spot_img
spot_img

ಕಟ್ಟಡ ಕಾರ್ಮಿಕರ ಕಾರ್ಡ್ ಹಾಗೂ ಬಸ್ ಪಾಸ ವಿತರಣಾ ಕಾರ್ಯಕ್ರಮ

Must Read

ಸಿಂದಗಿ; ಪ್ರತಿಯೊಬ್ಬರಿಗೆ ಸರಕಾರಿ ಸೌಲಭ್ಯ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ. ಜನ ಸಾಮಾನ್ಯರಿಗೆ ಸೌಲಭ್ಯಗಳು ನಾವೇ ಕಟ್ಟಿದ ಟ್ಯಾಕ್ಸ್ ನಿಂದ ಸಿಗುವುದು ಆದ್ದರಿಂದ ಪಡೆದುಕೊಳ್ಳುವುದು ನಮ್ಮೆಲ್ಲರ ಹಕ್ಕಾಗಿದೆ. ಒಂದು ವೇಳೆ ಈ ಸೌಲಭ್ಯಗಳನ್ನು ಪಡೆಯದಿದ್ದರೆ ಅದು ಬೇರೆಯವರ ಪಾಲಾಗುತ್ತದೆ ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜ ಸಲಹೆ ನೀಡಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಕಟ್ಟಡ ಕಾರ್ಮಿಕರ ಕಾರ್ಡ್ ಹಾಗೂ ಬಸ್ ಪಾಸ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಕಾರ್ಮಿಕರ ಇಲಾಖೆಯಿಂದ ಸೌಲಭ್ಯಗಳಲ್ಲಿ ಬಸ್ ಪಾಸ್ ಒಂದಾಗಿದೆ ಈ ಪಾಸ ಪಡೆಯಬೇಕಾದರೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಬಸ್ ಪಾಸ್ ಪಡೆದ ನಂತರ ಮೂರು ತಿಂಗಳ ನಂತರ ನವೀಕರಣ ಮಾಡಬೇಕು ಹಾಗೂ ಕಾರ್ಮಿಕರ ಕಾರ್ಡ್ ಕೂಡಾ ಕಡ್ಡಾಯವಾಗಿ ಮೂರು ವರ್ಷಕ್ಕೊಮ್ಮೆ ನವೀಕರಿಸಬೇಕು. ಈ ರೀತಿ ನವೀಕರಿಸಿದರೆ ಮಾತ್ರ ನಿಮಗೆ ಇಲಾಖೆಯಿಂದ ಸೌಲಭ್ಯಗಳು ಸಿಗುತ್ತವೆ.  ಎಂದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಅನೇಕ ಸಹಾಯ ಸೌಲಭ್ಯಗಳು ಒದಗಿಸಿ ಕೊಡುತ್ತಿದೆ ಇದರಲ್ಲಿ ಕಟ್ಟಡ ಕಾರ್ಮಿಕರ ಕಾರ್ಡ ಮಾಡಿಸಿಕೊಂಡವರು ಮದುವೆ ಸಹಾಯ ಧನ, ಫಲಾನುಭವಿಯ ಇಬ್ಬರ ಮಕ್ಕಳಿಗೆ ಶಿಷ್ಯ ವೇತನ ವೈದ್ಯಕೀಯ ವೆಚ್ಚ, ಪಿಂಚಣಿ, ಕಾರ್ಮಿಕರ ಬಸ್ ಪಾಸ್, ಕಾರ್ಮಿಕರ ಟೂಲ್ ಕಿಟ್ಟ್ ,ಅಂತ್ಯಕ್ರಿಯೆ ವೆಚ್ಚ, ಅಪಘಾತ ವಿಮೆ ಸೌಲಭ್ಯಗಳು ಪಡೆಯಬೇಕಾದರೆ ಮೊದಲು ನೀವು ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಕಾರ್ಡ್ ಹಾಗೂ ಕಾರ್ಮಿಕರ ಬಸ್ ಪಾಸ್ ವಿತರಣೆ ಮಾಡಿದರು.

ರಾಜೀವ ಕುರಿಮನಿ ಪ್ರಾಸ್ತಾವಿಕವಾಗಿ ಇವರು ಮಾತನಾಡಿದರು. ವಿಜಯ ಬಂಟನೂರ ನಿರೂಪಿಸಿದರು ಮಲಕಪ್ಪ  ಸ್ವಾಗತಿಸಿದರು. ಶ್ರೀಧರ್ ಕಡಕೋಳ ಇವರು ವಂದಿಸಿದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!