spot_img
spot_img

ಗುರುಭವನ ಕಾಮಗಾರಿಗೆ ಎಲ್ಲ ಹಂತದಲ್ಲಿ ಸಹಕಾರ ನೀಡಲಾಗುವುದು – ಆನಂದ ಮಾಮನಿ

Must Read

ಸವದತ್ತಿಃ “ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಗುರುತರ ಜವಾಬ್ದಾರಿ ಮಾಡುವ ಮೂಲಕ ಇಂದು ಉದ್ಘಾಟನೆಗೊಂಡ ಕಾರ್ಯಾಲಯ ಒಳ್ಳೆಯ ವ್ಯವಸ್ಥೆಯನ್ನು ಹೊಂದಿದ್ದು ಇದೇ ರೀತಿ ಶಾಲೆಗಳಲ್ಲಿ ಪ್ರಧಾನ ಗುರುಗಳ ಕಾರ್ಯಾಲಯಗಳು ವ್ಯವಸ್ಥೆಯನ್ನು ಹೊಂದುವಂತಾಗಲಿ.ಶಿಸ್ತು ಮತ್ತು ಸಮಯಪ್ರಜ್ಞೆಯ ಮೂಲಕ ಶಿಕ್ಷಣದ ಚಟುವಟಿಕೆಗಳು ಜರುಗಲಿ. ಗುರುಭವನ ಕಾಮಗಾರಿಗೆ ಸರಕಾರದಿಂದ ದೊರೆಯಬೇಕಾದ ಎಲ್ಲ ನೆರವನ್ನು ಒದಗಿಸುವೆ. ಮುಂಬರುವ ಸಪ್ಟಂಬರ್ ೫ ಅಥವ ಡಿಸೆಂಬರ ಒಳಗಾಗಿ ಉದ್ಘಾಟನೆಗೊಳಿಸುವ ನಿಟ್ಟನಲ್ಲಿ ಕಾರ್ಯ ಜರುಗಿಸಿ”ಎಂದು ವಿಧಾನ ಸಭಾ ಉಪಸಭಾಧ್ಯಕ್ಷರು ಹಾಗೂ ಶಾಸಕರಾದ ಆನಂದ ಮಾಮನಿಯವರು ತಿಳಿಸಿದರು.

ಅವರು ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಾಲಯದ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ. ತಾಲೂಕಾ ಅಧ್ಯಕ್ಷರಾದ ಹೆಚ್.ಆರ್.ಪೆಟ್ಲೂರ, ತಹಶೀಲ್ದಾರ್ ಪ್ರಶಾಂತ ಪಾಟೀಲ.ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತಕುಮಾರ್. ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕದ.ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಮನೋಹರ ಚೀಲದ.ನಿಕಟಪೂರ್ವ ಅಧ್ಯಕ್ಷರಾದ ಸುರೇಶ ಬೆಳವಡಿ. ಕ.ರಾ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ , ನೌಕರರ ಸಂಘದ ಅಧ್ಯಕ್ಷರಾದ ಆನಂದ ಮೂಗಬಸವ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಮೃತ ಸಾಣಿಕೊಪ್ಪ.ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಎಂ.ಎಫ್.ಸಿದ್ದನಗೌಡರ. ತಾಲೂಕು ಉಪಾಧ್ಯಕ್ಷರಾದ ಎಂ.ಎಸ್.ಕೋಳಿ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಕಂಬಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ “ಶಾಸಕರ ಕಾಳಜಿಯಿಂದ ಕೋವಿಡ್ ಸಂದರ್ಭದಲ್ಲಿ ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುವಂತಾದವು. ಈಗಾಗಲೇ ಗುರುಭವನ ಕಾಮಗಾರಿಗೆ ನೀಡಿರುವ ಅನುದಾನದ ಮೂಲಕ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದ್ದು ಮುಂದಿನ ಹಂತದ ಕಾಮಗಾರಿಗೆ ಕೂಡ ಅನುದಾನವನ್ನು ಒದಗಿಸಲು ಈ ಮೂಲಕ ಶಾಸಕರಲ್ಲಿ ಕೋರುವೆ. ಶಿಕ್ಷಕ ಸ್ನೇಹಿ ಶಾಸಕರು ನಮಗೆ ನೀಡಿರುವ ಸಹಕಾರ ಮರೆಯಲಾಗದು” ಎಂದು ನುಡಿದರು.

