spot_img
spot_img

ಕೌಜಲಗಿಯಿಂದ ಮೂಡಲಗಿವರೆಗೆ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಧ್ವಜಗಳು!

Must Read

ಧ್ವಜಾರೋಹಣ ಕ್ಕಿಂತಲೂ ಹೆಚ್ಚಿಗೆ ಚುನಾವಣಾ ಪ್ರಚಾರವಾದ ಪಾದಯಾತ್ರೆ

ಮೂಡಲಗಿ – ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದ್ದು ಅರಭಾಂವಿ ಕಾಂಗ್ರೆಸ್ ಪಕ್ಷದ ವತಿಯಿಂದ ಕೌಜಲಗಿಯಿಂದ ಮೂಡಲಗಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.

ನಗರದ ಕಲ್ಮೇಶ್ವರ ವೃತ್ತದಲ್ಲಿ ಸಂಪನ್ನಗೊಂಡ ಪಾದಯಾತ್ರೆಯಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಮಾತು ಆರಂಭಿಸಿದ ಅವರು, ಸಾವಿರಾರು ಜನ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟಿದ್ದಾರೆ.

ಜಾತ್ಯತೀತತೆ, ಪ್ರಜಾಪ್ರಭುತ್ವ, ಸಮಾನತೆ ಇವೇ ಆದರ್ಶಗಳನ್ನಿಟ್ಟುಕೊಂಡು ಸಂಗ್ರಾಮ ಹಮ್ಮಿಕೊಳ್ಳಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಆದರೆ ಈಗಿನ ಬಿಜೆಪಿ ಆಡಳಿತದಲ್ಲಿ ಇಡಿ, ಐಟಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ಧಾರ್ಮಿಕ ಸ್ವಾತಂತ್ರ್ಯ ಇಲ್ಲ, ರಾಜಕೀಯ ಸ್ವಾತಂತ್ರ್ಯ ಇಲ್ಲ, ಸಂವಿಧಾನವನ್ನು ಮೂಲೆಗೆ ಒತ್ತಿ ಮನುಸ್ಮೃತಿ ಕಲಿಸಲಾಗುತ್ತಿದೆ. ಬುದ್ಧಿಜೀವಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತಿನಲ್ಲಿಯೆ ಮುಂಬರುವ ವಿಧಾನ ಸಭಾ ಚುನಾವಣಾ ಪ್ರಚಾರ ಆರಂಭಿಸಿದಂತೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಯಾರಿಗೂ ಸ್ವಾತಂತ್ರ್ಯ ಇಲ್ಲವಾಗಿದೆ. ಆ ಕುರಿತು ಎಚ್ಚರಿಸುವುದು ಈ ಪಾದಯಾತ್ರೆಯ ಉದ್ದೇಶ. ಬಿಜೆಪಿ ಸಿದ್ಧಾಂತ ವೆಂದರೆ ಜಾತಿ ಒಡೆದು ಆಳುವುದು ಮಾತ್ರ, ಕಾಂಗ್ರೆಸ್ ಪಕ್ಷ ಮಾತ್ರ ನಾವೆಲ್ಲರೂ ಒಂದೇ ಎನ್ನುತ್ತದೆ. ಎಲ್ಲರೂ ಬಿಜೆಪಿಯ ದುರಾಡಳಿತವನ್ನು ಅನುಭವಿಸಿದ್ದೀರಿ. ಆದ್ದರಿಂದ ಬಿಜೆಪಿಯ ಮಾತನ್ನು ಯಾರೂ ಕೇಳಬಾರದು. ಅದಕ್ಕೆ ಬೆಂಬಲ ನೀಡಬಾರದು ಎಂದು ನುಡಿದರು.

ಪಾದಯಾತ್ರೆಯ ವಾಹನದಲ್ಲಿ ಹಾಗೂ ಕಾರ್ಯಕರ್ತರ ಕೈಯಲ್ಲಿ ರಾಷ್ಟ್ರಧ್ವಜ ದ ಜೊತೆ ಕಾಂಗ್ರೆಸ್ ಪಕ್ಷದ ಚಿಹ್ನೆ ಇರುವ ಧ್ವಜ ಪ್ರದರ್ಶನಗೊಂಡಿದ್ದು ವಿಪರ್ಯಾಸಕರ.

ದೇಶದ ಸ್ವಾತಂತ್ರ್ಯ, ಸ್ವಾಭಿಮಾನ, ಮಹನೀಯರ ತ್ಯಾಗ ಬಲಿದಾನಗಳನ್ನೇ ಹೆಚ್ಚಾಗಿ ಪ್ರಚಾರ ಮಾಡಬೇಕಾದ ವೇದಿಕೆಯಲ್ಲಿ ಅವುಗಳ ನೆಪದಲ್ಲಿ ಬರೀ ಬಿಜೆಪಿ ಸರ್ಕಾರವನ್ನೇ ಟೀಕಿಸಲು ಪಾದಯಾತ್ರೆ ಹಮ್ಮಿಕೊಂಡಂತೆ ಭಾಸವಾಗುತ್ತಿತ್ತು.

ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್ ಆರ್ ಸೋನವಾಲಕರ, ಶಿವಾನಂದ ಕರಡಿ, ವಿ ಪಿ ನಾಯಕ ಮುಂತಾದವರು ಮಾತನಾಡಿದರು.

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!