ಬೀದರ – ಮುಸ್ಲಿಮರಿಗೆ ತೋರಿಸುವ ಪ್ರೀತಿಯನ್ನು ಕಾಂಗ್ರೆಸ್ ಪಕ್ಷ ಹಿಂದೂಗಳಿಗೂ ತೋರಿಸಬೇಕು ಅವರೂ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ ಎಂದು ಮಾಜಿ ಸಚಿವ ಪ್ರಭು ಚವ್ಹಾಣ ಹೇಳಿದರು.
ಜಿಲ್ಲೆಯ ಔರಾದ ಪಟ್ಟಣ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂಗಳಿಗೆ ಮೋಸ ಮಾಡುತ್ತಿದೆ. ಮುಸ್ಲಿಮರಿಗೇ ಹೆಚ್ಚು ಪ್ರೀತಿ ತೋರಿಸಿ ತಾರತಮ್ಯ ಮಾಡುತ್ತಿದೆ ಎಂದರು.
ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರದಲ್ಲೂ ವಕ್ಫ್ ಬೋರ್ಡ್ ಜಮೀನು ಕಬಳಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ಇದೆ. ಕಾಂಗ್ರೆಸ್ ಅಂದರೆ ಲವ್, ಲ್ಯಾಂಡ್ ಜಿಹಾದ್ ಪಕ್ಷವಾಗಿ ಹೊರಹೊಮ್ಮಿದೆ.ವಕ್ಫ ಬೋರ್ಡ್ ನಿಂದಾ 9 ಲಕ್ಷಕ್ಕೂ ಅಧಿಕ ರೈತರ ಜಮೀನು ಕಬಳಿಸಿದೆ. ವಕ್ಪ್ ಬೋರ್ಡ್ ಗೆ ತೆರೆಮರೆಯಲ್ಲಿ ಸಿ.ಎಂ ಸಪೋರ್ಟ್ ಮಾಡುತ್ತಿದ್ದಾರೆ. ೧೨ ನೂರು ಎಕರೆ ಜಮೀನು ವಿಜಯಪುರ ಜಿಲ್ಲೆಯೊಂದರಲ್ಲೇ ಒಂದು ತಿಂಗಳಲ್ಲಿ ವಕ್ಪ ಬೋರ್ಡ್ ನಿಂದಾ ರೈತರ ಜಮೀನು ಒತ್ತುವರಿಯಾಗಿದೆ ಹೀಗಾದರೆ ರೈತರು ಹೇಗೆ ಬದುಕಬೇಕು ಎಂದು ಪ್ರಭು ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಬೋರ್ಡ್ ಮಸೀದಿಗಳಿಗೆ ಜಮೀನು ಕೊಟ್ಟಂತೆ ದೇವಸ್ಥಾನಗಳಿಗೂ ಕೊಡಿ..ಒಂದೆ ಸಮುದಾಯದ ಓಲೈಕೆ ಮಾಡುವುದು ಇದು ಸರಿ ಅಲ್ಲ.ಯಾಕೆಂದರೆ ಎಲ್ಲರೂ ಮತಹಾಕಿರುತ್ತಾರೆ ಎಂದರು
ವರದಿ : ನಂದಕುಮಾರ ಕರಂಜೆ, ಬೀದರ