spot_img
spot_img

ರೌಡಿ ಸೀಟರ್ ಗಳಿಗೆ ಸಿಪಿಐ ರವಿಂದ್ರ ಉಕ್ಕುಂದ ವಾರ್ನಿಂಗ್

Must Read

ಸಿಂದಗಿ: ಜೀವನದ ಯಾವೋದೋ ಗಳಿಗೆಯಲ್ಲಿ ತಪ್ಪು ಮಾಡಿದ್ದೀರಿ ಅದನ್ನು ತಿದ್ದುಕೊಂಡು ನಡೆದರೆ ಸರಿ ಇಲ್ಲದಿದ್ದರೆ ಹ್ಯಾಂಗೆ ಬಾಲಾ ಕಟ್ ಮಾಡಬೇಕು ಎನ್ನುವುದು ನನಗೆ ಗೊತ್ತಿದೆ. ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿ ಹಳೆಯದನ್ನು ಮರೆತು ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಿ ಎಂದು ಸಿಪಿಐ ರವಿಂದ್ರ ಉಕ್ಕುಂದ ಖಡಕ್ ವಾರ್ನಿಂಗ್ ಮಾಡಿದರು.

ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರೌಡಿಶೀಟರ್ ಪರೇಡನಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಆದೇಶದಂತೆ ರೌಡಿಗಳ ಪರೇಡ್ ಮಾಡಲಾಗುತ್ತಿದೆ, ಭೀಮಾತೀರದ ಇತಿಹಾಸ ಬೇರೆ ಇದ್ದರೆ ಸಿಂದಗಿ ಇತಿಹಾಸವೇ ಬೇರೆಯಾಗಿದೆ. ಕೆಲವರ್ಷಗಳ ಹಿಂದೆ ತಹಶೀಲ್ದಾರ ಕಛೇರಿ ಆವರಣದಲ್ಲಿ ಪಾಕಿಸ್ತಾನ ಧ್ವಜ ಪ್ರಕರಣದಲ್ಲಿ 5ನೇ ಆರೋಪಿಯಾದ ಗೌರಿ ಲಂಕೇಶ ಹತ್ಯೆ ಪ್ರಕರಣ ಮೊದಲನೇ ಆರೋಪಿಯಾಗಿದ್ದಾನೆ. ಹಳೇ ನೀರು ಹೋಗಬೇಕು ಹೊಸ ನೀರು ಬರಬೇಕು ಎನ್ನುವ ನಿಟ್ಟಿನಲ್ಲಿ ಸತತ 10 ವರ್ಷಗಳಿಂದ ಯಾವುದೇ ಪ್ರಕರಣದಲ್ಲಿ ಭಾಗಿಯಾಗದಿದ್ದರೆ ಅವರನ್ನು ರೌಡಿ ಶೀಟರ್ ದಿಂದ ತೆಗೆದು ಹಾಕಬೇಕು ಎಂದು ಮೇಲಾಧಿಕಾರಿಗಳ ನಿರ್ದೇಶನವಿದ್ದು. ಸಿಂದಗಿ ಪೊಲೀಸಠಾಣಾ ವ್ಯಾಪ್ತಿಯಲ್ಲಿ ಒಟ್ಟು 112 ರೌಡಿ ಸೀಟರ್‍ ಗಳಿದ್ದಾರೆ ಅದರಲ್ಲಿ ಎ58, ಬಿ44, ಸಿ 10 ಹೀಗೆ 3 ವರ್ಗಗಳನ್ನಾಗಿ ಪರಿಗಣಿಸಿದ್ದು ಇವರಲ್ಲಿ 36 ಜನರು ಮಾತ್ರ ಹಾಜರಾಗಿದ್ದಾರೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ ಇನ್ನೂ ಕೆಲವರು ಜೈಲಿನಲ್ಲಿದ್ದಾರೆ. ಗೈರು ಉಳಿದವರಿಗೆ ಮುಂದಿದೆ ಒಳ್ಳೆಯ ಪಾಠ ಎಂದು ಹೇಳಿದ ಅವರು ಸಿಂದಗಿ ಶಾಂತವಾಗಿದೆ ಗಲಭೆಗೆ ಅವಕಾಶ ನೀಡಬೇಡಿ ಪ್ರಕರಣಗಳಲ್ಲಿ ಭಾಗಿಯಾದವರು ಠಾಣೆಯಿಂದ ಕರೆಕೊಟ್ಟಾಗ ಬರಬೇಕು ಗೈರು ಉಳಿದವರಿಗೆ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಿಎಸ್‍ಐ ನಿಂಗಪ್ಪ ಪೂಜಾರಿ ಮಾತನಾಡಿ, ರೌಡಿ ಸೀಟರ್‍ಗಳ ಫೇಸ್‍ಬುಕ್, ವಾಟ್ಸಾಪಗಳನ್ನು ನಿತ್ಯ ಪರಿಶೀಲನೆ ಮಾಡುತ್ತಿದ್ದೇವೆ ಯಾವುದೇ ತರಹ ಕಾಮೆಂಟ್ ಮಾಡುವುದಾಗಲಿ ಬೆದರಿಕೆ ಸಂದೇಶ ಕಳಿಸುವುದಾಗಲಿ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎಚ್ಚರವಾಗಿರಿ ಎಂದು ಗದರಿಸಿದರು.


ಶಾಂತಿ ಸುವ್ಯವಸ್ಥೆ ಧಕ್ಕೆ ತಂದರೆ ಅವರು ಎಷ್ಟೇ ಪ್ರಭಾವಿಯಾದರೂ ಅಂತವರನ್ನು ಸುಮ್ಮನೇ ಬಿಡುವದಿಲ್ಲ,ಇದರಲ್ಲಿ ಕೆಲವು ರೌಡಿಗಳು ಪರೇಡ್‍ಗೆ ಹಾಜರಾಗಿಲ್ಲ,ಅಂಥವರನ್ನು ಗುರುತಿಸಿ ಅವರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಲು ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ,

-ಸಿಪಿಐ ರವಿಂದ್ರ ಉಕ್ಕುಂದ

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!