spot_img
spot_img

ಯಾದವಾಡದಲ್ಲಿ ರಾಜ್ಯೋತ್ಸವ ನಿಮಿತ್ತ ಸಾಂಸ್ಕೃತಿಕ ಸಿರಿ ಕಾರ್ಯಕ್ರಮ

Must Read

spot_img
- Advertisement -

ಮೂಡಲಗಿ: ರಾಜ್ಯದ ಕಾಸರಗೋಡ ಮತ್ತು ಬೆಳಗಾವಿಯಲ್ಲಿ ಗಡಿಗಾಗಿ ಆಗುತ್ತಿರುವ ಸಮಸ್ಯೆಗಳನ್ನು ಆಯಾ ಅವಧಿಯಲ್ಲಿಯ ಸರ್ಕಾರಗಳು ವಿಶೇಷ ಗಮನ ನೀಡಿದ್ದರ ಪರಿಣಾಮವಾಗಿ ಅದು ಸಮಸ್ಯೆಯಾಗಿ ಉಳಿದಿರುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಘಟಕ ಮತ್ತು ಮೂಡಲಗಿ ತಾಲೂಕಾ ಕನ್ನಡ ರಾಜ್ಯೋತ್ಸವ ಸಮಿತಿ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2008 ರಲ್ಲಿ ಜೆ.ಡಿಎಸ್ ಮತ್ತು ಬಿಜೆಪಿ ನೇತೃತ್ವದ ಸರಕಾರ ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನ ನಡೆಸುವುದರ ಮುಖಾಂತರ ಬೆಳಗಾವಿಯು ಕರ್ನಾಟಕದ ಅವಿಭಾಜ ಅಂಗವೆಂದು ತೋರಿಸಿಕೊಟ್ಟಿದೆ ಎಂದರು.

- Advertisement -

ಯಡಿಯುರಪ್ಪ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸುವ ಮೂಲಕ ನಮ್ಮ   ಆಡಳಿತ ಮತ್ತು ನಮ್ಮ ಸರ್ಕಾರಗಳ ನಿರ್ಧಾರವು ಅಚಲವಾಗಿದೆ. ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ನಡೆಸುವ ಮೂಲಕ ಯಾರಿಗೆ ಉತ್ತರ ಕೊಡಬೇಕೋ ಅವರಿಗೆ ಉತ್ತರ ಕೊಟ್ಟಾಗಿದೆ ಎಂದರು.

ಒಂದು ಕಾಲದಲ್ಲಿ ಬೆಳಗಾವಿ ನಗರದಲ್ಲಿ ಭಾಷೆ ಹೆಸರಿನಲ್ಲಿ 7 ಜನ ಶಾಸಕರು, ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿಯಲ್ಲಿ ಕೆಲವರು ಆಯ್ಕೆಯಾಗುತ್ತಿದ್ದರು. ಈಗ ಕಾಲ ಬದಲಾಗಿದೆ. ಬೆಳಗಾವಿಯ ನಗರಪಾಲಿಕೆಯು ಕನ್ನಡ ಭಾಷಿಕರ ಕೈಯಲ್ಲಿದೆ. ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೀಯ ವಿಚಾರಕ್ಕೆ ಬದ್ಧರಾಗಿ ಅನೇಕ ಯುವ ಮರಾಠಿಗರು ಸಹ ನಮ್ಮೊಂದಿಗೆ ಬಂದಿದ್ದಾರೆ. ಹೀಗಾಗಿ ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು 35 ಸ್ಥಾನ ಗೆಲ್ಲಲು ಸಾಧ್ಯವಾಗಿದೆ ಎಂದರು.

ಉಪನ್ಯಾಸಕಿ ನಜ್ಮಾಭಾನು ಚಿಕ್ಕನೆರಳೆ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುವುದಕ್ಕೆ ಶ್ರಮಿಸಿರುವ ಎಲ್ಲರನ್ನೂ ಪ್ರತಿಯೊಬ್ಬರು ಸ್ಮರಿಸಬೇಕು. ಪ್ರಸ್ತುತ ಬೇರೆ ಭಾಷಿಕರು ಕನ್ನಡವನ್ನು ನುಂಗಿ ಹಾಕುವ ಸಾಧ್ಯತೆ ಇದೆ, ಕರ್ನಾಟಕ ಏಕೀಕರಣದ ಹೋರಾಟವನ್ನು ಮತ್ತು ನಮ್ಮ ಶಾಲೆಗಳನ್ನು ಕಟ್ಟಿದವರ ಬಗ್ಗೆ  ನಮ್ಮ ಮಕ್ಕಳಿಗೆ ಪಾಲಕರು ಅರ್ಥ ಮಾಡಿಕೊಡಬೇಕು. ಕನ್ನಡಕ್ಕಾಗಿ ನಾವೆಲ್ಲರು ಒಂದು ಎನ್ನುವ ಸಾಮರಸ್ಯದಲ್ಲಿ ನಡೆದರೆ ಮಾತ್ರ ಧರ್ಮ ಮತ್ತು ಅನ್ನವನ್ನು ನೀಡುವ ನೆಲಕ್ಕೆ ಬೆಲೆ ಕೊಟ್ಟಂತಾಗುವುದು ಎಂದರು.

