spot_img
spot_img

ಜಾಗೃತ ಮತದಾರರೇ ಭಾರತ ದೇಶದ ಭದ್ರ ಬುನಾದಿ – ಶ್ರೀಶೈಲ ಸಿ.ಕರೀಕಟ್ಟಿ

Must Read

- Advertisement -

ಸವದತ್ತಿ: ‘ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸರ್ವರಿಗೂ ಮುಕ್ತ ಹಾಗೂ ಸಂತಸದಾಯಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇಂತಹ ಮತದಾನದ ಹಕ್ಕನ್ನು ನಾವು ತಪ್ಪದೆ ಚಲಾಯಿಸಬೇಕು.

ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಭಾವಿ ಮತದಾರರು ಮತ್ತು ಯುವ ಮತದಾರರಿಗೆ ಮತದ ಮೌಲ್ಯವನ್ನು ತಿಳಿಸಿಕೊಟ್ಟು, ಕಡ್ಡಾಯವಾಗಿ ಮತದಾನದ ದಿನ ಮತ ಚಲಾಯಿಸಲು ಪ್ರೇರೇಪಣೆ ನೀಡಬೇಕೆಂದು” ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲ ಕರೀಕಟ್ಟಿ ಕರೆ ಕೊಟ್ಟರು.

ಅವರು ತಾಲೂಕಿನ ಆದರ್ಶ ವಿದ್ಯಾಲಯ ಯಡ್ರಾವಿಯ ಸಭಾಭವನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತಾಲೂಕಾ ಮಟ್ಟದ ಮತದಾರರ ಜಾಗೃತಿಗಾಗಿ ಸವದತ್ತಿ ಹಾಗೂ ಮುನವಳ್ಳಿ ವಲಯದ ಶಾಲಾ ಕಾಲೇಜುಗಳ ಇ. ಎಲ್ ಸಿ ಕ್ಲಬ್ ಗಳ ಸಂಚಾಲಕರಿಗೆ ಹಾಗೂ ಬಿ. ಎಲ್. ಓ ಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. .

- Advertisement -

“ಪ್ರತಿ ಬಾರಿ ಚುನಾವಣೆ ಬಂದಾಗಲೂ  ಶಿಕ್ಷಕರು ಅತ್ಯಂತ ಜವಾಬ್ದಾರಿಯುತವಾಗಿ ಚುನಾವಣಾ ಕಾರ್ಯನಿರ್ವಹಿಸುತ್ತಾರೆ. ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ಕೂಡ ಯಾವುದೇ ಅಂಜಿಕೆ,ಆತಂಕವಿಲ್ಲದೆ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿದ್ದಾರೆಂದು ಶಿಕ್ಷಕರ ಸೇವೆಯನ್ನು ಸ್ಮರಿಸಿಕೊಂಡು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಸವದತ್ತಿ ತಾಲೂಕಾ ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಸದರಿ ತರಬೇತಿಯ ಸಂಪನ್ಮೂಲ ವ್ಯಕ್ತಿ ಶ್ರೀ ಸುಧೀರ್ ವಾಗೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಚುನಾವಣಾ ಪ್ರಕ್ರಿಯೆ ಪ್ರಜಾಪ್ರಭುತ್ವದ ಮೂಲ ತಳಹದಿಯಾಗಿದ್ದು ಯಾವ ವ್ಯಕ್ತಿಯು ಸಹ ಮತದಾನದಿಂದ ವಂಚಿತರಾಗಬಾರದೆಂದರು. ಜೊತೆಗೆ ಜಿಲ್ಲಾ ಸ್ವೀಪ ಸಮಿತಿಯ ಗುರಿ, ಉದ್ದೇಶಗಳನ್ನು ಈಡೇರಿಸುವ ಗುರುತರವಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ” ಎಂದರು. ಅವರು ಮತದಾರರ ಪ್ರತಿಜ್ಞೆ ವಿಧಿ ಬೋಧಿಸಿದರು.

- Advertisement -

ಮುಂದುವರೆದು “ಚುನಾವಣಾ ಆಯೋಗ ಕಾಲಕಾಲಕ್ಕೆ ತರುತ್ತಿರುವ ಚುನಾವಣಾ ಪ್ರಕ್ರಿಯೆಯ ಸುಧಾರಣಾ ಕ್ರಮಗಳು, ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್, ಎನ್.ವಿ.ಡಿ ಚಟುವಟಿಕೆಗಳ” ಕುರಿತು ಸಂಪೂರ್ಣವಾಗಿ ತಿಳಿಸಿದರು. 

ಶಿಕ್ಷಣ ಸಂಯೋಜಕರಾದ ಜಿ.ಎಮ್.ಕರಾಳೆ ಮಾತನಾಡಿ ಜಾಗೃತ ಮತದಾರರು ಪ್ರಜಾಪ್ರಭುತ್ವದ ಭದ್ರ ಬುನಾದಿ ಎಂದು ತಿಳಿಸುತ್ತಾ ಸ್ವೀಪ್ ಕಾರ್ಯಕ್ರಮಗಳನ್ನು ವಿಸ್ತ್ರುತವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ  ಆರ್.ಎಫ್. ಮಾಗಿ ತಾಲೂಕಿನ ಎಲ್ಲಾ ಪ್ರೌಢಶಾಲೆ ಗಳಲ್ಲಿ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಮತದಾರರ ಸಾಕ್ಷರತಾ ಕ್ಲಬ್ ಚಟುವಟಿಕೆಗಳನ್ನು ಮೆಲಕು ಹಾಕಿ ತಾಲೂಕಾ ನೋಡಲ್ ಅಧಿಕಾರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ತಮ್ಮ ಶಾಲೆಯಲ್ಲಿ ತಾಲೂಕಿನ ಯಾವುದೇ ಶೈಕ್ಷಣಿಕ ಕಾರ್ಯಕ್ರಮ ನಡೆಸಿದರೂ ಸಹ ತುಂಬು ಹೃದಯದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

ಸಂಪನ್ಮೂಲ ವ್ಯಕ್ತಿ ಗಳಾದ ಜಿ.ಪಿ.ಅವತಾರಿ ಯವರು ಭಾರತ ಚುನಾವಣಾ ಆಯೋಗವು ಮತದಾರರ ಜಾಗೃತಿಗಾಗಿ ಹಮ್ಮಿಕೊಂಡ ವಿಡಿಯೋಗಳನ್ನು ಹಾಗೂ ವಿವಿಧ ಪ್ರಕಾರದ ಮನರಂಜನೆ ಆಟಗಳ ಮೂಲಕ ಹೇಗೆ ಜಾಗೃತಿ ಮೂಡಿಸಬಹುದೆಂದು ತಿಳಿಸಿದರು. ಹಾಗೂ ಮತದಾರರ ನೋಂದಣಿ ಪ್ರಕ್ರಿಯೆ ಬಗ್ಗೆ ತಿಳಿಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಸವದತ್ತಿ ತಾಲೂಕಿನ ಎಲ್ಲ ಬಿ.ಎಲ್.ಓ ಹಾಗೂ ಇ.ಎಲ್.ಸಿ.ಕ್ಲಬ್ ಗಳ ಸಂಚಾಲಕ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯ ಕ್ರಮದ ಪ್ರಾರಂಭದಲ್ಲಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಿ.ಆರ್.ಪಿ ಕುಶಾಲ ಮುದ್ದಾಪುರ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕ ಮುದ್ದನ್ನವರ ನಿರೂಪಿಸಿದರು. ದೈಹಿಕ ಶಿಕ್ಷಕ ಹಲಕರ್ಣಿ ವಂದಿಸಿದರು.T

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group