ಮೂಡಲಗಿ : ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ನಾಡು ನುಡಿಯ ಬಗ್ಗೆ ಅಭಿಮಾನ ಗೌರವ ಬೆಳೆಸಿಕೊಂಡು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕೆಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ವೀರಭದ್ರ ಗುಂಡಿ ಹೇಳಿದರು.
ಅವರು ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ನಡೆದ ೬೭ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ನಮ್ಮ ನಾಡಿನ ಬಾಷೆ, ಜಲ, ನೆಲಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಒಳ್ಳೆಯ ಸಂಸ್ಕೃತಿ ಯಿದೆ. ಬೌಗೋಳಿಕವಾಗಿ ಸಂಪತ್ಭರಿತವಾಗಿರುವ ಈ ನಾಡು ಪ್ರಾಚೀನ ಕಾಲದಿಂದ ಹಲವಾರು ಋಷಿ ಮುನಿಗಳ ಸಂತರ ಶರಣರ ಮಹಾ ತಪಸ್ವಿಗಳ ನೆಲೆಯಾಗಿರುವ ಇಲ್ಲಿ ಅನೇಕ ರಾಜ ಮಹಾರಾಜರು ಅಡಳಿತ ನಡೆಸಿ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಎಂದರು
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರು ಹಾಗೂ ಕರವೇ ಪದಾಧಿಕಾರಿಗಳು ಮುಂಚಿನ ದಿನ ರಾತ್ರಿ ಪಂಜಿನ ಮೆರವಣಿಗೆ ಮಾಡಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು. ಹಾಗೂ ರಾಜ್ಯೋತ್ಸವ ನಿಮಿತ್ತವಾಗಿ ಏರ್ಪಡಿಸಲಾಗಿದ್ದ ಹಲವಾರು ಕನ್ನಡಪರ ಸ್ಪರ್ಧಾವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ ಗ್ರಾ.ಪಂ. ಅಧ್ಯಕ್ಷರಾದ ಪುಂಡಲೀಕ ಬಾಗೇವಾಡಿ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ಕುಮಾರ ಮರ್ದಿ, ಸದಸ್ಯರಾದ ತಿಪ್ಪಣ್ಣ ಹುಲಕುಂದ, ಸುನಂದಾ ಭಜಂತ್ರಿ, ಭರಮಪ್ಪ ಹರಿಜನ, ಕರವೇ ಅಧ್ಯಕ್ಷ ಬಸವರಾಜ ಹುಲಕುಂದ, ರಮೇಶ ರಾಮಗಾನಟ್ಟಿ ಆನಂದ ಉಪ್ಪಾರ, ಶಿಕ್ಷಕರಾದ ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶೀಲಾ ಕುಲಕರ್ಣಿ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಜ್ಯೋತಿ ಉಪ್ಪಾರ, ಮಹಾದೇವ ಗೋಮಾಡಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ರೂಪಾ ಗದಾಡಿ, ಶಿವಲೀಲಾ ಹಣಮನ್ನವರ, ಖಾತೂನ ನದಾಫ, ರೇಖಾ ಗದಾಡಿ, ಹೊಳೆಪ್ಪ ಗದಾಡಿ ಉಪಸ್ಥಿತರಿದ್ದರು.