spot_img
spot_img

ಅವಿಶ್ವಾಸ ಗೊತ್ತುವಳಿ ಸೋಲಿಸಿದ ಸದಸ್ಯರಿಗೆ ಮನಗೂಳಿ ಅಭಿನಂದನೆ

Must Read

- Advertisement -

ಸಿಂದಗಿ: ಕಳೆದ ಜ. 1 ರಂದು ಕೆಲ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸುವಂತೆ ಮನವಿ ಮಾಡಿದ್ದರು.ದಿ. 24 ರಂದು ಸಭೆ ನಡೆಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಅವಿಶ್ವಾಸಕ್ಕೆ ಸಹಿ ಹಾಕದೇ ಸಹಕಾರ ನೀಡಿದ ಎಲ್ಲ 23 ಜನ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣದ ತಮ್ಮ ಸ್ವಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಸ್‍ಎಫಸಿ ಹಾಗೂ 15 ನೇ ಹಣಕಾಸು ಯೋಜನೆಯಡಿ ರೂ 1ಕೋಟಿ 80 ಲಕ್ಷ ಮಾತ್ರ ಅನುದಾನ ಬಂದಿದ್ದು ಅದರಲ್ಲಿ ಕಳೆದ 10 ತಿಂಗಳ ಅಧಿಕಾರಾವಧಿಯಲ್ಲಿ ಅಭಿವೃದ್ದಿ ಕಾಮಗಾರಿಗಳು ವಿಳಂಬವಾಗಿದ್ದು ಅದಕ್ಕೆ ನಗರಾಭಿವೃದ್ಧಿ ಸಚಿವ ಎಂಟಿಬಿ ನಾಗರಾಜ ಅವರಲ್ಲಿ ರೂ 7 ಕೋಟಿ ಮತ್ತು 5 ಕೋಟಿ ಅನುದಾನ ಒದಗಿಸಿಕೊಡುವಂತೆ ಮನವಿ ಮಾಡಿಕೊಳ್ಳಲಾಗಿದ್ದು ಇನ್ನೂವರೆಗೂ ಅನುಮೋದನೆ ದೊರೆಯದ ಕಾರಣ ಇನ್ನೊಂದು ಬಾರಿ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಪಟ್ಟಣದ ಸ್ಲಂ ನಿವಾಸಿಗಳಿಗೆ 8 ಎಕರೆ ಜಾಗೆಯಲ್ಲಿ 389 ಜನರಿಗೆ ಸೂರು ಒದಗಿಸಿಕೊಡಲು ಸ್ಲಂ ಬೋರ್ಡನಿಂದ ನೀಲಿ ನಕ್ಷೆ ತಯಾರಿಸಲಾಗಿದ್ದು ಮತ್ತು ಅಂತರಗಂಗಿ ರಸ್ತೆಯಲ್ಲಿ 189 ಜನರಿಗೆ ಹಕ್ಕುಪತ್ರ ವಿತರಣೆ ಮಾಡುವ ಕಾರ್ಯ ಬಾಕಿ ಉಳಿದಿದೆ. ಅಮೃತ ನಿರ್ಮಲ ಯೋಜನೆಯಡಿ ರೂ. 1 ಕೋಟಿ, ನಗರೋತ್ಥಾನ ಯೋಜನೆಯಡಿ ರೂ. 10 ಕೋಟಿ ಅನುದಾನ ಬಿಡುಗಡೆಯಾಗಿದೆ ಕ್ರಿಯಾ ಯೋಜನೆ ಸಿದ್ದಪಡಿಸಿ ಅಭಿವೃದ್ಧಿಗೆ ಮುಂದಾಗುತ್ತೇವೆ ಅಲ್ಲದೆ ಅದರಲ್ಲಿ ರೂ 4.50 ಲಕ್ಷ ಒಳಚರಂಡಿ ಯೋಜನೆಗೆ ವಂತಿಗೆ ಹಣ ಸಂದಾಯ ಮಾಡಬೇಕಾಗಿದ್ದು ಇನ್ನುಳಿದ ಹಣದಲ್ಲಿ ಮೆಗಾ ಮಾರ್ಕೆಟ್‌ ಮಾಡಲು ಅನುದಾನ ಬಳಕೆ ಮಾಡಬೇಕಾಗಿದೆ ಎಂದರು.

ಜಿಲ್ಲಾ ಯೋಜನಾ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿದ್ದ ಕ್ಷೇತ್ರಗಳಿಗೆ ಸರಕಾರ ಹೆಚ್ಚು ಹೆಚ್ಚು ಅನುದಾನ ಬಿಡುಗಡೆ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ ಪುರಸಭೆಗಳಿಗೆ ರೂ. 25 ಕೋಟಿ ಅನುದಾನ ಬಿಡುಗಡೆ ಮಾಡಿದೆ ಆದರೆ ಸಿಂದಗಿ ಕ್ಷೇತ್ರಕ್ಕೆ ಬಿಜೆಪಿ ಶಾಸಕರಿದ್ದರೂ ಕೂಡ ಅಧ್ಯಕ್ಷರು ಬೇರೆ ಪಕ್ಷದವರಾಗಿದ್ದ ಕಾರಣಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಸರಕಾರ ಮಲತಾಯಿ ಧೋರಣೆ ತಾಳುತ್ತಿರುವುದು ವಿಪರ್ಯಾಸವೇ ಸರಿ ಎಂದರು.

- Advertisement -

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗೊಲ್ಲಾಳಪ್ಪಗೌಡ ಪಾಟೀಲ ಮಗಣಗೇರಿ, ಸಂತೋಷ ಹರನಾಳ, ಮಹ್ಮದಪಟೇಲ ಬಿರಾದಾರ, ಪುರಸಭೆ ಉಪಾದ್ಯಕ್ಷ ಹಾಸೀಂ ಅಳಂದ, ಸದಸ್ಯರಾದ ಶಾಂತವೀರ ಬಿರಾದಾರ, ಭೀಮು ಕಲಾಲ, ಶ್ರೀಶೈಲ ಬೀರಗೊಂಡ, ಸದಸ್ಯರ ಪ್ರತಿನಿಧಿ ಹಬೀಬ ಮುಲ್ಲಾ ಇದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group