Homeಸುದ್ದಿಗಳುಶಾಲೆಗಳ ಪ್ರಗತಿಗೆ ಸಮುದಾಯದ ಸಹಕಾರ ಅವಶ್ಯಕ : ಬಸವರಾಜ ಸುಣಗಾರ

ಶಾಲೆಗಳ ಪ್ರಗತಿಗೆ ಸಮುದಾಯದ ಸಹಕಾರ ಅವಶ್ಯಕ : ಬಸವರಾಜ ಸುಣಗಾರ

ಬೆಳಗಾವಿ – ಪ್ರಾಥಮಿಕ ಶಿಕ್ಷಣದಲ್ಲಿ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಹಲವಾರು ಉಪಯುಕ್ತ ಯೋಜನೆ ಗಳನ್ನು ಜಾರಿಗೆ ತರುತ್ತಿದೆ ಅವುಗಳ ಸಮರ್ಪಕ ಅನುಷ್ಠಾನದಿಂದ ವಿದ್ಯಾರ್ಥಿಗಳ ಸರ್ವಾoಗೀಣ ಪ್ರಗತಿ ಸಾಧ್ಯ ಎಂದು ಶಾಲಾ ಮುಖ್ಯಾಧ್ಯಾಪಕರಾದ ಬಸವರಾಜ ಸುಣಗಾರ ಹೇಳಿದರು.

ಅವರು ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಯಲ್ಲಿ ಸನ್ 2021-22 ನೆಯ ಸಾಲಿನ ಎರಡನೆಯ ಶಾಲಾ ಸುಧಾರಣಾ ಹಾಗೂ ಮೇಲುಸ್ತುವಾರಿ ಸದಸ್ಯರ, ಪಾಲಕರು ಪೋಷಕರ ಸಭೆಯಲ್ಲಿ ಮಾತನಾಡಿದರು.

ಪ್ರಾಥಮಿಕ ಶಾಲೆಗಳ ಪ್ರಗತಿಗೆ ಸಮುದಾಯದ ಸಹಾಯ ಸಹಕಾರದ ಅವಶ್ಯಕತೆಯಿದೆ ತಾವು ಕಲಿತ ಶಾಲೆಗಳಲ್ಲಿಯ ಕುಂದು ಕೊರತೆ ಗಳ ನಿವಾರಣೆ, ಹಾಗೂ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಸಮಾಜದ ಮುಂಚೂಣಿ ವ್ಯಕ್ತಿಗಳು ದೇಣಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡುವಮೂಲಕ ಶ್ರಮಿಸಬೇಕೆಂದು ಬಸವರಾಜ ಸುಣಗಾರ ಹೇಳಿದರು.

ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020, ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನ,ನಮ್ಮ ಶಾಲಾಭಿವೃದ್ಧಿಯಲ್ಲಿ, ಕಲಿಯಿರಿ ಕಳಿಸಿರಿ ಈ ವಿಷಯ ಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.

ಶಿಕ್ಷಕಿ ಶ್ರೀಮತಿ ಶಾಂತಾ ಲಾಡ್ ರವರು ಕಾರ್ಯಕ್ರಮದ ಪ್ರಸ್ತಾವನೆ ಹಾಗೂ ಹೊಸ ಶಿಕ್ಷಣ ನೀತಿ ಕುರಿತು ವಿವರಿಸಿದರು.

ಸಭೆಯಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಮಾರುತಿ ಮಗದುಮ್ಮ, ಸದಸ್ಯರಾದ ಬಸವರಾಜ ತಳವಾರ, ಸೇರಿದಂತೆ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಶೋಭಾ ತಳವಾರ, ಶಿಕ್ಷಕಿಯರಾದ ಕೆ ಬಿ ತೋರಣಗಟ್ಟಿ, ಜಿ ಎಮ್ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group