ಕರೋನ ಚುಟುಕುಗಳು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಕರೋನ ಚುಟುಕುಗಳು

ಕರೋನಾ ಡಾಕ್ಟರ ಕೈಯ್ಯಾನ ಸೂಜಿ
ಒಂದ ಚುಚ್ಚಿದ್ರ ಆಕ್ಕಿನಿ ಅಲ್ಲೆ ಪೂಜಿ
ಜನರಿಗೆ ಮಾಡಾಕ್ಹತ್ಶಾರ ಬಾಳ ಕಾಳಜಿ
ಇನ್ನ ಕೆಲದಿನದಾಗ ಅಕ್ಕಿ ನೀ ಮಾಜಿ||

ಕರೋನಾ ಏನ !ನಿನ್ನ ಕೆಟ್ಟ ಸಂಗ
ಎಲ್ಲೆಡೆ ಬಾರಿಸುತಿದೆ ಮರಣಮೃದಂಗ
ಜನರಾಗಿದ್ದಾರೆ ನಿನಗಾಗಿ ದಂಗ
ನೀ ಅಕ್ಕಿ ಒಂದಿ ಹುಚ್ಚಮಂಗ

ಪ್ರಾಣಿ- ಪಕ್ಷಿಗಳಿಗಿಲ್ಲ ಕರೋನ
ಅವುಗಳಿಗೆ ಬೇಕಾಗಿಲ್ಲ ಹಣ
ಮಾನವ ಕುಲಕೆ ಅಂಟಿ ಕರೋನ
ಅವನ ದುರಾಸೆಯಿಂದ ಬಿಳುತ್ತವೆ ಹೆಣಾ

- Advertisement -

ಬಾಳ ಮಂದಿಗೆ ಹಾಕಿದಿ ಕರೋನಾ ತಳಕ
ಗೊತ್ತಾಗೈತ್ತಿ ನಿನ್ನ ಒಳಗಿನ ಹುಳಕ
ನೋಡಾಕ ಎಷ್ಟಾದ್ರ ಅದಿ ನೀ ಕೊಳಕ
ನಿನ್ನ ಕಳಸಿ ಬಂದ ಮಾಡತ್ತೀವಿ ಜಳಕ ||

ನಿತ್ಶ ಮಾಡು ನೀ ವ್ಯಾಯಮ
ರೋಗಕ್ಕೆ ಬೇಕಾಗಿಲ್ಲ ಮಲಾಮ
ಯಾವಾಗಲೂ ಇರ್ತಿ ನೀ ಆರಾಮ
ಕರೋನಾ ಹೊಡಿತೈತ್ತಿ ನಿನಗ ಸಲಾಮ||

ಉರುಳುತ್ತಿವೆ ದಿನಗಳು
ಎಲ್ಲೆಂದರಲ್ಲಿ ಬಿಳುತ್ತಿವೆ ಹೆಣಗಳು
ಕರೋನಾದಿಂದ ದೂರಾದವು ಸಂಬಂಧಗಳು
ಸಾಗಿಬರಲಿ ನಮಗೆ ಒಳ್ಳೆಯ ದಿನಗಳು

ಕರೋನಾ ನಿನಗ ಹಿಂದಿಲ್ಲ ˌಮುಂದಿಲ್ಲ
ಇಡಿ ಜಗತ್ತನ್ನೇ ಮಾಡಿದಿ ಕೋಲಾಹಲ
ಹೆಂಗ ಇರಬೇಕ ನಿನ್ನ ಇಂದ್ರಜಾಲ
ನೀ ಹೋಗದಿದ್ರ ಕತ್ತರಸ್ತಿವಿ ನಿನ್ನಬಾಲ||

ಕರೋನಾ ನಿಂದು ದಿನಕ್ಕೊಂದು ನಾಟಕ
ಯಾರು ಬರುದಿಲ್ಲ ನಿನ್ನ ಸನೆಕ
ಎಷ್ಟು ಮ0ದಿನ ಏರ್ಸಿದೆ ಚಟ್ಟಕ್ಕ
ನಿನ್ನ ಅಂತ್ಯ ಮಾಡಲು ನಾವು ಬಿದ್ದೆವು ಹಟಕ


ಬಸವರಾಜ ಕೋಟಿ, ಶಿಕ್ಷಕರು
ಕುಲಗೋಡ

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!