ಬೀದರ – ಈ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಮೊದಲು ತೊಲಗಬೇಕು. ಇದು ಮುಂದವರೆದರೆ ದೇಶಕ್ಕೆ ಗಂಡಾಂತರ ಗ್ಯಾರಂಟಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣ ಸ್ವಾಮಿ ಹೇಳಿದರು.
ಬೀದರನಲ್ಲಿ ಪತ್ರಕರ್ತ ರೊಡನೆ ಮಾತನಾಡಿದ ಅವರು, ಯಾವುದೇ ಘಟನೆ ನಡೆದಾಗ ಗೃಹ ಸಚಿವರು ಏನೂ ಆಗೇ ಇಲ್ಲವೆಂಬಂತೆ ಕ್ಲೀನ್ ಚಿಟ್ ಕೊಟ್ಟು ಬಿಡುತ್ತಾರೆ ಅಂಥ ವ್ಯವಸ್ಥೆಯನ್ನೇ ಸರ್ಕಾರ ಹುಟ್ಟು ಹಾಕಿದೆ ಎಂದರು.
ಅಲ್ಲಿ ಪಿಎಸ್ಐ ಒಬ್ಬರು ಸತ್ತು ಬಿದ್ದಿದ್ದರೆ ಅದು ಆತ್ಮಹತ್ಯೆ ಅಂತಾರೆ, ನಾಗಮಂಗಲ ಗಲಭೆಯ ಬಗ್ಗೆ ತನಿಖೆಯೇ ಆಗಿಲ್ಲ ಆಗಲೇ ಇದು ಕೋಮುಗಲಭೆ ಅಲ್ಲ ಅಂತಾರೆ, ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರ ಹೆಸರಿದ್ದರೂ ಗೃಹ ಸಚಿವರು ಎಸ್ಐಟಿ ಹಾಗೆ ಹೇಳಿಲ್ಲ ಅಂತಾರೆ…ಅಂದರೆ ಮೊದಲೇ ಕ್ಲೀನ್ ಚಿಟ್ ಕೊಟ್ಟುಬಿಡುವ ವ್ಯವಸ್ಥೆ ರಾಜ್ಯ ಸರ್ಕಾರದಲ್ಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಾಗಮಂಗಲ ಗಲಭೆಯಲ್ಲಿ ೨೦ ಕ್ಕೂ ಹೆಚ್ಚು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಅಲ್ಲಿ ಬಾಂಗ್ಲಾದೇಶದವರು ಬಂದು ನೆಲೆಸಿದ್ದಾರೆ, ಎಸ್ ಡಿಪಿಐ ನವರ ಕಾರ್ಯಗಳು ನಡೆದಿವೆ, ಆದರೂ ಈ ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಅವರಿಗೆ ಬೆಂಬಲ ಕೊಡುತ್ತಾರೆ. ಈ ಕಾಂಗ್ರೆಸ್ ಮೊದಲು ತೊಲಗಬೇಕು ಇದು ಮುಂದುವರೆದರೆ ದೇಶಕ್ಕೆ ಗಂಡಾಂತರ ಗ್ಯಾರಂಟಿ ಎಂದು ನಾರಾಯಣ ಸ್ವಾಮಿ ಪ್ರತಿಪಾದಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