ಇದೇ ಸಂದರ್ಭದಲ್ಲಿ ನಾಮನಿರ್ದೇಶಿತಗೊಂಡ ಪದಾಧಿಕಾರಿಗಳಾದ ಎಂ.ಎಂ.ನರೇಂದ್ರ ರಾಜ್ಯ ಸಂಘಟನಾ ಕಾರ್ಯದರ್ಶಿ. ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ನವೀನ ಪಾಟೀಲ.ಜಿಲ್ಲಾ ಉಪಾಧ್ಯಕ್ಷರಾಗಿ ನಿರಂಜನ ಮೆಳವಂಕಿ. ಈಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ವಿರೇಶ ಚಂದರಗಿ ಆಯ್ಕೆಯಾದ ಕಾರಣ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿ.ಎಂ.ಎಂ. ನರೇಂದ್ರ ಶಿಕ್ಷಕರ ಸಂಘದ ಕಾರ್ಯಾಲಯದಲ್ಲಿ ಹಾಕಲು ಜ್ಞಾನಪೀಠ ಪ್ರಶಸ್ತಿ ವಿಭೂಷಿಕ ಕನ್ನಡ ಸಾಹಿತಿಗಳ ಪೋಟೋಗಳನ್ನು ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ “ಸಂಘವು ಶಿಕ್ಷಕರಿಗೆ ಸಿಗುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸುವ ಜೊತೆಗೆ ರಚನಾತ್ಮಕ ಕಾರ್ಯಗಳನ್ನು ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಶೈಕ್ಷಣಿಕ ವಾತಾವರಣ ಜರುಗುವಂತಾಗಲಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ”ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಗುರುನಾಥ ಕರಾಳೆ.ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಫ್.ಜಿ.ನವಲಗುಂದ. ಐ.ಪಿ.ಕಿತ್ತೂರ.ಅನಸೂಯ ಮದನಬಾವಿ. ಕಿರಣ ಕುರಿ.ಹಲಕಿ.ಮಿಕಲಿ. ಡಿ.ಎ.ಮೇಟಿ. ನಾಗರತ್ನ ಕುಸುಗಲ್.ಪಾಶ್ಚಾಪೂರ. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ. ಡಾ.ಬಿ.ಐ.ಚಿನಗುಡಿ. ರತ್ನಾ ಸೇತಸನದಿ. ರಾಜು ಭಜಂತ್ರಿ.ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ. ಎಸ್.ಬಿ.ಬೆಟ್ಟದ.ಸಿ.ವ್ಹಿ. ಬಾರ್ಕಿ.ಸಿ.ಆರ್.ಪಿಗಳಾದ ರಾಮಚಂದ್ರ..ತಿಮ್ಮಯ್ಯ. ಕುಶಾಲ ಮುದ್ದಾಪುರ. ಎಚ್.ಎಲ್.ನದಾಫ್. ಜಿ.ಎಸ್.ಚಿಪ್ಪಲಕಟ್ಟಿ. ಸಹಕಾರಿ ಸಂಘದ ನಿರ್ದೇಶಕರಾದ ಗುರುನಾಥ ಪತ್ತಾರ.ನೌಕರರ ಸಂಘದ ಆರ್.ಎನ್.ಗುಡಗಾರ. ಮಹಾಂತೇಶ ಮುಂಡರಗಿ. ಎಂ.ಬಿ.ಮುದ್ದನಗೌಡರ. ಪ್ರೌಢಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಸುಧೀರ ವಾಘೇರಿ. ವಿವಿಧ ಶಾಲೆಗಳಿಂದ ಆಗಮಿಸಿದ್ದ ಮುಖ್ಯೋಪಾಧ್ಯಾಯರುಗಳಾದ ಜೋಶಿ.ಕಡೇಮನಿ. ಎಂ.ಎಸ್.ಚುಂಚನೂರ. ಗಣಬಸಪ್ಪನವರ.ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಸಕರ ಮಾದರಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಎಂ.ಪಿ.ಪಾಟೀಲ ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎಫ್.ಜಿ.ನವಲಗುಂದ ವಂದಿಸಿದರು.

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!