ಮೂಡಲಗಿಯಲ್ಲಿ ಸಿಎಂ; ಇನ್ನು ಮುಂದೆ ಕಾಂಗ್ರೆಸ್ ಗೆ ಅಡ್ರೆಸ್ ಇರೋದೇ ಇಲ್ಲ – ಯಡಿಯೂರಪ್ಪ

Must Read

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...

ಜನ ಸಾಮಾನ್ಯರ ತುರ್ತು ಸೇವೆಗಾಗಿ ಅರಭಾವಿ ಕ್ಷೇತ್ರದ ಎಲ್ಲ ಪಿಎಚ್‍ಸಿಗಳಿಗೆ ರಕ್ಷಾ ಕವಚ ವಾಹನ ಸೌಲಭ್ಯ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳ ಕಾರ್ಯ...

ಪುರಸಭೆಯ ಸಾಮಾನ್ಯ ಸಭೆ ಕರೆಯಲು ಮನವಿ

ಸಿಂದಗಿ: ಪಟ್ಟಣದ ಹಲವು ವಾರ್ಡುಗಳಲ್ಲಿ ನೀರಿನ ಸಮಸ್ಯೆ, ಗಟಾರಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಉಲ್ಬಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಾಮಾನ್ಯ ಸಭೆ...

ಮೂಡಲಗಿ – ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಕಳೆದ ಲೋಕಸಭಾ ಚುನಾವಣೆಯಲ್ಲಿ ೨೮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದು. ಇದೇ ರೀತಿ ಹೋದರೆ ಕಾಂಗ್ರೆಸ್ ಗೆ  ಅಡ್ರೆಸ್ ಇರುವುದೇ ಇಲ್ಲ ನಮ್ಮ ಸರ್ಕಾರದಿಂದ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬೆಳಗಾವಿ ಜಿಲ್ಲೆ ಒಂದು ಮಾದರಿ ಜಿಲ್ಲೆ ಮಾಡಲು ನಾನು ಅಧಿಕಾರದಲ್ಲಿದ್ದಾಗಲೇ ನಿಮ್ಮ ಜೊತೆ ಇರುತ್ತೇನೆ  ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಲೋಕಸಭಾ ಉಪಚುನಾವಣೆಯ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು.

- Advertisement -

ಸುರೇಶ ಅಂಗಡಿಯವರನ್ನು ಎಷ್ಟು ಅಂತರದಿಂದ ಗೆಲ್ಲಿಸಿದಿರೋ ಅದಕ್ಕಿಂತ ಹೆಚ್ಚು ಅಂತರದಿಂದ ಗೆಲ್ಲಿಸಬೇಕು. ಈ ಯಡಿಯೂರಪ್ಪ ಏನೇ ಹೇಳಿದರೂ ಮಾಡಿ ತೋರಿಸುತ್ತಾನೆ ಎಂದರು.

ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಬಡವರ ಕಣ್ಣೀರೊರೆಸಲು ರಾಜಕಾರಣಕ್ಕೆ ಬನ್ನಿ, ನಿಮ್ಮ ಸಲುವಾಗಿ ಅಲ್ಲ ಎಂಬ ಬಾಬಾಸಾಹೇಬ ಅಂಬೇಡ್ಕರ ಅವರ ಮಾತಿನಂತೆ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ. ಕಾರಣಾಂತರಗಳಿಂದ ನನಗೆ ಪ್ರಚಾರಕ್ಕೆ ಬರಲಾಗಿಲ್ಲ. ಈ ದೇಶವನ್ನು ಹಾಳು ಮಾಡಿದ ಕಾಂಗ್ರೆಸ್ ಪಕ್ಷದ ವಿರುದ್ಧ ನಮ್ಮ ಹೋರಾಟವಿದೆ. ನನ್ನನ್ನು ತಮ್ಮ ಮನೆ ಮಗನೆಂದು ತಿಳಿದು ನನಗೆ ಬೆಂಬಲ ಕೊಟ್ಟಿದ್ದೀರಿ ಮಂಗಲಾ ಅವರನ್ನೂ ತಮ್ಮ ಮನೆ ಮಗಳು ಎಂದು ತಿಳಿದು ಬಿಜೆಪಿಗೆ ಮತ ಹಾಕಿ ಎಂದರು.

