spot_img
spot_img

ಕುಕ್ಕರ್ ಆಯ್ತು, ಸೀರೆ ಆಯ್ತು ಈಗ ಕಾಲುಂಗುರ; 1.05 ಕೋಟಿ ಮೌಲ್ಯದ ಬೆಳ್ಳಿ ಕಾಲುಂಗುರ ಜಪ್ತಿ

Must Read

- Advertisement -

ಬೀದರ: ಚುನಾವಣೆಯ ಸಮಯದಲ್ಲಿ ಮನೆ ಮನೆಯ ಹೆಣ್ಣು ಮಕ್ಕಳ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು ಕುಕ್ಕರ್, ಸೀರೆ, ಹಣ ಮುಂತಾದವನ್ನು ಕೊಡುವುದು ಮಾಮೂಲಿಯಾಗಿದ್ದು ಈಗ ಅದು ಹೆಣ್ಣಿನ ಮುತೈದೆಯ ಸಂಕೇತವಾದ ಕಾಲುಂಗುರಕ್ಕೂ ಬಂದು ನಿಂತಿದೆ.

ಈ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದು ದಾಖಲೆ ಇಲ್ಲದ ಹೆಣ್ಣು ಮಕ್ಕಳ ಬೆಳ್ಳಿ ಕಾಲುಂಗುರಗಳು ಔರಾದ ಕ್ಷೇತ್ರದಲ್ಲಿ ಪತ್ತೆಯಾಗಿದ್ದು ಅವುಗಳ ಮೌಲ್ಯ ಒಂದು ಕೋಟಿ ಮೀರಲಿದೆ. ವನ್ನಮಾರಪ್ಪಳಿ ಚೆಕ್ ಪೋಸ್ಟ್ ನಲ್ಲಿ ಬೀದರ ಪೊಲೀಸರು ಕಾಲುಂಗುರಗಳನ್ನು ಜಪ್ತಿ ಮಾಡಿದರು.

- Advertisement -

ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೀದರ ಜಿಲ್ಲಾದ್ಯಂತ ಗಡಿ ಪ್ರದೇಶದಲ್ಲಿ 30 ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಗಡಿ ನಿಯಂತ್ರಣ ಪ್ರದೇಶದಲ್ಲಿ ಪೊಲೀಸ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು ಮಹಾರಾಷ್ಟ್ರ ದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ಮಾಡಿ ಗಡಿ ಪ್ರವೇಶ ಒಳಗೆ ಅವಕಾಶ ಮಾಡಲಾಗಿದೆ.

ಈ ಸಂದರ್ಭದಲ್ಲಿ ಇಷ್ಟೊಂದು ಬೆಳ್ಳಿ ಕಾಲ ಉಂಗುರ ದಾಖಲೆ ಇಲ್ಲದೇ ಮಹಾರಾಷ್ಟ್ರ ದಿಂದ ಕರ್ನಾಟಕಕ್ಕೆ ಔರಾದ ಕ್ಷೇತ್ರ ವ್ಯಾಪ್ತಿ ಒಳಗೆ ಬಿಳಿ ಬಣ್ಣದ ಕಾರಿನಲ್ಲಿ ಪ್ರವೇಶ ಮಾಡಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದ ಹಿನ್ನೆಲೆಯಲ್ಲಿ ಪೊಲೀಸ ಇಲಾಖೆ ತನಿಖೆ ಚುರುಕು ಗೊಂಡಿದೆ.

ಚುನಾವಣೆ ಸಂದರ್ಭದಲ್ಲಿ ಇಷ್ಟೊಂದು ಪ್ರಮಾಣದಲ್ಲಿ  ಬೆಳ್ಳಿ ಕಾಲುಂಗುರ ಸಿಕ್ಕಿದ್ದು ದಾಖಲೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದಲ್ಲಿ ಯಾವುದೇ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ನಗದು ಹಾಗೂ ಬೆಳ್ಳಿ ಆಭರಣಗಳು ರಾಜ್ಯಕ್ಕೆ ಬರುತ್ತಿದೆ.  ಅಕ್ರಮವಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬೆಳ್ಳಿ ಆಭರಣ ಸಾಗಿಸುತ್ತಿದ್ದಾಗ ಜಪ್ತಿ ಮಾಡಲಾಗಿದ್ದು, ಅನಿಲ್, ಗಜಾನನ, ರಾಹುಲ್ ಎಂಬುವವರ ವಿರುದ್ಧ FIR ದಾಖಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.


- Advertisement -

ವರದಿ: ನಂದಕುಮಾರ ಕರಂಜೆ, ಬೀದರ.

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group