spot_img
spot_img

ಶುಭಲಕ್ಷ್ಮೀ ಸ್ವ ಸಹಾಯ ಸಂಘದ ರಚನಾತ್ಮಕ ಚಟುವಟಿಕೆ

Must Read

- Advertisement -

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯ ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ಸ್ವ ಸಹಾಯ ಗುಂಪುಗಳಿವೆ. ಅದರಲ್ಲಿ ಶುಭಲಕ್ಷ್ಮೀ ಸ್ವ ಸಹಾಯ ಸಂಘವೂ ಒಂದು. ಇದು ಇತ್ತೀಚೆಗೆ ಹಲವು ರಚನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು.

ಇಲ್ಲಿರುವ ಮಹಿಳೆಯರು ಒಬ್ಬರಿಗೊಬ್ಬರು ಸಹಾಯ ಮಾಡಲೆಂದೇ ಈ ಸಂಘ ಹುಟ್ಟು ಹಾಕಿರುವರು. ಇವರೆಲ್ಲ ಸಭೆ ಸೇರಿ ಗುಂಪಿನಲ್ಲಿ ಮಿತವ್ಯಯವನ್ನು ಪ್ರೋತ್ಸಾಹಿಸಲು ಮತ್ತು ತಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ ಮಾಡಲು ಪಾಸ್ ಪುಸ್ತಕವನ್ನು ಮಾಡಿಕೊಂಡು ಅದರಲ್ಲಿ ಹಣವನ್ನು ಕಟ್ಟುತ್ತಿರುವರು.

ಕಷ್ಟ ಕಾಲದಲ್ಲಿ ಗುಂಪಿನಲ್ಲಿ ಸಂಗ್ರಹಿಸಿದ ಹಣವನ್ನು ತಮ್ಮ ತಮ್ಮಲ್ಲಿಯೇ ಕಡಿಮೆ ದರದಲ್ಲಿ ಬಡ್ಡಿಯನ್ನು ಆಕರಣೆ ಮಾಡುವ ಉದ್ದೇಶದಿಂದ ಅವಶ್ಯಕ ಎನಿಸಿದ ಸದಸ್ಯರಿಗೆ ನೀಡುವ ಮೂಲಕ ಅನುಕೂಲ ಕೂಡ ಮಾಡುತ್ತಿರುವರು.

- Advertisement -

ಇತ್ತೀಚೆಗೆ ಈ ಎಲ್ಲ ಸದಸ್ಯರು ತಮ್ಮ ಗುಂಪಿನ ಮಾಸಿಕ ಸಭೆ ಮುನವಳ್ಳಿ ಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಲ್ಲಿ ಸೇರಿದಾಗ ಸಾಧಕರ ಸನ್ಮಾನ ಜರುಗಿಸುವ ಆಲೋಚನೆ ಮಾಡಿದರು. ಅದರ ಪರಿಣಾಮ ಮುನವಳ್ಳಿ ಗ್ರಾಮದ ಮಹಾದೇವ-ಭಾರತಿ ಕಟಿಗೆನ್ನವರ ಮಗಳು ಸ್ನೇಹಾ ಕಟಿಗೆನ್ನವರ ಉತ್ತಮ ಸಾಧನೆಗೈಯುತ್ತಿರುವ ವಿದ್ಯಾರ್ಥಿನಿಯಾಗಿದ್ದು ಇವಳ ಸನ್ಮಾನ ಜರುಗಿಸುವುದು ಜೊತೆಗೆ ಮುನವಳ್ಳಿಯ ಶ್ರೀಶೈಲ ಹಾಗೂ ಸವಿತಾ ಹಂಜಿ ದಂಪತಿಗಳ ಪುತ್ರ ಸಮರ್ಥನಿಗೆ ಸನ್ಮಾನ ಮಾಡುವುದಾಗಿ ಯೋಚಿಸಿದರು.

ಸ್ನೇಹಾ ಕಟಿಗೆನ್ನವರ ಇವಳು ಬೈಲಹೊಂಗಲದ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರತಿಶತ ೯೯.೩೬ ಅಂಕಗಳನ್ನು ಪಡೆದು ರಾಜ್ಯಕ್ಕೆ ೫ ನೇ ರ‍್ಯಾಂಕ್ ಉತ್ತೀರ್ಣಳಾಗಿ ತಪಸ್ ಮೆರಿಟ್ ಪರೀಕ್ಷೆ ಮೂಲಕ ರಾಷ್ಟ್ರೋತ್ಥಾನ ಸಂಸ್ಥೆಯ ಬೆಂಗಳೂರಿನಲ್ಲಿ ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ ಪ್ರತಿಶತ ೯೭.೭೭ ಅಂಕಗಳನ್ನು ಪಡೆದು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಯ ಮೂಲಕ ಮೆರಿಟ್ ಸ್ಕಾಲರಶಿಪ್ ಗಳಿಸುವದರೊಂದಿಗೆ ಸದ್ಯ ಬಿ.ಎ ಆನರ್ಸ ಪದವಿ ಓದುತ್ತಿರುವಳು.

ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಈ ವಿದ್ಯಾರ್ಥಿನಿಯನ್ನು ಗೌರವಿಸುವ ಆಲೋಚನೆ ಹಾಗೂ ಸವಿತಾ ಹಂಜಿ ಇವರ ಮಗ ಸಮರ್ಥ ಎಸ್.ಎಸ್.ಎಲ್.ಸಿಯಲ್ಲಿ ಗಮನಾರ್ಹ ಸಾಧನೆಯನ್ನು ಮುನವಳ್ಳಿಯ ಸಿ.ಬಿ.ಎಸ್.ಸಿ ಪಠ್ಯವನ್ನು ಒಳಗೊಂಡ ಆಂಗ್ಲ ಮಾಧ್ಯಮ ಶ್ರೀ ರೇಣುಕಾ ಶುಗರ‍್ಸ ಪೌಂಡೇಶನ್ ಪ್ರೌಢಶಾಲೆಯಲ್ಲಿ ಮಾಡಿದ್ದರಿಂದ ಈತ ಸದ್ಯ ಧಾರವಾಡದ ಆರ್ಯಭಟ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿ.ಯು..ಸಿಯಲ್ಲಿ ಓದುತ್ತಿರುವನು.ಇವನಿಗೆ ಸನ್ಮಾನ ಮಾಡಿದರು.

- Advertisement -

ಶುಭಲಕ್ಷ್ಮೀ ಸ್ವ ಸಹಾಯ ಸಂಘದ ಈ ಕಾರ್ಯ ಗಮನಾರ್ಹವಾದುದು. ಸಾಮಾಜಿಕವಾಗಿ ಆರ್ಥಿಕವಾಗಿ, ಬೌದ್ಧಿಕವಾಗಿ ಮಹಿಳೆಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಸ್ವಸಹಾಯ ಸಂಘಗಳು ಇಂತಹ ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮಹತ್ವದ ಸಂಗತಿ. ಈ ಸಂಘಟನೆಯಲ್ಲಿ ಅಧ್ಯಕ್ಷೆಯಾಗಿ ಭಾಗ್ಯಲಕ್ಷ್ಮೀ ಅಮಠೆ. ಕಾರ್ಯದರ್ಶಿಯಾಗಿ ಪೂಜಾ ಕಮ್ಮಾರ.ಖಜಾಂಚಿಯಾಗಿ ಸವಿತಾ ಹಂಜಿ ಕಾರ್ಯನಿರ್ವಹಿಸುತ್ತಿರುವರು.

ಉಳಿದ ಸದಸ್ಯೆಯರೆಂದರೆ ಸವಿತಾ ರಾಜಶೇಖರ ಅಲಮನ್ನವರ, ಸವಿತಾ ಶ್ರೀಶೈಲ ಹಂಜಿ, ಕೋಮಲ ಬಾಳಿ, ದೀಪಾ ಹವಾಲದಾರ, ಅನಿತ ಹಂಜಿ, ಮುಕ್ತಾ ಪಶುಪತಿ, ಸ್ನೇಹಾ ಕಟಿಗೆನ್ನವರ. ಸುಜಾತಾ ಪಾಟೀಲ, ದೀಪಾ ಜಂತ್ಲಿ, ಸುಚಿತಾ ಹಂಜಿ ಎಲ್ಲರೂ ಗೃಹಿಣಿಯರಾಗಿ ತಮ್ಮ ಬಿಡುವಿನ ಸಮಯದಲ್ಲಿ ಸಂಘದ ಚಟುವಟಿಕೆಗಳ ಕುರಿತು ಸಭೆ ನಡೆಸುವ ಜೊತೆಗೆ ಸ್ವಸಹಾಯ ಸಂಘದ ಮೂಲಕ ವಿವಿಧ ರಚನಾತ್ಮಕ ಚಟುವಟಿಕೆಗಳನ್ನು ಮಾಡುತ್ತಿರುವರು.

