spot_img
spot_img

ವಾರ್ಡ್ ನಂ. ೯ ಉಪಚುನಾವಣೆಯಲ್ಲಿ ಅಭ್ಯರ್ಥಿಯ ಅಪಹರಣ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನೆ

Must Read

- Advertisement -

ಮೂಡಲಗಿ – ಬೆಳಗಾವಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಇಲ್ಲಿ ಯಾರ ಹೆಸರು ಹೇಳುವ ಅಗತ್ಯವಿಲ್ಲ. ಇಲ್ಲಿ ಯಾರಿಗೂ ಸ್ವಾತಂತ್ರ್ಯ ವಿಲ್ಲ. ಇಲ್ಲಿ ಸಾಹುಕಾರಿ ವ್ಯವಸ್ಥೆಯ ಗುಲಾಮಗಿರಿ ಮಾಡುತ್ತ ಬದುಕಬೇಕಾಗಿದೆ. ಚುನಾವಣಾ ಅಧಿಕಾರಿಗಳು ಸಹಿತ ಒಂದೇ ಪಕ್ಷಕ್ಕೆ ಸೀಮಿತವಾಗಿದ್ದಾರೆ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಆರೋಪಿಸಿದರು.

ಇದೇ ಡಿ. ೧೫ ರಂದು ಮೂಡಲಗಿಯ ವಾರ್ಡ್ ನಂ.೯ ರ ಉಪಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಹೋದ ಕಾಂಗ್ರೆಸ್ ಅಭ್ಯರ್ಥಿಯನ್ನು ಬಿಜೆಪಿಯವರು ಅಪಹರಿಸಿದ್ದಾರೆಂದು ಆರೋಪಿಸಿ ಇಲ್ಲಿನ ಕಲ್ಮೇಶ್ವರ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಡಿ.೧೫ ಕರಾಳ ದಿನ. ಯಾಕೆಂದರೆ ಒಬ್ಬ ಅಭ್ಯರ್ಥಿಯ ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನು ಇಲ್ಲಿನ ಬಿಜೆಪಿ ಕಾರ್ಯಕರ್ತರು ಕಸಿದುಕೊಂಡಿದ್ದಾರೆ. ಅವರಿಗೆ ತಾವು ಸೋಲುತ್ತೇವೆ ಎಂಬ ಭೀತಿಯಿದ್ದು ಚುನಾವಣೆಯಲ್ಲಿ ಹೋರಾಡುವ ಎದೆಗಾರಿಕೆಯಿಲ್ಲದೆ ಹೀಗೆ ಮಾಡಿದ್ದಾರೆ ಎಂದರು.

- Advertisement -

ಮೂಡಲಗಿಯು ತಾಲೂಕಾಗಲು ಎಲ್ಲರೂ ಹೋರಾಟ ಮಾಡಿದ್ದಾರೆ. ನಾವೂ ಹೋರಾಡಿದ್ದೇವೆ. ಆದರೆ ನಮ್ಮ ಆಶೋತ್ತರಗಳು ಹುಸಿಯಾಗುತ್ತಿವೆ. ಜನರು ಭಯದಿಂದ ಬದುಕಬೇಕಾಗಿದೆ ಎಂದರು.

ಕಾಂಗ್ರೆಸ್ ನಾಯಕರ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿರುವ ರಮೇಶ ಜಾರಕಿಹೊಳಿ ಬಂಧನ ಆಗಬೇಕು ಎಂದು ಒತ್ತಾಯಿಸಿದ ಅರವಿಂದ ಅವರು, ಬೆಳಗಾವಿಯಲ್ಲಿ ಎಮ್ ಇಎಸ್ ಪುಂಡರು ನಡೆಸಿದ ದಾಂಧಲೆಯನ್ನು ಖಂಡಿಸಿದರು. ಗಡಿ ಹೋರಾಟದಲ್ಲಿ ರಾಯಣ್ಣನ ಮೂರ್ತಿ ಭಂಗಗೊಳಿಸಿದ್ದು ಖಂಡನೀಯ. ಈ ದುಷ್ಕರ್ಮಿಗಳಿಗೆ ಶಿಕ್ಷೆಯಾಗಲೇಬೇಕು. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ಆಗಬೇಕು ನಮ್ಮ ಬೇಡಿಕೆಗಳನ್ನು ಸರ್ಕಾರ ಆಲಿಸಬೇಕು ಎಂದರು.

