spot_img
spot_img

ಸ್ಮಶಾನ ಭೂಮಿ ಅತಿಕ್ರಮಣ ತೆರವಿಗೆ ಸರ್ವೇ ಕಾರ್ಯ ಆರಂಭ

Must Read

spot_img
- Advertisement -

ಸಿಂದಗಿ: ಪಟ್ಟಣದ ಮಲಘಾಣ ರಸ್ತೆಯಲ್ಲಿರುವ ಸಾರ್ವಜನಿಕ ಸ್ಮಶಾನ(ಜನಿವಾರ ಧಾರಿಗಳ) ಭೂಮಿಗೆ ಹೋಗುವ ಕೂಡುದಾರಿಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಖೊಟ್ಟಿ ಕಾಗದ ಪತ್ರಗಳನ್ನು ಸೃಷ್ಟಿಸಿ ವಿಲೇವಾರಿ ಮಾಡಿ ಕಟ್ಟಡ ನಿರ್ಮಿಸುವ ತವಕದಲ್ಲಿದ್ದು, ಸದರಿ 5 ಎಕರೆ, 32 ಗುಂಟೆ ಜಾಗೆಯ ಮೋಜನಿ-ಭೂಮಾಪನವನ್ನು ತಹಸೀಲ್ದಾರ್ ಕಛೇರಿ ಸಿಬ್ಬಂದಿಯಿಂದ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ನಗರ ಸುಧಾರಣಾ ಸಮಿತಿ ಅಧ್ಯಕ್ಷ ಹಾಗೂ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಪಟ್ಟಣದ ಸರ್ವೆ ನಂ 125 ಕ್ಷೇತ್ರ 5 ಎಕರೆ 32 ಗುಂಟೆ ಸಾರ್ವಜನಿಕರ ರುದ್ರಭೂಮಿ ಇದ್ದು ಅದು ಈಗ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಣ ಮಾಡಿದ್ದಾರೆ ಅಲ್ಲಿ ಉಳಿದಿರುವುದೇ ಬರೀ 2ರಿಂದ 3 ಏಕರೆ ಜಾಗಾ ಮಾತ್ರ. ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿಗಳಿಗೆ ಅಲ್ಲದೆ ಪೌರಾಡಾಡಳಿತ ಸಚಿವರ ಗಮನಕ್ಕೆ ತರಲಾಗಿದ್ದು ಅತಿಕ್ರಮಣವಾದ ಜಾಗೆಯನ್ನು ಸರ್ವೇ ಕಾರ್ಯ ಕೈಕೊಂಡು ಸೂಕ್ತ ಕ್ರಮ ಜರುಗಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ ಅದರ ಹಿನ್ನೆಲೆಯಲ್ಲಿ ಭೂ ಮಾಪನ ಇಲಾಖೆ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು ಇದರಲ್ಲಿ ಎಂತವರೇ ಇರಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸ್ಮಶಾನ ಜಾಗೆಗೆ ಸೂಕ್ತ ರಕ್ಷಣೆ ನೀಡಬೇಕು ಮೊದಲು ಸ್ಮಶಾನಕ್ಕೆ ಹೋಗುವ ದಾರಿಯೇ ಅತಿಕ್ರಮಣವಾಗಿದ್ದು ಸರಿಯಾಗಿ ಮೋಜನಿ ಮಾಡಿ ಹದ್ದು ಬಸ್ತ ಮಾಡಿ ಬಾರ್ಡರ ಗುರುತಿಸಿ ಎಲ್ಲ ಸಮುದಾಯಗಳ ಸ್ಮಶಾನ ಸೂಕ್ತ ರಕ್ಷಣೆಯಾಗಬೇಕು ಎಂದು ಆಗ್ರಹಿಸಿದರು.

ಮುಂಬೈ ಹೈಕೊರ್ಟ ನ್ಯಾಯವಾದಿ ಶಂಬುಲಿಂಗ ಕಕ್ಕಳಮೇಲಿ ಮಾತನಾಡಿ, ಸಾರ್ವಜನಿಕರ ರುದ್ರಭೂಮಿಯನ್ನು ಅತಿಕ್ರಮಣಕಾರರಿಂದ ರಕ್ಷಣೆಗೆ ಸಾರ್ವಜನಿಕರು, ಪುರಸಭೆ, ಪತ್ರಕರ್ತರು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ವೀಕ್ಷಣೆ ಮಾಡಿ ಸ್ಮಶಾನ ಭೂಮಿ ಅಭಿವೃದ್ಧಿ ಮತ್ತು ನಿರ್ವಹಣೆ ಗೊಸ್ಕರ ಒಂದು ಸಮಿತಿ ರಚನೆ ಮಾಡುವಂತೆ ಸಲಹೆ ನೀಡಿದರು.

