spot_img
spot_img

ಸಮನ್ವಯ ಶಿಕ್ಷಣ ಚಟುವಟಿಕೆ ಕಾರ್ಯಾಗಾರ

Must Read

spot_img
- Advertisement -

‘ಸರ್ವರಿಗೂ ಶಿಕ್ಷಣ’ ಎಂಬ ವಿಚಾರಧಾರೆಯ ವ್ಯಾಪ್ತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳೂ (ವಿಕಲಚೇತನರ/ವಿಶೇಷ ಅಗತ್ಯತೆಯುಳ್ಳ ಮಕ್ಕಳು) ಸಹ ಎಲ್ಲರಂತೆ ಶಿಕ್ಷಣ ಪಡೆಯಲು ಬದ್ಧರಾಗಿದ್ದಾರೆ.ಈ ಮಕ್ಕಳು ಸಾಮಾನ್ಯ ಮಕ್ಕಳ ಜೊತೆಯಲ್ಲಿ ಶಿಕ್ಷಣ ಪಡೆದು ಸಮಾಜದ ಹಾಗೂ ಶಿಕ್ಷಣದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಯಾಗಬೇಕು ಎಂಬುದು ಸಮನ್ವಯ ಶಿಕ್ಷಣದ ಪ್ರಧಾನ ಆಶಯ.

ಈ ದಿಸೆಯಲ್ಲಿ ಸಮನ್ವಯ ಸಂಭ್ರಮ ಎಂಬ ಕೈಪಿಡಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರ ಬೆಳಗಾವಿಯ ಮೂಲಕ ಶ್ರೀ ಮಹಾಲಕ್ಷ್ಮೀ ಮಲ್ಟಿಪರ್ಪಜ ಕೋ-ಅಪ್ ಸೊ.ಲಿ.,ತೋಪಿನಕಟ್ಟಿ ಖಾನಾಪೂರ ತಾಲೂಕು ಇವರ ಪ್ರಾಯೋಜಕತ್ವದಲ್ಲಿ ಎಲ್ಲ ತಾಲೂಕುಗಳ ಬಿ.ಐ.ಇ.ಆರ್.ಟಿಗಳ ಸಹಯೋಗದಲ್ಲಿ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕಟಗೊಂಡು ಜಿಲ್ಲೆಯ ಎಲ್ಲ ಶಾಲೆಗಳಿಗೆ ತಲುಪಿದೆ.

ಕ್ರಿಯಾಶೀಲ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು ಅಭಿವೃದ್ಧಿ ಡಯಟ್ ಮಣ್ಣೂರ ಬೆಳಗಾವಿಯ ಶ್ರೀ ಎಂ.ಎಂ.ಸಿಂಧೂರ ಅವರ ಪ್ರೇರಣಾದಾಯಕ ಚಟುವಟಿಕೆಗಳು ಡಯಟ್ ಬೆಳಗಾವಿಗೆ ಒಂದು ಸುಂದರ ಕಳೆಯನ್ನು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗಲಾರದು.

- Advertisement -

ಈ ಹಿಂದೆ ಡಯಟ್ ಮಣ್ಣೂರ ಹೋಗುವುದೇ ಒಂದು ಪ್ರಯಾಸದಾಯಕವಾಗಿತ್ತು. ಸರಿಯಾದ ಸಂಪರ್ಕ ವ್ಯವಸ್ಥೆ ಇರದ ಸಂದರ್ಭದಲ್ಲಿ ಎಂ.ಎಂ.ಸಿಂಧೂರವರು ಡಯಟ್ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ನಂತರ ಡಯಟ್ ಚಿತ್ರಣವೇ ಸಂಪೂರ್ಣ ಬದಲಾಯಿತು.ಗಣಿತ ಬೋಧನೋಕಪಕರಣಗಳ ಕೊಠಡಿ, ನಲಿ-ಕಲಿ ಕೊಠಡಿ.ಗ್ರಂಥಾಲಯ ಹೀಗೆ ಹತ್ತು ಹಲವು ಚಟುವಟಿಕೆಗಳು ಕೊಠಡಿಗಳ ವಿನ್ಯಾಸದಲ್ಲಿ ಹೊಸ ಕಳೆಯನ್ನು ಪಡೆದುಕೊಂಡವು. ಈ ದಿಸೆಯಲ್ಲಿ ಬೆಳಗಾವಿಯ ಎಸ್.ಎಸ್. ಬಸವನಾಳ ಟಿ.ಟಿ.ಐ.ಕಾಲೇಜಿನಲ್ಲಿ ಶುಕ್ರವಾರ ಒಂದು ದಿನದ ಸಮನ್ವಯ ಶಿಕ್ಷಣ ಚಟುವಟಿಕೆ ಕಾರ್ಯಾಗಾರವನ್ನು ಕೋವಿಡ್ ನಿಯಮಾವಳಿಗಳನ್ವಯ ಸಂಘಟಿಸಲಾಗಿತ್ತು.