- Advertisement -

ಕಾರ್ಯಕರ್ತ ರವಿ ಮೂಡಲಗಿ ಮಾತನಾಡಿ, ಜನರೇ ತಮ್ಮ ನಾಯಕನನ್ನು ಆರಿಸುವ ವ್ಯವಸ್ಥೆಯನ್ನು ಡಾ.ಅಂಬೇಡ್ಕರ್ ಅಂಥವರು ಸಂವಿಧಾನದಲ್ಲಿ ಬರೆದಿದ್ದಾರೆ. ಆದರೆ ದಿ.೧೫ ರಂದು ಮೂಡಲಗಿಯ ಪುರಸಭೆಯ ೯ ನೇ ವಾರ್ಡಿನ ಉಪ ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಲು ಹೋದ ಕಾಂಗ್ರೆಸ್ ಅಭ್ಯರ್ಥಿಯನ್ನು ಬಿಜೆಪಿ ಬೆಂಬಲಿಗರು ಅಪಹರಿಸಿ ಅಪಚಾರ ಎಸಗಿದ್ದಾರೆ ಎಂದರು.

ಚುನಾವಣೆಯಲ್ಲಿ ಎಲ್ಲರಿಗೂ ಸ್ಪರ್ಧಿಸುವ ಹಕ್ಕು ಇರುತ್ತದೆ ಆದರೆ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಸೋಲಿನ ಭಯದಿಂದ ಕಾಂಗ್ರೆಸ್ ಅಭ್ಯರ್ಥಿಯ ಅಪಹರಣ ಮಾಡಿದರು ಅದನ್ನು ಖಂಡಿಸಲು ನಾವು ಇಂದು ಇಲ್ಲಿ ಸೇರಿದ್ದೇವೆ ಎಲ್ಲಾ ಪ್ರಜೆಗಳು ಇಂಥ ದಬ್ಬಾಳಿಕೆಯನ್ನು ಖಂಡಿಸಬೇಕು ಎಂದರು.

ಗಿರೀಶ ಕರಡಿ ಮಾತನಾಡಿ, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯ ಹತ್ತಿರ ಬೇರೆಯವರೆ ಇದ್ದರು.ಕಾಂಗ್ರೆಸ್ ಪಕ್ಷದವರಿಗೆ ಕೇವಲ ಐದು ಜನರಿಗೆ ಅವಕಾಶ ಮಾಡಿಕೊಟ್ಟರೆ, ಬಿಜೆಪಿಯವರಿಗೆ ಐವತ್ತು ಜನರಿಗೆ ಅವಕಾಶ ಮಾಡಿಕೊಟ್ಟು ಚುನಾವಣಾಧಿಕಾರಿ ಪಕ್ಷಪಾತ ಎಸಗಿದ್ದಾರಡ. ಅಭ್ಯರ್ಥಿಯನ್ನು ಅಪಹರಿಸಿದರೂ ಚುನಾವಣಾಧಿಕಾರಿಗಳು ಏನೂ ಮಾತನಾಡಲಿಲ್ಲ ಇದು ಎಷ್ಟು ಸರಿ ? ಈ ಬಗ್ಗೆ ನಾವು ಮೇಲಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದರು.

