿ, ಜಗದೀಶ್ ರಾಯಣ್ಣನವರ, ನಿಂಗಪ್ಪ ಸಾಳಂಕಿ, ಮಲ್ಲೇಶ ಹೊಲಬಿಕೊಂಡ ಕಾರ್ಯ ನಿರ್ವಹಿಸಿದರು.ಆತಿಥೇಯ ಶಾಲೆಯ ಶ್ರೀಮತಿ ಸುಜಾತಾ ಉಮೇಶ್ ತೊಗರ್ಸಿ, ಶ್ರೀಮತಿ ಕುಸುಮಾ ದಾಸರ, ಶ್ರೀಮತಿ ನಿರ್ಮಲಾ ಈರೋಜಿ, ಕಿರಣ್ ನಾಯ್ಕ್ ಎಲ್ಲಾ ವಿಭಾಗದ ವಿಜೇತರ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದರು.

ಕ್ರೀಡಾಕೂಟದಲ್ಲಿ ಬಡ್ತಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಜಯಲಕ್ಷ್ಮಿ ಸಿರಪಂಥಿ, ಮುಖ್ಯೋಪಾಧ್ಯಾಯರಾದ ಕೆ ಎಸ್ ಮಲ್ಲಾಡದ, ಸುಭಾಸ್ ಡೊಣಗಿ .ಸಮಾರೋಪ ಸಮಾರಂಭದ ಪೂರ್ವದಲ್ಲಿ ಹಾನಗಲ್ಲಿನ ರಾಜಕೀಯ ಧುರೀಣರಾದ ಶಿವರಾಜ ಸಜ್ಜನರ ಹಾಗೂ ರಾಜಶೇಖರ ಕಟ್ಟೆಗೌಡ್ರ ಇವರನ್ನು ಸತ್ಕರಿಸಲಾಯಿತು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ವಿಜೇಂದ್ರ ಯತ್ನಳ್ಳಿ ಹಾಗೂ ತಾಲೂಕು ಅಧ್ಯಕ್ಷರಾದ ಎಮ್ ಎಸ್ ಬಡಿಗೇರ ಇವರನ್ನು ಸತ್ಕರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ನಿರ್ಣಾಯಕರಿಗೆ ಗೌರವ ಸಲ್ಲಿಸಲಾಯಿತು. ಜೊತೆಗೆ ಕ್ರೀಡಾಕೂಟದ ದಾನಿಗಳಿಗೆ ಹಾಗೂ ಶಾಲಾ ಅಡುಗೆ ಸಿಬ್ಬಂದಿ ಹಾಗೂ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರನ್ನು ಹಾಗೂ ಶಾಲಾ ಸಿಬ್ಬಂದಿಯನ್ನು ಸತ್ಕರಿಸಲಾಯಿತು.

ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ವಿನಾಯಕ ತಳವಾರ, ಮನ್ಸೂರ್ ಖಾನ್ ಯಳವಟ್ಟಿ, ಬಸವರಾಜ ಬ್ಯಾತನಾಳ, ಕಲ್ಲನಗೌಡ ಮತ್ತಿಕಟ್ಟಿ, ಪ್ರಕಾಶ ಡೂಗನವರ ಕ್ರೀಡಾಕೂಟದ ಮೇಲುಸ್ತುವಾರಿ ವಹಿಸಿದ್ದರು. ಕ್ರೀಡಾಕೂಟದ ಎಲ್ಲಾ ಗಣ್ಯರನ್ನು ಆತಿಥೇಯ ಶಾಲೆಯ ಮುಖ್ಯೋಪಾಧ್ಯಾಯರಾದ ಮಾರುತಿ ಹಿತ್ತಲಮನಿ ಸ್ವಾಗತಿಸಿದರು. ಏಳನೇಯ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!