ಬೆಳಗಾವಿ – ಡಾ.ಫ. ಗು. ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾತೇಂಶ ನಗರ ಬೆಳಗಾವಿಯಲ್ಲಿ ದಿನಾಂಕ 28. 4.2024ರಂದು ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಜರುಗಿತು
ಆರಂಭದಲ್ಲಿ ಶಂಕರ ಗುಡಸ ಪ್ರಾರ್ಥನೆ ನಡೆಸಿಕೊಟ್ಟರು. ಶರಣ ಶರಣೆಯರ ವಚನ ವಿಶ್ಲೇಷಣೆ ಮಾಡಿದರು.ಹಡಪದ ಅಪ್ಪಣ್ಣವರ ಕುರಿತು ಪ್ರೊ. ಬಿ.ಬಿ.ಮಠಪತಿಯವರು ಮಾತನಾಡುತ್ತಾ ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು,ಇವರು ಹಡಪದ ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟರೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದು ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರೆಗೆ ಕನ್ನಡಿ ಆಗಿದೆ ಎಂದರೆ ತಪ್ಪಾಗಲಾರದು ಅಂದು ಹಡಪದ ಸಮಾಜದವರು ಬೆಳಿಗ್ಗೆ ಎದುರಿಗೆ ಬಂದರೆ ಏನೊ ಆಗುತ್ತದೆ ಎಂಬ ಮೂಡನಂಬಿಕೆಯನ್ನ ಹೋಗಲಾಡಿಸುವುದಕ್ಕಾಗಿ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನು ಮಾಡಿಸಿದರು. ಇವರ ಧರ್ಮಪತ್ನಿ ಲಿಂಗಮ್ಮ ಸಹ ಮಹಾನ್ ವಚನಗಾರ್ತಿಯಾಗಿದ್ದರು ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರೊಫೆಸರ್ ಶ್ರೀಕಾಂತ ಶಾನವಾಡರು, ಶರಣ ಆದಯ್ಯನವರ ವಚನ ವಿಶ್ಲೇಷಣೆ ಮಾಡಿದರು, ಆನಂದ ಕಕಿ೯,ವಿ.ಕೆ.ಪಾಟೀಲ್, ಬಾಳಗೌಡ ದೊಡಬಂಗಿ,ಬಿ.ಪಿ. ಜೇವಣಿ,ಸುವರ್ಣ ಗುಡಸ,ಇತರ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು ವಿರೂಪಾಕ್ಷ ದೊಡ್ಡಮನಿ,ಶಿವಪುತ್ರಯ್ಯ ಪೂಜಾರ ಬಸವರಾಜ ಬಿಜ್ಜರಗಿ,ಮಹಾತೇಂಶ ಇಂಚಲ,ಲಕ್ಷ್ಮಣ ಕುಂಬಾರ ಭಾಗವಹಿಸಿದ್ದರು, ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು ಸಂಗಮೇಶ ಅರಳಿ ನಿರೂಪಿಸಿದರು