ಬೆಂಗಳೂರು – ಸಿಡಿ ಲೇಡಿಯನ್ನು ವಿಚಾರಣೆಗೆಂದು ತಮ್ಮ ವಶಕ್ಕೆ ಒಪ್ಪಿಸಬೇಕೆಂಬ ಎಸ್ಐಟಿ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ. ಅಲ್ಲದೆ ಸೆ.೧೬೪ ರಡಿ ಆಕೆಯ ಹೇಳಿಕೆಯನ್ನು ದಾಖಲಿಸಲು ಕೂಡ ಕೋರ್ಟು ಅನುಮತಿ ನೀಡಿದೆ.
ತನಗೆ ಎಸ್ಐಟಿ ಮೇಲೆ ಅಥವಾ ಪೊಲೀಸರ ಮೇಲೆ ನಂಬಿಕೆಯಿಲ್ಲ ಹಾಗಾಗಿ ನೇರವಾಗಿ ಕೋರ್ಟಿಗೆ ಬಂದು ನ್ಯಾಯಾಧೀಶರ ಎದುರು ತನ್ನ ಹೇಳಿಕೆ ಕೊಡುವುದಾಗಿ ಯುವತಿ ಹೇಳಿದ್ದನ್ನು ವಕೀಲ ಜಗದೀಶ ಅವರು ಕೋರ್ಟಿಗೆ ತಿಳಿಸಿದಾಗ ಒಪ್ಪಿಕೊಂಡ ನ್ಯಾಯಾಧೀಶರು, ಆಕೆಯ ಹೇಳಿಕೆಯನ್ನು ಗುಪ್ತವಾಗಿಡಲಾಗುವುದು. ಆಕೆಯ ಹೇಳಿಕೆಯ ನಂತರ ವಿಚಾರಣೆಗೆ ಎಸ್ಐಟಿ ವಶಕ್ಕೆ ಒಪ್ಪಿಸಲಾಗುವುದು ಎಂದು ಹೇಳಿ ಯುವತಿಯ ಮನವಿಯನ್ನು ಪುರಸ್ಕರಿಸಿದ್ದಾರೆ.
ಯಾವುದೇ ಕ್ಷಣದಲ್ಲಿ ಸಿಡಿ ಯುವತಿಯು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದು ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರುವ ಸಿಡಿ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