spot_img
spot_img

ದೇಶದ ಜನರ ಬಡತನದಿಂದ ಮುಕ್ತಿ ನೀಡುವುದೆ ಸಹಕಾರಿ ಸಂಸ್ಥೆಗಳ ಮೂಲ ಗುರಿಯಾಗಲಿ -ಸತೀಶ ಕಡಾಡಿ

Must Read

- Advertisement -

ಮೂಡಲಗಿ: ದೇಶದ ಸ್ವಾತಂತ್ರಗೊಂಡು 78 ವರ್ಷಗಳು ಕಳೆದರೂ ದೇಶದಲ್ಲಿ ಸಂಪೂರ್ಣವಾಗಿ ಬಡತನ ನಿರ್ಮೂಲನೆಯಾಗಿಲ್ಲ. ದೇಶದ ಜನರ ಆರ್ಥಿಕ ಬೆಳವಣಿಗೆ ಹಾಗೂ ಬಡತನ ನಿರ್ಮೂಲನೆಯು ಸಹಕಾರ ಸಂಸ್ಥೆಗಳ ಮುಖ್ಯ ಗುರಿಯಾಗಲಿ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.

ಕಲ್ಲೋಳಿ ಪಟಣದ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ ಶ್ರೀ ಮಹಾಲಕ್ಷ್ಮೀ ಪಿಕೆಪಿಎಸ್ ಸಂಘದ ಆಡಳಿತ ಕಚೇರಿ ಮೇಲೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು “ಸಹಕಾರ್ ಸೇ ಸಮೃದ್ಧಿ ಔರ್ ಸಮೃದ್ಧಿ ಸೇ ಸಂಪೂರ್ಣತಾ” ಸೂತ್ರದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ‘ಸಹಕಾರ್ ಸೇ ಸಮೃದ್ಧಿ’ ಮಂತ್ರದ ಹಿಂದಿನ ಏಕೈಕ ಉದ್ದೇಶವೆಂದರೆ ಸಹಕಾರಿ ಸಂಘಗಳನ್ನು ಬಲಿಷ್ಠ ಸ್ತಂಭವನ್ನಾಗಿ ಮಾಡುವುದಲ್ಲದೆ ಈ ಕ್ಷೇತ್ರದ ಮೂಲಕ ದೇಶದ ಕೋಟ್ಯಂತರ ಬಡವರ ಜೀವನದಲ್ಲಿ ಸೌಲಭ್ಯ, ಸಮೃದ್ಧಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. 2047ರ ವೇಳೆಗೆ ಭಾರತ ಎಲ್ಲ ರಂಗದಲ್ಲಿಯೂ ಸ್ವಾವಲಂಬನೆಯನ್ನು ಸಾಧಿಸಬೇಕು ಮತ್ತು ಆತ್ಮನಿರ್ಭರ ಭಾರತ ನಿರ್ಮಾಣವಾಗಬೇಕಾದರೇ ದೇಶದ ಜನರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವುದು ಮುಖ್ಯವಾಗಿದೆ. ಆ ದಿಶೆಯಲ್ಲಿ ಸಹಕಾರ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಿವೆ ದೇಶದ ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಗಾಗಿ ಸಹಕಾರ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕು ಎಂದರು.

- Advertisement -

ಸಹಕಾರಿಯ ಉಪಾಧ್ಯಕ್ಷ ಶ್ರೀಶೈಲ ತುಪ್ಪದ, ನಿರ್ದೇಶಕರಾದ ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಸಹದೇವ ಹೆಬ್ಬಾಳ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಅಡಿವೆಪ್ಪ ಕುರಬೇಟ, ತುಕಾರಾಮ ಪಾಲ್ಕಿ, ಪ್ರಭು ಕಡಾಡಿ, ಕಾಡೇಶ ಗೊರೋಶಿ, ಹಿರಿಯ ಶಾಖಾ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ, ಶಂಕರ ಕೌಜಲಗಿ ಮುಖ್ಯ ಕಾರ್ಯನಿವಾಹಕ ಶಿವಾನಂದ ಬಡಿಗೇರ, ಸೇರಿದಂತೆ ಅನೇಕ ಸಹಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group