“ನಮ್ಮ ಭೂಮಿ ನಮ್ಮ ಭವಿಷ್ಯ” ವಿಷಯದ ಕುರಿತು ಕಾರ್ಯಾಗಾರ

Must Read

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ಹೊಸಪೇಟೆಯ ಫ್ರೌಢ ದೇವರಾಯ ಇನ್ಸ್ಟಿಟ್ಯೂಟ್ ಆಫ್ ಟಕ್ನಾಲಜಿಯಲ್ಲಿ, (ಪಿ.ಡಿ.ಆಯ್.ಟಿ) ನಮ್ಮ ಭೂಮಿ ನಮ್ಮ ಭವಿಷ್ಯ ಶೀರ್ಷಿಕೆಯಡಿ “Adoption of Eco-friendly, Cost effective Technologies in Managing Municipal Solid and Liquid Waste” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಪ್ರೊಫೆಸರ್ ಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 150 ಕ್ಕೂ ಹೆಚ್ಚು ಜನರು ಭಾಗವಹಿದ್ದರು. ಮಲಪ್ಪನಗುಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ 5 ಗ್ರಾಮಗಳ ಘನ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ, ಕಸದಿಂದ ರಸ ತೆಗೆಯುತ್ತಿರುವ 5 ಜನ ಮಹಿಳೆಯರು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಒಂದು ವಿಶೇಷತೆಯಾಗಿತ್ತು.

ಪಿ.ಡಿ.ಆಯ್.ಟಿಯ ಪ್ರಾಚಾರ್ಯ ಡಾ. ರೋಹಿತ್ ಯು, ವಿಜಯನಗರ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಅಶೋಕ ತೋಟದ, ಭಾಲಚಂದ್ರ ಜಾಬಶೆಟ್ಟಿ, ಶರಣಬಸಪ್ಪ ಪಟ್ಟೇದ, ಸಿವಿಲ್ ಎಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಿವಕೇಶವ ಕುಮಾರ ರವರು ವೇದಿಕೆ ಮೇಲಿದ್ದರು.

ಶಕ್ತಿನಗರದ ಸೆಂಟರ್ ಫಾರ್ ಆ್ಯಶ್ ಯುಟಿಲೈಜೇಶನ್ ಟೆಕ್ನಾಲಜಿ ಆ್ಯಂಡ ಎನ್ವಿರಾನ್ಮೆಂಟ್ ಕಂಜರ್ವೇಶನ ಸಂಸ್ಥೆಯ ಸಿ.ಇ.ಓ. ಶರಣಬಸಪ್ಪ ಪಟ್ಟೇದರವರು ತ್ಯಾಜ್ಯ ನಿರ್ವಹಣಾ ವ್ಯವಸ್ಥಾಪನೆಯ ರಾಯಚೂರು ಮಾದರಿ ಕುರಿತು ವಿಷಯ ಮಂಡಿಸಿದರು.

ತರಬೇತಿ ಸಲಹೆಗಾರ ಬಾಲಚಂದ್ರ ಜಾಬಶೆಟ್ಟಿ “ನಗರ ತ್ಯಾಜ್ಯ (ಘನ ಮತ್ತು ದ್ರವ) ಗಳ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಹಾಗೂ ಕ್ರಯ ಪರಿಣಾಮಕಾರಿ ತಂತ್ರಜ್ಞಾನಗಳ ಅಳವಡಿಕೆ” ಕುರಿತು ಉಪನ್ಯಾಸ ನೀಡಿದರು ಹಾಗೂ ತ್ಯಾಜ್ಯ ನಿರ್ವಹಣೆ ಯಲ್ಲಿ ಬಳಸುವ (ಜೈವಿಕ ತಂತ್ರಜ್ಞಾನ) ಸೂಕ್ಷ್ಮಾಣುಗಳ ಅಭಿವೃದ್ದಿಪಡಿಸುವ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಮಲಪ್ಪನಗುಡಿಯಲ್ಲಿ ವೈಜ್ಞಾನಿಕ ರೀತಿಯ ತ್ಯಾಜ್ಯ ನಿರ್ವಹಣೆಯ ಕೈಂಕರ್ಯದಲ್ಲಿ ತೊಡಗಿರುವ ಮಹಿಳೆಯರನ್ನು ಕಾಲೇಜ ವಿದ್ಯಾರ್ಥಿನಿಯರು ಪುಷ್ಪಗುಚ್ಛ ನೀಡಿ ಗೌರವಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group