ಜೂ.24ರಂದು ಸಾಮೂಹಿಕ ಉಪನಯನ

0
156

ಮೈಸೂರು -ನಗರದ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿರುವ (ಮೊಗರಹಳ್ಳಿ ಸಮೀಪ) ಸಾಧನಹಳ್ಳಿ ಸಪ್ತರ್ಷಿ ಗುರುಕುಲ ಸೇವಾಕೇಂದ್ರದಲ್ಲಿ ಜೂ.24ರಂದು ಸೋಮವಾರ ಬೆಳಿಗ್ಗೆ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅಂದು ಬೆಳಿಗ್ಗೆ ಮಹಾಸುದರ್ಶನ ಹೋಮ, ಗೃಹದೇವತಾ ಆರಾಧನೆ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥಪ್ರಸಾದ ವಿನಿಯೋಗ ನಂತರ ಶ್ರೀಮಠದ ಸಂಸ್ಥಾಪಕರಾದ ಶ್ರೀ  ಅಭಿನವ ರಾಮಾನುಜ ಜೀಯರ್ ಅವರಿಂದ ಆಶೀರ್ವಚನ ಏರ್ಪಡಿಸಲಾಗಿದೆ.

ಜೂ.23ರಂದು ಭಾನುವಾರ ಉದಕಶಾಂತಿ ಪೂಜೆ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ 9481319111 ಅಥವಾ ಆಶ್ರಮದ ವ್ಯವಸ್ಥಾಪಕರಾದ ರಂಗನಾಥ್ 8861573934 ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.