ಕೈಪಿಡಿಯಂತೂ ಬಂದಿತು.ಶಾಲೆಗಳಿಗೆ ತಲುಪಿತು.ಇನ್ನು ಮುಂದೆ ಇನ್ನೂ ಹತ್ತು ಹಲವು ಚಟುವಟಿಕೆಗಳು ಬಿ.ಐ.ಇ.ಆರ್.ಟಿಗಳ ಮೂಲಕ ವರ್ಗಕೋಣೆಗೆ ಹಾಗೂ ಗೃಹ ಆಧಾರಿತ ವಿಕಲಚೇತನ ಮಕ್ಕಳಿಗೆ ತಲುಪಬೇಕು ಎಂಬ ಸದಾಶಯದೊಂದಿಗೆ ಈ ಕಾರ್ಯಾಗಾರವನ್ನು ಹಿರಿಯ ಉಪನ್ಯಾಸಕರಾದ ಶ್ರೀ ಬಿ.ಎಸ್.ಕುಸುಗಲ್ ಅವರ ಉಸ್ತುವಾರಿಯಲ್ಲಿ ಸಂಘಟಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಡಿ.ವೈ.ಪಿ.ಸಿಯವರಾದ ಶ್ರೀ ನಂದೇರ್ ಕೂಡ ಆಗಮಿಸಿದ್ದರು. ಖಾನಾಪುರದ ಶ್ರೀ ಎಸ್.ಎನ್.ಕಮ್ಮಾರ.ಆರ್.ಡಿ.ಹುಲಗಿ. ರಾಮದುರ್ಗದ ಆರ್.ಎಸ್.ಸಂಕಣ್ಣವರ.ಡಿ.ಎಲ್.ಭಜಂತ್ರಿ.ಎಸ್.ಎಂ.ಬಡಿಗೇರ.ಬೆಳಗಾವಿ ನಗರದ ಶ್ರೀ ಎಸ್.ಬಿ.ಪಾಟೀಲ.ಶ್ರೀಮತಿ ಆರ್.ಎಸ್.ಕುಲಕರ್ಣಿ.ಶ್ರೀ ಎಸ್.ಬಿ.ಮುಧೋಳ.ಕಿತ್ತೂರಿನ ಅಂಜಲಿ ಕಾವಿಲ್ಕರ.ಆರತಿ ಕಲಘಟಕರ್.ಬಿ.ಡಿ.ಕಲಬಾವಿ.ಬೆಳಗಾವಿ ಗ್ರಾಮೀಣದಿಂದ ಎಸ್.ಜಿ.ಖೂದನವರ.ಶ್ರೀಮತಿ ಎ.ಎಸ್.ಘೋಡಗೇರಿ.ಶ್ರೀಮತಿ ಜಿ.ಎಸ್.ಕಮ್ಮಾರ.ಬಿ.ಜಿ.ಪಟ್ಟಣಶೆಟ್ಟಿ. ಬೈಲಹೊಂಗಲದ ಎಂ.ಐ.ಕಾಜಗಾರ.ಆರ್.ಎನ್.ಇಂಗಳಗಿ.ಪಿ.ಸಿ.ನಾಯ್ಕರ.ಶ್ರೀಮತಿ ಎ.ಎಸ್.ಕುಲಕರ್ಣಿ.ಸವದತ್ತಿಯ ಶ್ರೀಮತಿ ಎಂ.ಎಂ.ಸಂಗಮ. ವೈ.ಬಿ.ಕಡಕೋಳ.ಸಿ.ವ್ಹಿ.ಬಾರ್ಕಿ.ಎಸ್.ಬಿ.ಬೆಟ್ಟದ.ಎಂ.ಎಸ್.ಯಂಕಂಚಿಯವರು ಸೇರಿದಂತೆ ಎಲ್ಲ ತಾಲೂಕುಗಳಿಂದ ವಿಕಲಚೇತನ ಮಕ್ಕಳ ಶಿಕ್ಷಣ ಸಂಪನ್ಮೂಲ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