ದೀಪಾ ಜಂತ್ಲಿ ಉದ್ದಿನಕಡ್ಡಿ ತಯಾರಿಕೆಯ ಮೂಲಕ ಮನೆಯಲ್ಲಿ ಸ್ವ ಉದ್ಯೋಗವನ್ನು ಮಾಡುತ್ತಿದ್ದರೆ. ಮುಕ್ತಾ ಪಶುಪತಿ ಇವರು ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಭಾಗ್ಯಲಕ್ಷ್ಮೀ ಹಾಗೂ ಸವಿತಾ (ಮಾಜಿ ಪುರಸಭೆ ಸದಸ್ಯೆ)ರಾಜಕೀಯ ಕ್ಷೇತ್ರದಲ್ಲಿ.ವೈದ್ಯೆಯಾಗಿ ಸಾಮಾಜಿಕ ಸೇವೆಯಲ್ಲಿ ಡಾ.ಅನಿತಾ.ಸಂತೋಷ, ಹಂಜಿ ದೀಪಾ ಜಗದೀಶ್ ಅವರು ಮನೆಯಲ್ಲಿಯೇ ತಿಂಡಿ ಹಾಗೂ ಊಟದ ಆರ್ಡರ್ ತಗೆದುಕೊಂಡು ಪೂರೈಕೆ.ಹೀಗೆ ಒಂದಲ್ಲ ಒಂದು ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡವರು.

ಸ್ವಾವಲಂಬನೆಯ ಜೊತೆಗೆ ಸಾಮರಸ್ಯದ ಹೆಗ್ಗುರುತನ್ನು ಈ ಎಲ್ಲ ಸದಸ್ಯೆಯರು ಮೂಡಿಸುತ್ತಿದ್ದು ಮನುಷ್ಯ ಮನುಷ್ಯರ ನಡುವೆ ಉಪಕಾರ ಸ್ಮರಣೆಯ ಭಾವವನ್ನು ತುಂಬಿಕೊಂಡು ವಿವಿಧ ಹಬ್ಬ ಹರಿದಿನಗಳಲ್ಲಿ ಉಡುಗೆ ತೊಡುಗೆಯನ್ನು ಭಾರತೀಯ ಸಂಸ್ಕೃತಿಯ ಮೇಳೈಸುವಂತೆ ಎಲ್ಲರೂ ಧರಿಸಿಕೊಂಡು ಆ ಹಬ್ಬದ ವಿಶೇಷ ಅಡುಗೆಯನ್ನು ತಂಡದ ಒಬ್ಬರು ತಯಾರಿಸಿಕೊಂಡು ಮುನವಳ್ಳಿಯ ಯಾವುದಾದರೂ ಐತಿಹಾಸಿಕ ದೇವಾಲಯದಲ್ಲಿ ಸೇರುವ ಮೂಲಕ ಹಬ್ಬದ ಅರ್ಥಪೂರ್ಣ ಆಚರಣೆ ಮಾಡಿ ಎಲ್ಲರೂ ಸೇರಿ ಊಟವನ್ನು ಮಾಡುವ ಮೂಲಕ ಒಬ್ಬರಿಗೊಬ್ಬರು ತಮ್ಮ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿರುವುದು ವಿಶೇಷ. ಆಗಾಗ ಒಂದು ದಿನದ ಪ್ರವಾಸವನ್ನು ಈ ಎಲ್ಲರೂ ಸದಸ್ಯರು ಕೂಡಿಕೊಂಡು ಸಂಘಟಿಸುವ ಮೂಲಕ ಹೊರಸಂಚಾರವನ್ನು ಮಾಡುತ್ತ ತಮ್ಮ ಸಂಘದ ಧ್ಯೇಯೋದ್ದೇಶಗಳನ್ನು ಅರ್ಥಪೂರ್ಣಗೊಳಿಸಿಕೊಳ್ಳುತ್ತಿರುವರು.

ಮಾನವೀಯ ಸಂಬಂಧಗಳಿಗೆ ಅರ್ಥವನ್ನು ನೀಡುವ ಮೂಲಕ ಮುನವಳ್ಳಿಯಲ್ಲಿ ಎಲೆಮರೆಯ ಕಾಯಿಯಂತೆ ಶುಭಲಕ್ಷ್ಮೀ ಸ್ವ ಸಹಾಯ ಸಂಘದ ತನ್ನ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವುದು ಅಭಿಮಾನದ ಸಂಗತಿ.ಇಂಥ ಸ್ವಸಹಾಯ ಸಂಘಗಳಿಂದ ಕುಟುಂಬದ ಆದಾಯದ ಉಳಿತಾಯ ರೂಪ ಪಡೆಯುವುದಲ್ಲದೇ ಹಲವಾರು ದಾಖಲೆಗಳೊಂದಿಗೆ ಬ್ಯಾಂಕುಗಳಿಗೆ ಅಲೆದಾಡಿ ಸಾಲಸೌಲಭ್ಯಕ್ಕಾಗಿ ಶ್ರಮ ಪಡದೇ ತಮ್ಮಲ್ಲಿ ಸೇರಿದ ಹಣವನ್ನು ಅವಶ್ಯಕತೆ ಇದ್ದವರಿಗೆ ನೀಡಿ ಅದನ್ನು ಅವರು ಪ್ರಾಮಾಣಿಕವಾಗಿ ಮರು ಪಾವತಿಸುವಂತೆ ಮಾಡುವ ಮೂಲಕ ಮಹಿಳಾ ಸಬಲೀಕರಣ ಜರುಗುತ್ತಿದೆ.ಮಾನವ ಸಂಪನ್ಮೂಲದ ಸದ್ಬಳಕೆ ಮತ್ತು ಸಸ್ಶ ಸಮಾಜದ ನಿರ್ಮಾಣದಲ್ಲಿ ಇಂತಹ ಸ್ವಸಹಾಯ ಸಂಘಗಳು ಇರುವುದು ಸೂಕ್ತ.

