ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟ ತಂದೆಗೆ ರೂ. ೩೦ ಸಾವಿರ ದಂಡ

0
53

ದಾವಣಗೆರೆ – ತನ್ನ ಅಪ್ರಾಪ್ತ ಮಗನಿಗೆ ಬುಲೆಟ್ ಓಡಿಸಲು ಕೊಟ್ಟ ತಂದೆಗೆ ದಾವಣಗೆರೆ ಜೆಎಮ್ಎಫ್ ಸಿ ನ್ಯಾಯಾಲಯ ರೂ. ೩೦ ಸಾವಿರ ದಂಡ ವಿಧಿಸಿರುವುದಾಗಿ ದಾವಣಗೆರೆ ಸಂಚಾರ ವೃತ್ತ ನಿರೀಕ್ಷಕರು ಹೇಳಿದ್ದಾರೆ.

ವಿಡಿಯೋ ಒಂದರಲ್ಲಿ ಅವರ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಪ್ರಾಪ್ತ ಬಾಲಕರಿಗೆ ಪಾಲಕರು ಯಾವುದೇ ವಾಹನ ಚಲಾಯಿಸಲು ನೀಡಬಾರದು ಎಂದು ತಿಳಿಸಿದ್ದಾರೆ.

ದಿ. ೧.೪.೨೫ ರಂದು ಅಪ್ರಾಪ್ತ ಬಾಲಕನಿಗೆ ಬುಲೆಟ್ ಚಾಲನೆ ಮಾಡಲು ಗಾಡಿಯ ಮಾಲೀಕ ನಾಗನಗೌಡ ಅವರು ಚಾಲನೆ ಮಾಡಲು ಕೊಟ್ಟಿದ್ದರು. ಸಂಚಾರಿ ಪೊಲೀಸರು ಬಾಲಕನನ್ನು ತಡೆದು ಪ್ರಕರಣ ದಾಖಲಿಸಿ ದಾವಣಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ದಂಡ ವಿಧಿಸಿದೆ. ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆಗೆ ಕೊಡುವುದರಿಂದ ಅದು ಅಪಘಾತಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಯಾರೂ ಅಪ್ರಾಪ್ತರಿಗೆ ವಾಹನ ಕೊಡಬಾರದು ಎಂದು ತಮ್ಮ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here