- Advertisement -

ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಎಂ.ಎಂ.ಸಂಗಮ ಅವರಿಂದ ಗಣೇಶ ಸ್ತುತಿ ಜರುಗಿತು. ನಂತರ ಬೈಲಹೊಂಗಲದ ಆರ್.ಎನ್.ಇಂಗಳಗಿ ತಮ್ಮ ಸ್ವರಚಿತ ಕವನ ದಿವ್ಯಾಂಗರು ಪ್ರಸ್ತುತ ಪಡಿಸಿದರು. ನಂತರ ಡಿ.ವೈ.ಪಿ.ಸಿ ನಂದೇರ ಕೆ.ಎಸ್. ಮಾತನಾಡಿ “ ಬೆಳಗಾವಿಯ ಉಪನಿರ್ದೇಶಕರ ಕಾರ್ಯಾಲಯಕ್ಕೆ ನೀಡಬೇಕಾದ ದಾಖಲಾತಿಗಳು ಕುರಿತು ಮಾತನಾಡಿ ಮುಂಬರುವ ದಿನಗಳಲ್ಲಿ ವಿಕಲಚೇತನ ಮಕ್ಕಳಿಗೆ ದೊರೆಯಬೇಕಾದ ಸಾಧನ ಸಲಕರಣೆಗಳಿಗೆ ನೀಡಬೇಕಾದ ದಾಖಲಾತಿಗಳನ್ನು ತಲುಪಿಸುವುದು ಹಾಗೂ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುವ ಜೊತೆಗೆ ಮುಂಬರುವ ದಿನಗಳಲ್ಲಿ ಎಲ್ಲ ಮಕ್ಕಳು ಶಾಲೆಗೆ ದಾಖಲಾಗಿರಬೇಕು.ಆ ಎಲ್ಲ ಮಕ್ಕಳಿಗೆ ದೊರಕಬೇಕಾದ ಸೌಲಭ್ಯವನ್ನು ಎಲ್ಲರೂ ತನು ಮನ ಧನದೊಂದಿಗೆ ತಲುಪಿಸುವುದು ನಮ್ಮೆಲ್ಲರ ಧ್ಯೇಯವಾಗಲಿ’ ಎಂದು ತಿಳಿಸಿದರು.

ಡಯಟ್ ಪ್ರಾಂಶುಪಾಲರಾದ ಶ್ರೀ ಎಂ.ಎಂ.ಸಿಂಧೂರ ಮಾತನಾಡುತ್ತ “ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.ಮನಸ್ಸೊಂದಿದ್ದರೆ ಮಾರ್ಗವುಂಟು. ಆ ದಿಸೆಯಲ್ಲಿ ವಿವಿಧ ಸಂಘಸಂಸ್ಥೆಗಳಲ್ಲಿ ಇರುವ ಪ್ರತಿಶತ ಮೂರರಷ್ಟು ಅನುದಾನವನ್ನು ವಿಕಲಚೇತನರಿಗೆ ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಲು ಬಿ.ಐ.ಇ.ಆರ್.ಟಿ.ಗಳಿಗೆ ಕರೆ ನೀಡಿದರು.ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಕಲಚೇತನರಿಗೆ ಕುರಿತು ಇರುವ ವಿವರ ಕುರಿತು ಎಲ್ಲ ಬಿ.ಐ.ಇ.ಆರ್.ಟಿ ಗಳಿಗೆ ತರಬೇತಿ ಕೈಗೊಳ್ಳಬೇಕು. ಅಲ್ಲಿ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಚರ್ಚೆ ಕೂಡ ಜರುಗುವಂತಾಗಲಿ ಎಂದು ಹೇಳುತ್ತ ಸರಕಾರದ ಅನುದಾನವನ್ನು ನೆಚ್ಚದೇ ವಿವಿಧ ಸಂಘಟನೆಗಳನ್ನು ತೊಡಗಿಸಿಕೊಳ್ಳುವ ಮೂಲಕ ವೈದ್ಯಕೀಯ ಮೌಲ್ಯಾಂಕನ ನಡೆಸುವಂತಾಗಲಿ ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆಗೆ ಕೈಗೊಳ್ಳಬೇಕಾದ ಯಾವ ಚಟುವಟಿಕೆಗಳನ್ನು ಕೂಡ ಪಟ್ಟಿ ಮಾಡುವಂತೆ ಹಾಗೂ ಸಾಧನ ಸಲಕರಣೆಗಳನ್ನು ಮಕ್ಕಳಿಗೆ ದೊರೆಯುವಂತೆ ಮಾಡಲು ವಿವಿಧ ಸಂಘಸಂಸ್ಥೆಗಳ ಸಹಕಾರದ ಮೂಲಕ ವೈದ್ಯಕೀಯ ಮೌಲ್ಯಾಂಕನವನ್ನು ಸಂಘಟಿಸಲು ತಿಳಿಸಿದರು.ಹಾಗೂ ಎಲ್ಲ ಬಿ.ಐ.ಇ.ಆರ್.ಟಿಗಳಿಗೆ ಫಿಜಿಯೋಥೆರಫಿ ಕೋರ್ಸ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಳ್ಳಲು ಅನುಕೂಲ ಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳುವ ಕುರಿತು ಸಲಹೆ ನೀಡಿದರು.

