spot_img
spot_img

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ – ಅರುಣ ಶಹಾಪೂರ

Must Read

spot_img
- Advertisement -

ಸಿಂದಗಿ: ಕಳೆದ ೩೦ ವರ್ಷಗಳಿಂದ ಆರಂಭವಾದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಅನುದಾನಕ್ಕೆ ಒಳಪಡಿಸಿಲ್ಲ. ಸದ್ಯ ೨೦೧೫ರ ಒಳಗೆ ಪ್ರಾರಂಭವಾದ ಶಿಕ್ಷಣ ಸಂಸ್ಥೆಗಳಿಗೆ ಅನುದಾನಕ್ಕೊಳಪಡಿಸಲು ಮುಂದಾದ ಸರಕಾರ ಆನ್ ಲೈನ್ ಅರ್ಜಿ ಆದೇಶ ಮಾಡಿದ್ದು ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಗೊಂದಲ ಸೃಷ್ಟಿಸಿದೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶಿಕ್ಷಣ, ಆರೋಗ್ಯ, ರಕ್ಷಣೆ ಈ ಮೂರು ಸೌಕರ್ಯಗಳನ್ನು ಒದಗಿಸಲು ಸಮರ್ಥವಿಲ್ಲದ ಸರಕಾರ ನಡೆಸುವುದು ಎಷ್ಟು ಸರಿ ಎಂದು ಮಾಜಿ ಎಂಎಲ್ಸಿ ಅರುಣ ಶಹಾಪೂರ ಆಕ್ರೋಶ ಹೊರಹಾಕಿದರು.

ಪಟ್ಟಣದ ವಿದ್ಯಾನಗರದಲ್ಲಿರುವ ಸ್ವಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರದಲ್ಲಿ ೧೯೯೫ರ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿ ತದನಂತರ ಈ ಸರಕಾರದಲ್ಲಿ ೨೦೧೫ರ ಒಳಗಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ, ಪ.ಪೂ ಹಾಗೂ ಪದವಿ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಮತ್ತು ಮರಣ ಹೊಂದಿದ ಸ್ಥಾನಗಳಿಗೆ ತೆರವಾದ ಹುದ್ದೆಗಳಿಗೆ ಭರ್ತಿಗೆ ಹಣಕಾಸು ಇಲಾಖೆಗೆ ಅನುಮೋದನೆ ನೀಡಿ ಆಲ್ ನೈಲ್ ಅರ್ಜಿ ನೀಡುವಂತೆ ಆದೇಶ ನೀಡಿ ವಿಳಂಬ ನೀತಿ ಅನುಸರಿಸಿ ಮೇಲಾಧಿಕಾರಿಗಳ ಮೂಲಕ ಭ್ರಷ್ಟಾಚಾರ ಕ್ಕೆ ಇಳಿಸಿದಂತಾಗಿದೆ. ಅಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿ ತುಗಲಕ್ ದರ್ಭಾರ ನಡೆಸಿದೆ ಇದರಿಂದ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಶತ ೪೦ರಷ್ಟು ವೇತನ ಪಡೆಯುವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ ೬೦ರಷ್ಠು ಸಂಸ್ಥೆಯೇ ನಿರ್ವಹಣೆ ಮಾಡುವಂತಾಗಿ ಸಂಸ್ಥೆ ನಡೆಸುವುದು ಕಷ್ಟವಾಗಿ ಶಿಕ್ಷಣ ಕುಂಠಿತವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸ್ಲೋ ಪಾಯಜನ್ ಕೊಟ್ಟು ಸಾಯುವ ಪರಿಸ್ಥಿತಿ ತಂದು ಇಟ್ಟು ಕೊಟ್ಟಂತೆ ಮಾಡಿ ಕಸಿದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿ ಕಳ್ಳಾಟ ನಡೆಸಿದೆ ಈ ಸರಕಾರಕ್ಕೆ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ ಮನಬಂದಂತೆ ಆಡಳಿತ ನಡೆಸುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಕನ್ನೋಳ್ಳಿ ಲಕ್ಷ್ಮಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದನಗೌಡ ಬಿರಾದಾರ, ಜ್ಞಾನ ಭಾರತಿ ವಿದ್ಯಾಮಂದಿರದ ಜಗದೀಶ ಪಾಟೀಲ, ಭೀಮಾ ಯುನಿವರ್ಸಲ್  ಸ್ಕೂಲ್ನ ನಿರ್ದೆಶಕ ಭೀಮಾಶಂಕರ ತಾರಾಪೂರ, ಶಿವಾನಂದ ರೋಡಗಿ ಇದ್ದರು.

- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group