spot_img
spot_img

ಸೋಯಾ ಬೆಳೆಗೆ ಶಂಕು ಹುಳು: ಹೊಲಕ್ಕೆ ಭೇಟಿ ನೀಡಿದ ಈಶ್ವರ ಖಂಡ್ರೆ

Must Read

ಬೀದರ – ಸೋಯಾ ಬೆಳೆಗೆ ಶಂಕು ಹುಳುವಿನ ಸಮಸ್ಯೆಯ ಸುಳಿಗೆ ಸಿಲುಕಿದ ರೈತರ ಹೊಲಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭೇಟಿ ನೀಡಿ ರೈತರ ಅಳಲು ಆಲಿಸಿದರು.

ಶರಣ ನಾಡು ಎಂದೇ ಪ್ರಖ್ಯಾತಿ ಪಡೆದ ಬಸವಣ್ಣನ ಕರ್ಮಭೂಮಿ ಬೀದರನಲ್ಲಿ ಬಸವನ ಹುಳು (ಶಂಕು ಹುಳುವಿನ) ಕಾಟ ಶುರುವಾಗಿದ್ದು ರೈತರು ಹೈರಾಣ ಆಗಿದ್ದಾರೆ.

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ, ಶಿವಣಿ, ಲಖನಗಾವ್ ಹೊಲದಲ್ಲಿ ದಾಳಿ ಮಾಡಿದ ಬಸವ ಹುಳುವನ್ನು ತೋರಿಸಿದ ರೈತರು, ಮೊದಲು ಮಳೆಯಾಗಿ ಬಿತ್ತನೆ ತಡವಾಯಿತು, ಈಗ ಸಾಲ ಸೋಲ ಮಾಡಿ ಬಿತ್ತನೆ ಮಾಡಿದರೆ ಈ ಶಂಕು ಹುಳುವಿನ ಕಾಟ ಆರಂಭವಾಗಿದೆ. ಈಗಾಗಲೆ ಭಾತಂಬ್ರಾ ಗ್ರಾಮದಲ್ಲಿ ಶೇ. ೮೦ ರಷ್ಟು ಸೋಯಾ ಬೆಳೆ ನಾಶವಾಗಿದೆ. ಕೃಷಿ ಅಧಿಕಾರಿಗಳು ಈ ಹುಳುವಿನ ನಾಶಕ್ಕೆ ರೈತರಿಗೆ ಔಷಧ ಉಚಿತವಾಗಿ ನೀಡಬೇಕು ಹಾಗೂ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಸವನ (ಶಂಕು) ಹುಳುವಿನ ಹಿನ್ನೆಲೆಯಲ್ಲಿ ನೋಡಿದರೆ ಈ ಶಂಕು ಹುಳ ಒಬ್ಬ ರೈತರ ಹೊಲದಲ್ಲಿ ದಾಳಿ ಮಾಡಿದರೆ ಒಂದು ದಿವಸದಲ್ಲಿ ಒಂದು ಎಕರೆ ಬೆಳೆದ ಸೋಯಾ ತಿಂದು ಸಂಪೂರ್ಣ ಹೊಲ ಖಾಲಿ ಮಾಡುತ್ತದೆ. ಒಬ್ಬ ರೈತನ ಬೆಳೆ ತಿಂದು ಮುಗಿಸಿದ ಮೇಲೆ ಇನ್ನೊಂದು ಹೊಲದಲ್ಲಿ ದಾಳಿ ಮಾಡಿ ಆ ರೈತನ ಹೊಲ ಸಂಪೂರ್ಣ ಖಾಲಿ ಮಾಡುತ್ತದೆ. ಇಷ್ಟೊಂದು ಅಪಾಯಕಾರಿ ಯಾಗಿದ್ದು ಈ ಶಂಕು ಹುಳುವಿನ ದಾಳಿಗೆ ಬೆಚ್ಚಿ ಬಿದ್ದು ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ರೈತರ ಹೈರಾಣ ಆಗಿದ್ದಾರೆ ಎಂದು ಹೇಳಬಹುದು.

ರೈತರು ಸಾಲ ಮಾಡಿ ಸೋಯಾ ಬೀಜ ಖರೀದಿ ಮಾಡಿದರೆ, ಬೆಳೆ ಬೆಳೆಯುವ ಮುಂಚೆಯೇ ಈ ಶಂಕು ಹುಳು ದಾಳಿ ಮಾಡುತ್ತಿದೆ. ತಾಲೂಕಿನಾದ್ಯಂತ ಬಸವನಹುಳು ಕಾಟದಿಂದ ತೀವ್ರವಾಗಿ ಹಾನಿಗೊಳಗಾದ ಭಾತಂಬ್ರಾ, ಶಿವಣಿ, ಲಖನಗಾವ್ ಭಾಗದ ರೈತರ ಹೊಲಗಳಿಗೆ ಕೃಷಿ ಅಧಿಕಾರಿಗಳ ಜೊತೆ ಈಶ್ವರ ಖಂಡ್ರೆ ಭೇಟಿ ನೀಡಿ ನಾಶವಾಗಿರುವ ಬೆಳೆಗಳ ಪರಿಶೀಲನೆ ಮಾಡಿದರು.

ಬಿತ್ತನೆ ಮಾಡಿದ ಬೆಳೆಗಳಾದ ಸೋಯಾಬೀನ್, ಹೆಸರು, ಉದ್ದು, ತೊಗರಿ ಬೆಳೆಗಳು ಸಂಪೂರ್ಣವಾಗಿ ನಷ್ಟವಾಗಿದ್ದನ್ನು ರೈತರ ಈ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮನಸ್ಸಿಗೆ ತುಂಬಾ ನೋವಾಗಿದೆ ಎಂದ ಖಂಡ್ರೆ, ಬಸವನ ಹುಳು ಕಾಟದಿಂದ ವ್ಯಾಪಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಬೀದರ್ ಜಿಲ್ಲಾಧಿಕಾರಿ ಮತ್ತು ಕೃಷಿ ಇಲಾಖೆಯ ಆಯುಕ್ತ ಶರದ್ ಅವರನ್ನು ಹೊಲದಿಂದಲೇ ಕರೆ ಮಾಡಿ ಬಸವನ ಹುಳುಗಳ ಸಮಸ್ಯೆ ಬಗೆಹರಿಸಲು ಬೀದರ್ ಜಿಲ್ಲೆಯಲ್ಲಿ ತುರ್ತಾಗಿ ಮುಂಗಾರು ಬಿತ್ತನೆಯ ಸಮೀಕ್ಷೆ ನಡೆಸಿ ನಷ್ಟವಾಗಿರುವ ಬೆಳೆಗಳ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದರು.

ಕೂಡಲೇ ಕೃಷಿ ಇಲಾಖೆ ಎಚ್ಚತ್ತುಕೊಂಡು ಹಾನಿಗೊಂಡ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಮುಂದೆ ಆಗಬಹುದಾದ ಅನಾಹುತಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ರೈತ ಮುಖಂಡರು.


ವರದಿ: ನಂದಕುಮಾರ ಕರಂಜೆ,ಬೀದರ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!