ಹಣಮಂತಗೌಡಾ ಚಿಕ್ಕೇಗೌಡ ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ ಎಲ್ಲರೂ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಮಾಡಬೇಕು. ಆದರೆ ಬಿಜೆಪಿಯವರು ಅಡ್ಡದಾರಿ ಹಿಡಿದು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗುವಂತೆ ಮಾಡಿದ್ದು ಖಂಡನೀಯ ಅದಕ್ಕೆ ಧಿಕ್ಕಾರ ಹೇಳುತ್ತೇನೆ ಎಂದರು

ಮಲಿಕ ಕಳ್ಳಿಮನಿ: 

ಜಾಕಿರ ಹುಸೇನ ಮಾತನಾಡಿ, ಈ ಚುನಾವಣೆಯಲ್ಲಿ ನಾವು ಸೋತಿಲ್ಲ ಗೆದ್ದಿದ್ದೇವೆ ಅವರದು ನ್ಯಾಯವಾದ ಗೆಲುವಲ್ಲ ಎಂದರು. ಮೂಡಲಗಿಯಲ್ಲಿ ಒಂದು ಸರಿಯಾದ ರಸ್ತೆ ಇಲ್ಲ, ಗಟಾರು ಇಲ್ಲ ಯಾವ ಕೆಲಸವೂ ಆಗುತ್ತಿಲ್ಲ. ಆದರೆ ದುಡ್ಡು ಮಾತ್ರ ಸಿಕ್ಕಾಪಟ್ಟೆ ಖರ್ಚಾಗುತ್ತಿದೆ. ಭ್ರಷ್ಟಾಚಾತ ನಡೆಯುತ್ತಿದೆ ಯಾರೂ ಕೇಳದಂತೆ ಆಗಿದೆ ಎಂದು ಆರೋಪಿಸಿ, ಇವರು ತಾಕತ್ತಿದ್ದರೆ ನೇರಾ ನೇರ ಚುನಾವಣೆ ಮಾಡಿ ಗೆದ್ದು ತೋರಿಸಬೇಕು ಎಂದರು.

ಅಭ್ಯರ್ಥಿಯನ್ನು ೪೦ ನಿಮಿಷ ಕಾಯಿಸಿದ ಚುನಾವಣಾ ಅಧಿಕಾರಿ!

ನಾಮಪತ್ರ ಸಲ್ಲಿಸಲು ಹೋದ ಕಾಂಗ್ರೆಸ್ ಅಭ್ಯರ್ಥಿಯನ್ನು ೪೦ ನಿಮಿಷಗಳವರೆಗೆ ಕಾಯಿಸಿದ ಚುನಾವಣಾ ಅಧಿಕಾರಿ ಬಿಜೆಪಿ ಎಜೆಂಟರಂತೆ ಕೆಲಸ ಮಾಡಿದರು ಎಂಬ ಅಭಿಪ್ರಾಯ ಪ್ರತಿಭಟನಾ ಸಭೆಯಲ್ಲಿ ವ್ಯಕ್ತವಾಯಿತು.

ಮೂಡಲಗಿಯ ವಾರ್ಡ್ ನಂ. ೯ ರಲ್ಲಿ ಅವಿರೋಧವಾಗಿ ಅಭ್ಯರ್ಥಿಯ ಆಯ್ಕೆಯಾಗಿದೆ ಎಂದು ಘೋಷಣೆ ಮಾಡಲಾಗಿದ್ದರೂ ಅದು ಆಯ್ಕೆಯಲ್ಲ, ಕಾಂಗ್ರೆಸ್ ಸೋತಿಲ್ಲ, ಅಭ್ಯರ್ಥಿಯನ್ನು ಅಪಹರಣ ಮಾಡಿ ಅನೈತಿಕವಾಗಿ ಗೆಲುವನ್ನು ಘೋಷಣೆ ಮಾಡಿಕೊಳ್ಳಲಾಗಿದೆ ಎಂದು ಹಲವರು ಆರೋಪ ಮಾಡಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group