spot_img
spot_img

ರಾಷ್ಟ್ರ ಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಸತ್ಕಾರ

Must Read

spot_img
- Advertisement -

ಮೂಡಲಗಿ: ಅನುಪಯೋಗಿ ಕೃಷಿ ಉಪಕರಣಗಳನ್ನು ಬಳಸಿ ನೆಲಗಡಲೆ (ಶೇಂಗಾ) ಕೊಯ್ಲು ಯಂತ್ರವನ್ನು ತಯಾರಿಸಿ ಜು.29 ಮತ್ತು 30 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ  ಕೇಂದ್ರ ಶಿಕ್ಷಣ ಸಚಿವಾಲಯವು ಆಯೋಜಿಸಿದ ರಾಷ್ಟ್ರ ಮಟ್ಟದ ಅಟಲ್ ಲ್ಯಾಬ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ  ಭಾಗವಹಿಸಿದ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ವಿದ್ಯಾವರ್ಧಕ ಸಂಘಧ ಜಿ.ಎನ್.ಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲೆಯ ಶಿಕ್ಷಕ ಮತ್ತು  ವಿದ್ಯಾರ್ಥಿಗಳನ್ನು ಸಂಸ್ಥೆಯಿಂದ ಸತ್ಕರಿಸಿ ಗೌರವಿಸಿದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಯಾದವಾಡ ಗ್ರಾಮಕ್ಕೆ ಆಗಮಿಸಿದ ಶಾಲೆಯ 9 ನೇ ತರಗತಿ  ವಿದ್ಯಾರ್ಥಿಗಳಾದ  ಪವನ ಬಿ.ಕೊಲ್ಲಾಪುರ ಮತ್ತು ಬಸವರಾಜ ಆರ್.ಕೌಜಲಗಿ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ನೀಡಿದ ಶಿಕ್ಷಕ ಎಸ್.ಎಸ್.ಬಳೂರಗಿ ವಿದ್ಯಾರ್ಥಿ ಸೂರಜ್ ಇತಾಪಿ ಅವರನ್ನು ಯಾದವಾಡ ಗ್ರಾಮದಲ್ಲಿ  ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ಶಾಲೆಯಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ವೇದಿಕೆಗೆ ಬರಮಾಡಿಕೊಂಡು ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ಬಿ.ನ್ಯಾಮಗೌಡರ ಅವರು ಮತ್ತು ಶಿಕ್ಷಕರು ವೃಂದದವರು ಸತ್ಕರಿಸಿ ಗೌರವಿಸಿದರು. 

ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡರ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸದಾ ಕಲಾ ಪ್ರೋತ್ಸಾಹ ನೀಡಲಾಗುವುದು ಎಂದ ಅವರು ದೆಹಲಿಯಲ್ಲಿ ವಿಜ್ಞಾನ ಪ್ರದರ್ಶನ ನೀಡಿರುವುದರಿಂದ ಸಂಸ್ಥೆಯ ಕೀರ್ತಿಯನ್ನು ವಿದ್ಯಾರ್ಥಿಗಳು ಹೆಚ್ಚಿಸಿದ್ದಾರೆ ಎಂದರು.

- Advertisement -

ಪ್ರಾಚಾರ್ಯ ಎಸ್.ಎಸ್.ಕಣಬೂರ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿದರು. 

ಇದೇ ಸಂದರ್ಭದಲ್ಲಿ ಸಂಸ್ಥೆಯ 1997-98 ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಿದರು. 

ಸಮಾರಂಭದಲ್ಲಿ ವೇದಿಕೆಯಲ್ಲಿ ಹಿರಿಯ ಶಿಕ್ಷಕ ಜಿ.ಎಚ್.ಕಾಂಬಳೆ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಸ್ಮೆ, ವಾಯ್.ಎಚ್.ಚಲವಾದಿ, ಜಿ.ವಿ.ಹವಾಲ್ದಾರ, ಬಿ.ಎಮ್.ಮುಲ್ಲಾ, ಐ.ಎಚ್.ಪಠಾಣ, ಪ್ರಭಾವತಿ ಕಣವಿ. ಸ್ವಪ್ನಾ ಮೆಳವಂಕಿ, ಎಚ್.ಎಸ್.ಮಾದರ, ವಿದ್ಯಾರ್ಥಿನಿ ಪ್ರತಿನಿಧಿ ಲಕ್ಷ್ಮೀ ಕೌಜಲಗಿ, ಮತ್ತು ಸಂಸ್ಥೆಯ ಅಂಗ ಸಂಸ್ಥೆಗಳ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

- Advertisement -

ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ.ಎಸ್.ಕಲ್ಯಾಣಿ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group