- Advertisement -

ನಿವೃತ್ತ ಕೃಷಿ ಅಧಿಕಾರಿ ಮಹಾದೇವ ಗಾಯಕವಾಡ ಮಾತನಾಡಿ, ಆಸ್ತಿ 125 ರ 5 ಎಕರೆ 32 ಗುಂಟೆ ಸ್ಮಶಾನ ಜಾಗೆ ಎಂದು ಸರಕಾರದ ದಾಖಲೆಯಲ್ಲಿದ್ದು ಆದರೆ ಅದು ಅತಿಕ್ರಮಣವಾಗಿ ಸ್ಮಶಾನಕ್ಕೆ ಹೋಗಲು ದಾರಿಯೇ ಇಲ್ಲದಂತಾಗಿದೆ ಇದರ ಬಗ್ಗೆ ಹಲವಾರು ಬಾರಿ ಜಿಲ್ಲೆಯ ಹಾಗೂ ತಾಲೂಕು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಅದರ ಪರಿಣಾಮ ಭೂ ಮಾಪನ ಇಲಾಖೆಗೆ ನಿರ್ದೇಶನ ನೀಡಲಾಗಿದ್ದು ಸರಿಯಾಗಿ ಮೋಜನಿ ಮಾಡಿ ಪಿಟಿಶೀಟ್ ತಯಾರಿಸಿ ಸ್ಥಳ ಗುರುತಿಸಿ ಅಳತೆ ಕಲ್ಲು ಹಾಕಿ ತಂತಿ ಬೇಲಿ ನಿರ್ಮಿಸುವಂತೆ ಒತ್ತಾಯಿಸಿದರು.

ಯೋಜನಾ ಆಯೋಗದ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಪಟ್ಟಣದಲ್ಲಿ ಮೊದಲಿನಿಂದ ಮೂರು ಸ್ಮಶಾನಗಳಿದ್ದು ಅವುಗಳಿಗೆ ಉತಾರವೂ ಇದೆ ಆದರೆ ಅದರ ನಿರ್ವಹಣೆಯಲ್ಲಿ ಪುರಸಭೆಯ ನಿರ್ಲಕ್ಷದ ಕೊರತೆಯಿಂದ ಸ್ಮಶಾನ ಜಾಗೆಗಳು ಅತಿಕ್ರಮಣವಾಗಿದ್ದು ಅದರ ಭೂ ಮಾಪನವಾಗಬೇಕು ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮನವಿ ಇಡಲಾಗಿದ್ದು ಅವುಗಳ ರಕ್ಷಣೆಗೆ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಭೂಮಾಪನ ಇಲಾಖೆಯ ತುಂಗಳ, ಕಂದಾಯ ಇಲಾಖೆಯ ಎ.ಐ.ಮಕಾನದಾರ, ಗ್ರಾಮ ಲೆಕ್ಕಾದಿಕಾರಿ ರಾಮನಗೌಡ ರಾಂಪುರ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ವಿಪ್ರ ಸಮಾಜದ ಅವಧೂತ ಕುಲಕರ್ಣಿ, ಪಿ.ಎಸ್. ಕುಲಕರ್ಣಿ ನಿವೃತ್ತ ಶಿಕ್ಷಕರು, ಶ್ರೀಶೈಲ ಯಳಮೇಲಿ, ಗೊಂಧಳಿ ಸಮಾಜದ ರಾಮಚಂದ್ರ ಕಾಂಬಳೆ, ವಿಶ್ವಕರ್ಮ ಸಮಾಜದ ದಯಾನಂದ ಪತ್ತಾರ, ಬಾಬು ಗಾಯಕವಾಡ, ರವಿ ಗಾಯಕವಾಡ, ರಜಪೂತ ಸಮಾಜದ ಗಜಾನನ ತಿವಾರಿ, ಕಿಸಾನ ರಜಪೂತ, ಕಲಾಲ ಸಮಾಜದ ರಾಜು ಕಲಾಲ, ಮಾರುತಿ, ಅನೀಲ, ಸುನೀಲ ಸೇರಿದಂತೆ ನೂರಾರು ಜನರು ಇದ್ದರು.

- Advertisement -
- Advertisement -

Latest News

ಬೀದರ್ ನಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ

ಬೀದರ - ನಗರದಲ್ಲಿ ಈ ದಿನ ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತರು ಸದ್ದು ಮಾಡಿದ್ದು ಏಕಕಾಲಕ್ಕೆ ಮೂರು ಕಡೆ ದಾಳಿ ಮಾಡಿ ಹಲವು ದಾಖಲೆ ವಶಪಡಿಸಿಕೊಂಡಿದ್ದಾರೆ. ಪಶು ವಿವಿಯಲ್ಲಿ ಕೆಲಸ...
- Advertisement -

More Articles Like This

- Advertisement -
close
error: Content is protected !!
Join WhatsApp Group