- Advertisement -

ಕಾಂಗ್ರೇಸ್ ಮುಖಂಡ ಅರವಿಂದ ದಳವಾಯಿ, ಜಾತಿ, ಮತ, ಪಂಥವನ್ನು ಎಲ್ಲವನ್ನು ಮೀರಿ ಎಲ್ಲರನ್ನೂ ಒಂದುಗೂಡಿಸಿ ಒಂದೇ ವೇದಿಕೆ ಮೇಲೆ ತರುವ ಶಕ್ತಿ ಕನ್ನಡ ಭಾಷೆಗೆ ಇದೆ, ಆ ಕೆಲಸವನ್ನು ಯಾದವಾಡ ಗ್ರಾಮದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯವರು ಕಲ್ಮೇಶ್ವರ ಗಾಣಿಗೇರ ನೇತೃತ್ವದಲ್ಲಿ ಮಾಡಿದ್ದಾರೆ ಎಂದರು.

ಸಂಘಟಕ ಮತ್ತು ಯಾದವಾಡ ಗ್ರಾ.ಪಂ ಸದಸ್ಯ ಹಾಗೂ ವೇದಿಕೆ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗೇರ  ಮಾತನಾಡಿ, ಕಳೆ ಹದಿನೈದು ವರ್ಷಗಳಿಂದ  ರಾಜಕೀಯೇತರವಾಗಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕೋಲಾರದ ಶ್ರೀ ಕಲ್ಲಿನಾಥ ದೇವರು, ಹುಲಜಂತಿ ಪೀಠದ ಶ್ರೀ ಮಾಳಿಂಗರಾಯ ಮಹಾರಾಜರು, ಯಾದವಾಡ ಚೌಕಿಮಠದ ಶ್ರೀ ಶಿವಯೋಗಿ ದೇವರು, ಯಾದವಾಡ ಪತ್ರಿಮಠದ ಶ್ರೀ ಶಿವಾನಂದ ಮಹಾರಾಜರು ಮತ್ತು  ಮಾಹಿತಿ ಹಕ್ಕು ಹೋರಾಟಗಾರ ಮತ್ತು ಜೆಡಿಎಸ್ ಮುಖಂಡ ಭೀಮಪ್ಪ ಗಡಾದ, ಮಾಜಿ ಸೈನಿಕ ಶ್ರೀಶೈಲ್ ಭಜಂತ್ರಿ, ಜಿ.ಪಂ ಸದಸ್ಯ ರಮೇಶ ಉಟಗಿ ಮಾತನಾಡಿದರು.

ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವಪ್ಪಗೌಡ ನ್ಯಾಮಗೌಡ ಅಧ್ಯಕ್ಷತೆ ವಹಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ  ಅನಂತರಾವ ಘೋರ್ಪಡೆ, ಡಾ.ಶಿವನಗೌಡ ಪಾಟೀಲ, ಡಿ.ಡಿ.ಟೋಪಿಜ್, ಸುಭಾಸ ಒಂಟಗೋಡಿ,  ಗಿರೀಶ್ ಹಳ್ಳೂರ್, ಸಂಗಪ್ಪ ಕಂಟಿಗಾರ್, ಸುಧೀರ ಗೋಡಿಗೌಡರ್, ಸೋಮಶೇಖರ ಕತ್ತಿ, ರಾಜಶೇಖರ್ ಕಲ್ಯಾಣಿ  ಉಪಸ್ಥಿತರಿದ್ದರು, ಕಾರ್ಯಕ್ರಮದ ಆಯೋಜಕರಾದ ಅಜಯ್ ಯಾದವ್, ಈರಪ್ಪ ಮೋಡಿ, ಆನಂದ್ ಉದಪುಡಿ, ಚೇತನ ಅಂಬಲಜೇರಿ ಮಲಿಕ್ ಜಾರಿ, ವೆಂಕಟೇಶ್ ದಾಸರ್, ಆನಂದ ಈತಾಪಿ, ಚಮನ್‍ಸಾಬ್ ಜಿಡ್ಡಿಮನಿ, ಕಹಿಂ ಬನಹಟ್ಟಿ, ಸುನಿಲ್ ಕೆಂಜೋಳ, ಗಿರೀಶ್ ಚಿಪ್ಲಕಟ್ಟಿ, ಯಲ್ಲಪ್ಪ ಕನ್ನಾಳಿ  ರಾಘು ಹಿರೇಮಠ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತಿತರರು ಇದ್ದರು.

ಗಿಣಿರಾಮ ಧಾರಾವಾಹಿಯ ನಟ ಶಿವರಾಂ, ನಟಿ , ಮೈಸೂರ ಗೊಂಬೆ ಕಲಾವಿದೆ ಸುಮಾರಾಜ ಕುಮಾರ, ಡ್ಯಾನ್ಸ ಕರ್ನಾಟಕ ಡ್ಯಾನ್ಸ್ ತಂಡಗಳಾದ ಕುಂದಾರ ಮತ್ತು ಮಂಗಳೂರ ಡ್ಯಾನ್ಸ್ ಗ್ರೂಪ್, ಯಾದವಾಡ ಕಲಾವಿದರಾದ ಬೃಂಗೇಶ್ ಮತ್ತು ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group