ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ರವರನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಜೀವಿನಿ ಟ್ರಸ್ಟ್ ವತಿಯಿಂದ ಋಗ್ವೇದಿ ಕುಟೀರದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಸಂಜೀವಿನಿ ಟ್ರಸ್ಟಿನ ಮುಖ್ಯಸ್ಥರಾದ ಸತೀಶ್ ಕುಮಾರ್ ಮಾತನಾಡಿ, ಕಳೆದ 35 ವರ್ಷಗಳಿಂದ ನಿರಂತರವಾಗಿ ಕನ್ನಡ ನಾಡು ,ನುಡಿ ಜಲ ,ಭಾಷೆ ,ಸಂಸ್ಕೃತಿ ,ಪರಂಪರೆ ಯುವ, ಶಿಕ್ಷಣ , ಸಾಹಿತ್ಯ ರಾಷ್ಟ್ರೀಯ , ಆಧ್ಯಾತ್ಮಿಕ ಹಾಗೂ ಸಮಗ್ರ ಕ್ಷೇತ್ರಗಳಲ್ಲಿ ನಿರಂತರವಾಗಿ ಸಾವಿರಾರು ಕಾರ್ಯಕ್ರಮ, ಉಪನ್ಯಾಸಗಳನ್ನು ನಿರ್ವಹಿಸಿ, ಹಲವಾರು ಸಂಘಟನೆಗಳ ಅಧ್ಯಕ್ಷರಾಗಿ, ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಋಗ್ವೇದಿ ಯವರನ್ನು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಗೌರವಿಸುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಕಲಾಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಗೌರಿ ರಾಮಕೃಷ್ಣ ಮಾತನಾಡಿ ಸಂಜೀವಿನಿ ಟ್ರಸ್ಟ್ ನಿಂದ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಿಸುವ ಮೂಲಕ ಸಮಾಜಕ್ಕೆ ಸಾಧಕರನ್ನು ಮತ್ತಷ್ಟು ಪರಿಚಯಿಸುವ ಹಾಗೂ ಅವರಿಗೆ ಸಮಾಜದ ಸೇವೆಯನ್ನು ಗುರುತಿಸುವ ಮೂಲಕ ಗೌರವವನ್ನು ಸಲ್ಲಿಸುವ ಕಾರ್ಯವನ್ನು ಮಾಡುತ್ತಿರುವುದು ಸಮಯೋಚಿತ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಸುರೇಶ್ ಋಗ್ವೇದಿ ಸಮಾಜಕ್ಕೆ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ನಮ್ಮ ಸಮಯವನ್ನು ವ್ಯರ್ಥ ಮಾಡದೆ ಸಮಾಜದ ಕಾರ್ಯವನ್ನು ಸರಳ ಸಂಭ್ರಮದಿಂದ ಪ್ರೀತಿಯಿಂದ ಮಾಡೋಣ . ಶ್ರೇಷ್ಠ ಕೆಲಸಗಳು ಸದಾ ಕಾಲ ಉಳಿಯುತ್ತದೆ. ಪ್ರತಿ ಕ್ಷಣವನ್ನು ವ್ಯರ್ಥ ಮಾಡದೇ ಸಮಾಜದ ಚಿಂತನೆ ಹಾಗೂ ಶಕ್ತಿಮೀರಿ ಮಾಡೋಣ. ಸಮಾಜವನ್ನು ಪ್ರೀತಿಸುವುದರಿಂದ ಆಯಸ್ಸು, ವೃದ್ಧಿಯಾಗುತ್ತದೆ. ಸಂತೋಷ ,ಸಂಭ್ರಮ, ಆನಂದ ಸ್ನೇಹ, ಸಹಕಾರ, ಪ್ರೀತಿ ,ವಿಶ್ವಾಸದ ಆಶೀರ್ವಾದಗಳು ನಮ್ಮಲ್ಲಿ ಮತ್ತಷ್ಟು ಬಲವನ್ನು ನೀಡುತ್ತದೆ ಎಂದರು.
ಝಾನ್ಸಿ ಮಕ್ಕಳ ಪರಿಷತ್ತಿನ ಗೌರವಾಧ್ಯಕ್ಷರಾದ ಕುಸುಮ ಋಗ್ವೇದಿಯವರು ಮಾತನಾಡಿ ಪ್ರತಿ ಒಬ್ಬರು ತಮ್ಮ ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜದ ಕಾರ್ಯಗಳಲ್ಲಿ ಪಾಲ್ಗೊಳ್ಳೋಣ. ಕೈಲಾದಷ್ಟು ಸಹಾಯವನ್ನು ನೀಡೋಣ .ಯಾರನ್ನು ದೂಷಿಸದೆ ನಿರ್ಮಲ ಮನಸ್ಸಿನಿಂದ ಸೇವೆ ಸಲ್ಲಿಸೋಣ ಎಂದು ತಿಳಿಸಿದರು.
ಸಾಂಸ್ಕೃತಿಕ ಸಿರಿ ವೇದಿಕೆಯ ಡಾ. ಅಕ್ಷತಾ ಜೈನ್, ನಂದಿನಿ ರವಿಕುಮಾರ್ , ನಿವೃತ ಮುಖ್ಯ ಶಿಕ್ಷಕಿ ಕೆ ವಿ ಶ್ರೀಮತಿ , ಶಿಕ್ಷಕಿಅನಿತಾ, ಗುಂಡ್ಲುಪೇಟೆ ರಮೇಶ್, ವಿಜಯ್ ಕುಮಾರ್, ರವಿ , ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಋಗ್ವೇದಿ,ಝಾನ್ಸಿ ಮಕ್ಕಳ ಪರಿಷತ್ತಿನ ಅಧ್ಯಕ್ಷರಾದ ಶ್ರಾವ್ಯ ಋಗ್ವೇದಿ ಇದ್ದರು