ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ರವರಿಗೆ ಸೆ.26 ಭಾನುವಾರ ಮಧ್ಯಾಹ್ನ 3.00ಕ್ಕೆ ನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ಕೊರಮ ಸಮಾಜದ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮಾಜಿ ಕೇಂದ್ರ ಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ವಸತಿ ಸಚಿವ ವಿ ಸೋಮಣ್ಣ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ , ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮುಖ್ಯ ಅತಿಥಿಗಳಾಗಿ ಭಾವಹಿಸುವರು, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ.ಕಾರ್ಯದರ್ಶಿ ನಾಡೋಜ ಡಾ.ವೂಡೇ.ಪಿ ಕೃಷ್ಣ ಉಪಸ್ಥಿತಿಯಲ್ಲಿ ಹಿರಿಯ ವಕೀಲ , ಸಾಹಿತ್ಯ ಚಿಂತಕ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ ಅಭಿನಂದನಾ ನುಡಿಗಳನ್ನಾಡುವರು ಹಾಗೂ ಅಮರಾವತಿ ಬಸಪ್ಪ ಭಜಂತ್ರಿ ತಂಡ ದಿಂದ ಶಹನಾಯ್ ವಾದನ ಪ್ರಸ್ತುತಿ ಇದೆ ಎಂದು ಆಯೋಜಕರಾದ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಜಿ.ವಿ.ಕೃಷ್ಣ ಪ್ರಸಾದ್ ತಿಳಿಸಿರುತ್ತಾರೆ.
ವಿವರಗಳಿಗೆ: 98453 66559