spot_img
spot_img

ಗುತ್ತಿಬಸವಣ್ಣ ಏತ ನೀರಾವರಿ ಜಾಕ್ವೆಲ್‍ಗೆ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಭೇಟಿ

Must Read

ಸಿಂದಗಿ: ಮತಕ್ಷೇತ್ರದ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸುವ ಸಲುವಾಗಿ ಜಾಕ್ವೆಲ್‍ಗೆ 8 ಮೋಟಾರಗಳ ಅಳವಡಿಕೆಗೆ ಟೆಂಡರ ಕರೆಯಲಾಗಿದೆ ಜುಲೈ ಮೊದಲ ವಾರದಲ್ಲಿ ನೀರು ಹರಿಸುವುದಾಗಿ ಶಾಸಕ ರಮೇಶ ಭೂಸನೂರ ಅವರು ತಾಂಬಾ ಗ್ರಾಮದಲ್ಲಿ ನಡೆದ ರೈತರ ಧರಣಿ ಸತ್ಯಾಗ್ರಹಕ್ಕೆ ಭೇಟಿ ನೀಡಿ ಸುಳ್ಳು ಹೇಳಿಕೆ ನೀಡಿ ರೈತರಿಗೆ ವಂಚನೆ ಮಾಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.

ಮತಕ್ಷೇತ್ರದ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸುವ ಜಾಕ್ವೆಲ್‍ಗೆ ರೈತರೊಂದಿಗೆ ಭೇಟಿ ನೀಡಿ ಮಾತನಾಡಿ, ಜುಲೈ ಮೊದಲ ವಾರದಲ್ಲಿ ನೀರು ಹರಿಸುವುದಾಗಿ ಹೇಳಿದಂತೆ ಅಧಿಕಾರಿಗಳನ್ನು ವಿಚಾರಿಸಲಾಗಿ ಗುತ್ತಿಗೆದಾರರಿಗೆ ಜೂನ 4 ರಂದು ವರ್ಕ್ ಆರ್ಡರ್ ನೀಡಿದ್ದಾರೆ ಇಲ್ಲಿ ಎಲ್ಲ ಕೆಲಸಗಳು ಪೆಂಡಿಂಗ್ ಇವೆ ಅದ ಕಾರಣ ಅದು ಅಗಷ್ಟ್ ಅಂತ್ಯದವರೆಗೆ ನೀರು ಹರಿಸುವುದು ಸಾಧ್ಯತೆಯಿಲ್ಲ ಎಂದು ಹೇಳಿದಾಗ ಕಳೆದ ಒಂದು ವರ್ಷದಿಂದ ಎಲ್ಲೆಡೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜುಲೈ 30 ರೊಳಗಾಗಿ ಎಲ್ಲ ಕೆನಾಲಗಳಿಗೆ ನೀರು ಹರಿಸುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ನೋಡಿದರೆ ಯಾವುದು ಸರಿಯಾಗಿಲ್ಲ ಸರಕಾರ ಹಾಗೂ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ ಜುಲೈ 30 ರೊಳಗಾಗಿ ಕಾಲುವೆಗಳಿಗೆ ನೀರು ಹರಿಸಲು ಗಡುವು ನೀಡುತ್ತೇವೆ ಅಗಷ್ಟ ಮೊದಲ ವಾರದಲ್ಲಿ ಸಿಂದಗಿಯಲ್ಲಿ ಬೃಹತ್ ಪತ್ರಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು

ಸಂದರ್ಭದಲ್ಲಿ ರೈತ ಮುಖಂಡ ಎಚ್. ಬಿ. ಚಿಂಚೊಳ್ಳಿ ಮಾತನಾಡಿ, ಅಲ್ಲಿ ಯಾವುದೇ ಕಾರ್ಯ ಪ್ರಗತಿಯಲ್ಲಿ ಇಲ್ಲ ಆದರೆ ಸಿಂದಗಿಯ ಸ್ಥಳೀಯ ಶಾಸಕ ರಮೇಶ ಭೂಸನೂರ ರವರು ಜುಲೈ 15 ರಿಂದ 30 ರೊಳಗಾಗಿ ನೀರು ಹರಿಸುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ. ಅವರು ತಿಳಿಸಿದ ಹಾಗೆ ಜುಲೈ 30 ರೊಳಗಾಗಿ ನೀರು ಹರಿಸದೆ ಇದ್ದರೆ ಗುತ್ತಿಬಸವಣ್ಣ ಏತ ನೀರಾವರಿ ಸಂಬಂಧ ಪಟ್ಟ ರೈತರೊಂದಿಗೆ ಸಿಂದಗಿ ನಗರದಲ್ಲಿ ಹಮ್ಮಿಕೊಳ್ಳುತ್ತಿರುವ ಬೃಹತ್ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗುರಣ್ಣಗೌಡ ಬಿರಾದಾರ, ಸಂಗನಗೌಡ ಪಾಟೀಲ,ದಾವಲಸಾಬ ಬಳೆಗಾರ, ರವಿರಾಜ ದೇವರಮನಿ, ಶಿವಣ್ಣ ಕೊಟಾರಗಸ್ತಿ, ನಿಂಗನಗೌಡ ಪಾಟೀಲ, ಖಾದಿರ ಬಂಕಲಗಿ, ಭೀಮನಗೌಡ ಬಿರಾದಾರ, ರಾಮಚಂದ್ರ ರಾಠೋಡ, ಸಲೀಮ ಜಮನಾಳ, ಮಹಾದೇವ ರಾಠೋಡ, ವಡೆಯರ ಮುತ್ತ್ಯಾ ಡವಲಾರ, ಅಜೀಜ ಭಗವಾನ ಹಾಗೂ ಇತರರು ಇದ್ದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!