ಮುಂಬರುವ ದಿನಗಳ ಯೋಜನೆಗಳು:

ಸ್ವ-ಸಹಾಯ ಸಂಘಗಳ (Self healp group)) ಸದಸ್ಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ‘ಕಾಯಕ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಸ್ವಸಹಾಯ ಸಂಘಗಳು 10 ಲಕ್ಷ ರೂ. ವರೆಗೆ ಸಾಲ ಪಡೆಯಬಹುದು.ಇದನ್ನು ಕಾರ್ಯ ಗತಗೊಳಿಸಲು ಪ್ರಯತ್ನಿಸಲಾಗುವುದು.

ಸ್ವಸಹಾಯ ಗುಂಪುಗಳ ಸದಸ್ಯರು ತಯಾರಿಸಿದ ವಸ್ತುಗಳನ್ನು ರಾಜ್ಯ ಸರ್ಕಾರವು ಖರೀದಿಸುತ್ತದೆ. ಇದು ಮಹಿಳಾ ಅಭ್ಯರ್ಥಿಗಳಿಗೆ ಸ್ಥಿರ ಆದಾಯದ ಮೂಲವನ್ನು ಒದಗಿಸುತ್ತದೆ.ಈ ದಿಸೆಯಲ್ಲಿ ನಮ್ಮ ಸಂಘದ ಸದಸ್ಯರು ತಯಾರಿಸಿದ ವಸ್ತುಗಳನ್ನು ಸರಕಾರಕ್ಕೆ ಮಾರಾಟ ಮಾಡಲು ಯೋಜನೆ ಸಿದ್ಧಪಡಿಸುವುದು.

ಪ್ರತಿ ವರ್ಷ ವಾರ್ಷಿಕೋತ್ಸವದ ನೆನಪಿಗೆ ನಮ್ಮ ಸದಸ್ಯರು ಹಾಗೂ ಅವರ ಕುಟುಂಬಗಳ ಸದಸ್ಯರು ಗಮನಾರ್ಹ ಸಾಧನೆ ಯಾವುದಾದರೂ ಕ್ಷೇತ್ರದಲ್ಲಿ ಮಾಡಿದ್ದಲ್ಲಿ ಅದನ್ನು ಗುರುತಿಸಿ ಗೌರವಿಸುವುದು.

ವರ್ಷಕ್ಕೆ ಒಂದು ಸಲ ಸದಸ್ಯರು ಸೇರಿ ಅಧ್ಯಯನ ಪೂರ್ಣ ಪ್ರವಾಸ ಕೈಗೊಳ್ಳುವುದು.

ನಮ್ಮ ತಂಡದ ಮಹಿಳೆಯರಿಗೆ ಆರ್ಥಿಕ ಪ್ರಗತಿಯನ್ನು ಸಾದಿಸುವಂತಹ ಹಾಗೂ ಸಾಮಾಜಿಕ ಬದಲಾಣೆಗೆ ಸೂಕ್ತ ವಾತಾವರಣವನ್ನು ಮೂಡಿಸುವಂತಹ ಪ್ರಕ್ರಿಯೆಯನ್ನು ಬಲಪಡಿಸುವುದು.

ಹೀಗೆ ಹತ್ತು ಹಲವು ಕನಸುಗಳನ್ನು ಈ ಸಂಘಟನೆ ಹೊಂದುವ ಮೂಲಕ ಹೊಸ ಆಶಾಭಾವದೊಂದಿಗೆ ತನ್ನ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು ಈ ಸಂಘದ ಸದಸ್ಯೆಯಾಗಿ ನನಗೂ ಕೂಡ ಹೆಮ್ಮೆಯ ಸಂಗತಿ.


ಶ್ರೀಮತಿ ಮುಕ್ತಾ ಷ ಪಶುಪತಿ
ಮುನವಳ್ಳಿ. 591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group