ಲೋಕಸಭೆಯ ಬೆಳಗಾವಿ ಅಭ್ಯರ್ಥಿ ಮಂಗಲಾ ಅಂಗಡಿ ಮಾತನಾಡಿ ಮತ ಯಾಚನೆ ಮಾಡಿದರು.

ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಎಲ್ಲರ ಕಾರ್ಯಕರ್ತರ ಬೇಡಿಕೆ ಅನುಸಾರ ದಿ.ಸುರೇಶ ಅಂಗಡಿಯವರ ಪತ್ನಿ ಮಂಗಲಾ ಅಂಗಡಿಯವರಿಗೆ ಟಿಕೆಟ್ ಕೊಟ್ಟಿದ್ದೇವೆ. ವಿಶ್ವನಾಯಕ ಮೋದಿಯವರ ಪಕ್ಷವಾದ ಬಿಜೆಪಿಗೆ ಅತಿ ಹೆಚ್ಚಿನ ಮತ ನೀಡಿ ಸಹೋದರಿ ಮಂಗಲಾ ಅವರನ್ನು  ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

ಚಿತ್ರದುರ್ಗದ ಸಂಸದ ಎ ನಾರಾಯಣ ಸ್ವಾಮಿ ಮಾತನಾಡಿ, ಸಿದ್ಧರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿಯ ಮಾತೇ ಇರಲಿಲ್ಲ. ಮಾತೆತ್ತಿದರೆ ಇಂದಿರಾ ಕ್ಯಾಂಟೀನ್ ಮಾಡಿದ್ದು, ಅಕ್ಕಿ ಕೊಟ್ಟಿದ್ದು ಮಾತ್ರ ಹೇಳುತ್ತಾರೆ ಸಮಗ್ರ ಅಭಿವೃದ್ಧಿ ಯ ಮಾತೇ ಇಲ್ಲ. ಮೋದಿ ಪ್ರಧಾನಿಯಾದ ನಂತರ ಯಾವುದೇ ದೇಶ ನಮ್ಮ ಕಡೆ ಕಣ್ಣೆತ್ತಿ ನೋಡದಂತೆ ಮಾಡಿದ್ದಾರೆ. ಐವತ್ತಾರು ವರ್ಷ ದೇಶವಾಳಿದ ಕಾಂಗ್ರೆಸ್ ಗಿಂತಲೂ ಹೆಚ್ಚಿನ ಅಭಿವೃದ್ಧಿ ಮಾಡಿದ ಬಿಜೆಪಿಗೆ ಮತ ಕೇಳುವ ಹಕ್ಕಿದೆ ನಮಗೆ ಎಂದರು.

ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವ ಜಗದೀಶ ಶೆಟ್ಟರ, ಉಮೇಶ ಕತ್ತಿ, ಮಾಜಿ ಸಂಸದ ಅಮರಸಿಂಹ ಪಾಟೀಲ,  ಮೂಡಲಗಿ ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಸವಂತ ಕಮತೆ, ಪಿಎಲ್ ಡಿ ಅಧ್ಯಕ್ಷ ಅಪ್ಪಯ್ಯ ಬಡನಿಂಗಗೋಳ, ಮುತ್ತಪ್ಪ ಕುಳ್ಳೂರ,   ಅರಭಾವಿ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸುಭಾಸ ಪಾಟೀಲ ಸ್ವಾಗತಿಸಿದರು ಪ್ರಕಾಶ ಮಾದರ ವಂದಿಸಿದರು

- Advertisement -
- Advertisement -

Latest News

ಸಂಚಾರಿ ವಿಜಯ್ ಬ್ರೇನ್ ಡೆಡ್ ; ನಾಳೆ “ನಿಧನ” ರಾಗಲಿರುವ ನಟ. ವಿಚಿತ್ರ ಪರಿಸ್ಥಿತಿ

ಬೆಂಗಳೂರು - ಯುವ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್ ಅಪಘಾತದ ಕಾರಣದಿಂದಾಗಿ ಬ್ರೇನ್ ಡೆಡ್ ಆಗಿ ನಿಧನ ಹೊಂದಿದರೆಂದು ಹೇಳುವ ವಿಚಿತ್ರ...
- Advertisement -

More Articles Like This

- Advertisement -
close
error: Content is protected !!