ಬೆಳಗಾವಿ: ಸ್ಥಳೀಯ ಕಣಬರ್ಗಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ-2 ರಲ್ಲಿ ಸ್ವಚ್ಛಂದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಸತಿ ನಿಲಯದ ಆವರಣದಲ್ಲಿ ಮನೋಹರ ಉದ್ಯಾನವನವನ್ನು ಸ್ವಯಂ ಸ್ಪೂರ್ತಿಯಿಂದ ನಿರ್ಮಾಣ ಮಾಡುತ್ತಿದ್ದಾರೆ.
ಇದರಿಂದ ವಸತಿ ನಿಲಯದ ಆವರಣ ಸೌಂದರ್ಯೀಕರಣವಾಗುವುದರಲ್ಲಿ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ ಆದುದರಿಂದ ವಿದ್ಯಾರ್ಥಿಗಳೇ ಆಸಕ್ತಿವಹಿಸಿ ನಿಲಯದಲ್ಲಿ ವಿವಿಧ ಸಸಿಗಳನ್ನು ನೆಡುವುದರ ಮೂಲಕ ಇಂದು ಉದ್ಯಾನವನವನ್ನು ನಿರ್ಮಿಸಿದ್ದಾರೆ.
ಇದಕ್ಕೆ ಪೂರಕವಾಗಿ ವಸತಿ ನಿಲಯದ ಪಾಲಕರಾದ ಶ್ರೀಕಾಂತ್ ದೇವಲತ್ತಿ ಅವರು ವಿದ್ಯಾರ್ಥಿಗಳಿಗೆ ಸಹಾಯ ಮತ್ತು ಸಹಕಾರವನ್ನು ನೀಡಿ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ನೀಡಿದ್ದಾರೆ.