spot_img
spot_img

ಸಂವಿಧಾನ ದಿನ ಆಚರಣೆ

Must Read

spot_img
- Advertisement -

ಸವದತ್ತಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನ ಆಚರಿಸಲಾಯಿತು.”ಭಾರತೀಯ ಸಂವಿಧಾನವನ್ನು ಸಂವಿಧಾನ ಸಭೆಯು ಅಂಗೀಕರಿಸಿತು. ಮುಂದೆ ಇದು 1950 ಜನವರಿ 26 ರಂದು ಜಾರಿಗೆ ಬಂದಿತು”. ಎಂದು ಶಾಲೆಯ ಸಹಶಿಕ್ಷಕ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಘಟಕದ ಅಧ್ಯಕ್ಷರಾದ ಹೆಚ್.ಆರ್.ಪೆಟ್ಲೂರ ಹೇಳಿದರು.

ಸಹಶಿಕ್ಷಕರಾದ ಜಗದೀಶ.ಎಸ್.ಗೊರೋಬಾಳ,ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯಲ್ಪಡುವ ಡಾ|| ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನದ ಪ್ರತಿಯನ್ನು ಪೂಜಿಸಿ ಸಂವಿಧಾನದ ಮಹತ್ವ ತಿಳಿಸಿ, ಅದು ನಮಗೆ ಹೆಮ್ಮೆ ಎಂದು ಹೇಳಿದರು.

- Advertisement -

ಸಂವಿಧಾನದ ಪೀಠಿಕೆಯನ್ನು ಮಕ್ಕಳಿಂದ ಹೇಳಿಸಲಾಯಿತು. ಶಾಲಾ ಪ್ರಧಾನ ಗುರುಮಾತೆಯರಾದ ಶ್ರೀಮತಿ. ಎಲ್.ಎನ್.ಗಾಣಿಗೇರ ಮಾತನಾಡುತ್ತಾ, ‘ಆಜಾದಿ ಕಾ ಅಮೃತ ಮಹೋತ್ಸವವು ಪ್ರಗತಿಪರ ಭಾರತದ ಜನರು ಸಂಸ್ಕೃತಿ ಮತ್ತು ಸಾಧನೆಗಳ ಭವ್ಯ ಇತಿಹಾಸವನ್ನು ಆಚರಿಸಲು ಭಾರತ ಸರ್ಕಾರ ಕೈಗೊಂಡ ಪ್ರಮುಖ ಕ್ರಮವಾಗಿದೆ’ಎಂದು ಹೇಳಿದರು. ಶಾಲಾ ಮಕ್ಕಳಿಗೆ ನಮ್ಮ ಹೆಮ್ಮೆಯ ಸಂವಿಧಾನದ ಮಹತ್ವವನ್ನು ತಿಳಿಸಲು ಕಾರಣವಾದ ಸದರೀ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಮಹತ್ವದ ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕಿಯರಾದ ಶ್ರೀಮತಿ.ಆರ್.ಹೆಚ್.ನಾಗನೂರ.ಶ್ರೀಮತಿ.ಡಿ.ಪಿ.ಪತ್ತಾರ,ಶ್ರೀಮತಿ.ವಿ.ವಿ.ಸುಬೇದಾರ, ಶ್ರೀಮತಿ.ಜಿ.ಎಸ್. ಹೊಸಮನಿ, ಶ್ರೀಮತಿ.ಎಸ್.ಎಮ್.ಮಲ್ಲೂರ,

ಅತಿಥಿ ಶಿಕ್ಷಕಿಯರಾದ ಶ್ರೀಮತಿ.ವಿಜಯಲಕ್ಷ್ಮೀ, ಶ್ರೀಮತಿ.ಎನ್.ಎಮ್. ಪಟ್ಟಣಶೆಟ್ಟಿ ಹಾಜರಿದ್ದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group