spot_img
spot_img

ಗ್ರಾಮೀಣ ಅಭ್ಯುದಯಕ್ಕೆ ಸಹಕಾರ ಸಂಘಗಳ ಕೊಡುಗೆ ಅನನ್ಯ – ಈರಣ್ಣ ಕಡಾಡಿ

Must Read

spot_img

ಮೂಡಲಗಿ: ಸಹಕಾರಿ ಸಂಘಗಳು ಗ್ರಾಮೀಣ ಭಾಗದ ಜನರ ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿವೆ ಹಾಗೂ ಸಹಕಾರಿ ಸಂಘಗಳು ಗ್ರಾಹಕರಿಗೆ ನೀಡುತ್ತಿರುವ ಸೇವೆ ಮತ್ತು ಕಾರ್ಯದಕ್ಷತೆ ಪ್ರಶಂಸನೀಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಸೆ.14 ರಂದು ಮೂಡಲಗಿ ನಗರದ ಶ್ರೀ ಅನ್ನಪೂರ್ಣೇಶ್ವರಿ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಸಹಕಾರ ಕ್ಷೇತ್ರ ಗ್ರಾಮೀಣ ಭಾಗದ ಜನರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವ ಕೇಂದ್ರಗಳಾಗಿವೆ ಆ ಮೂಲಕ ಗ್ರಾಮೀಣ ಭಾಗದ ಆರ್ಥಿಕ ಅಭ್ಯುದಯಕ್ಕೆ ಅನನ್ಯ ಕೊಡುಗೆ ನೀಡಿವೆ. ಸಹಕಾರಿ ಸಂಘಗಳ ಆಡಳಿತ ಮಂಡಳಿಗಳು ದೂರದೃಷ್ಠಿ ಹಾಗೂ ಪ್ರಾಮಾಣಿಕ ದಕ್ಷ, ಆಡಳಿತ ವ್ಯವಸ್ಥೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಒಳ್ಳೆಯ ಸೇವೆ ನೀಡುತ್ತಿವೆ ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಧರ್ಮಪೀಠ, ಕೂಡಲಸಂಗಮದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿಗಳು. ಮೂಡಲಗಿಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಭೋಧ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ನಿರ್ದೇಶಕರಾದ ಬಸವರಾಜ್ ಪಾಟೀಲ್, ಚಿನ್ನಪ್ಪ ಸಿ ಬಳಿಗಾರ, ಈರಪ್ಪ ಶಿ ಮುನ್ಯಾಳ, ಈರಪ್ಪ ವೆಂ ಭಾಗೋಜಿ, ಹೊಳೆಪ್ಪ ಬಾ ಶಿವಾಪೂರ, ಯಲ್ಲಪ್ಪ ನಿಂ ಗೋಕಾಕ, ಪ್ರಕಾಶ್ ಮಾದರ್, ಡಾ. ಬಿ ಎಂ ಪಾಲಬಾಂವಿ, ಈರಪ್ಪ ಡವಳೇಶ್ವರ, ಪಾಂಡು ಮಹೇಂದ್ರಕರ್, ಕುಮಾರ್ ಗಿರಡ್ಡಿ, ಈಶ್ವರ್ ಮುರಗೋಡ್, ಮಹಾನಿಂಗ ಒಂಟಗೂಡಿ, ಮಹಾದೇವ ಶೆಕ್ಕಿ, ಶಿವಬೋಧ ಬೆಳಗಲಿ, ಜಗದೀಶ್ ತೇಲಿ, ಚೇತನ ಹೊಸಕೋಟಿ, ಪ್ರಶಾಂತ ನಿಡಗುಂದಿ, ಸಂಗಪ್ಪ ಕಳ್ಳಿಗುದ್ದಿ, ಕಲ್ಮೇಶ್ ಗೋಕಾಕ, ಪಿ.ಎಸ್.ಐ ಹಾಲಪ್ಪ ಬಾಲದಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಮೊರೆ ಕೇಳು ಮಹಾದೇವ

ಮೊರೆ ಕೇಳು ಮಹಾದೇವ ವರುಷದ ಮೊದಲ ಹಬ್ಬ ಯುಗಾದಿ ತರಲಿ ನಮಗೆಲ್ಲ ಹರುಷ ಅನುದಿನದಿ ಕೋಪ ತಾಪ ದ್ವೇಷ ಅಸೂಯೆ ತನುಮನಗಳಿಂದ ‌ ದೂರಾಗಲಿ ಮಹಾದೇವ|| ಚಿಗುರೆಲೆಗಳು  ಚಿಗುರುವಂತೆ ತರುಲತೆಗಳು ಬೆಳೆಯುವಂತೆ ನವ ಯುಗದಿ ನವ...
- Advertisement -

More Articles Like This

- Advertisement -
close
error: Content is protected !!