ನಂತರ ಡಯಟ್‍ನ ಉಪನ್ಯಾಸಕರಾದ ಬಿ.ಎಸ್.ಕುಸುಗಲ್ ರವರು ನಾಲ್ಕು ತಂಡಗಳನ್ನು ಮಾಡಿ ಗುಂಪು ಒಂದಕ್ಕೆ ಗೃಹ ಆಧಾರಿತ ಶಿಕ್ಷಣಕ್ಕೆ ಒಳಪಡುವ ಮಕ್ಕಳಿಗೆ ಹೇಗೆ ನೀಡಬೇಕು.? ಹಾಗೂ ವೇಳಾಪತ್ರಿಕೆ ಗುಂಪು ಎರಡಕ್ಕೆ ಶಾಲಾ ಸಿದ್ಧತಾ ಕೇಂದ್ರವನ್ನು ಯಾವ ರೀತಿ ನಡೆಸಬೇಕು.ಮತ್ತು ಹೇಗೆ ಬಲವರ್ಧನೆಗೊಳಿಸುವುದು.

ಗುಂಪು ಮೂರಕ್ಕೆ ಫಿಜಿಯೋಥೆರಫಿ ಹೇಗೆ ಆಯೋಜಿಸುವುದು ಗುಂಪು ನಾಲ್ಕಕ್ಕೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸುವಲ್ಲಿ ಕೈಗೊಳ್ಳಬೇಕಾದ ರೂಪುರೇಷೆಗಳ ಕುರಿತು ವಿಚಾರಗಳನ್ನು ಲಿಖಿತವಾಗಿ ದಾಖಲಿಸುವ ಮೂಲಕ ತಂಡದಿಂದ ಒಬ್ಬರು ಮಂಡಿಸುವುದಾಗಬೇಕು. ಅದು ನಿಖರವಾಗಿರಲಿ ದಾಖಲೀಕರಣ ಮುಂದಿನ ದಿನಗಳಲ್ಲಿ ಇದೊಂದು ಕೈಪಿಡಿ ಹೊರತರಬೇಕು ಎಂಬ ನಿಟ್ಟಿನಲ್ಲಿ ಚಿಂತನೆ ನಡೆಯಲಿ ಎಂಬ ಸಲಹೆಯೊಂದಿಗೆ ನೀಡಿದರು.

ಅದರಂತೆ ಎಲ್ಲರೂ ತಮ್ಮ ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಜೊತೆಗೆ ಮದ್ಯಾಹ್ನದ ಊಟದ ವಿರಾಮದ ನಂತರ ಪ್ರತಿ ಗುಂಪಿನವರು ತಮಗೆ ನೀಡಿದ ವಿಷಯವನ್ನು ಮಂಡನೆ ಮಾಡಿದರು. ಆಗ ಆ ಗುಂಪಿನವರು ತಿಳಿಸಿದ ಸಂಗತಿಗಳನ್ನು ಹೊರತು ಪಡಿಸಿ ಇನ್ನೂ ಏನಾದರೂ ವಿಚಾರಗಳು ಇದ್ದಲ್ಲಿ ಉಳಿದವರು ತಿಳಿಸುವ ಮೂಲಕ ಸಲಹೆಗಳನ್ನು ಸ್ವೀಕರಿಸಿ ಅದನ್ನು ಟಿಪ್ಪಣಿ ಮಾಡಿಕೊಳ್ಳುವ ಜೊತೆಗೆ ಮುಂಬರುವ ದಿನಗಳಲ್ಲಿ ಕಾರ್ಯಾಗಾರಕ್ಕೆ ಬರುವಷ್ಟರಲ್ಲಿ ಈಗ ನೀಡಿದ ಚಟುವಟಿಕೆಗಳನ್ನು ಮತ್ತು ಈಗಾಗಲೇ ನೀಡಿದ ಆಳಿಸುವುದು ಬರವಣಿಗೆ 21 ನ್ಯೂನತೆಗಳ ಬಗ್ಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಯಾವ ಕ್ರಮ ಅನುಸರಿಸುವುದು ಎಂಬ ಸಂಗತಿಗಳನ್ನು ಆಯಾ ತಾಲೂಕಿನವರು ಸಿದ್ಧತೆ ಮಾಡಿಕೊಂಡು ಬರುವಂತೆ ಸೂಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವೈ.ಬಿ.ಕಡಕೋಳ ನಿರ್ವಹಿಸಿದರು. ಎಸ್.ಎಮ್.ಕಮ್ಮಾರ ಕೊನೆಗೆ ವಂದಿಸುವುದರೊಂದಿಗೆ ಒಂದು ದಿನದ ಕಾರ್ಯಾಗಾರ ಕೊನೆಗೊಂಡಿತು.


ವರದಿಃ ವೈ.ಬಿ.ಕಡಕೋಳ ಬಿ.ಐ.ಇ.ಆರ್.ಟಿ. ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group