spot_img
spot_img

ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ತ ಸೈಕಲ್ ಜಾಥಾ

Must Read

- Advertisement -

ಸಿಂದಗಿ: ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅಸಂಖ್ಯಾತ ಹೋರಾಟಗಾರರ ಜೀವನ ಚರಿತ್ರೆಯನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಹಾಗೂ ಅವರ ಹೋರಾಟದ ಇತಿಹಾಸ ಮುಂದಿನ ಪೀಳಿಗೆಗೆ ಮುಟ್ಟಿಸುವ ನಿಟ್ಟಿನಲ್ಲಿ ತಾಲೂಕಿನ ದೇವರನಾವದಗಿ ಗ್ರಾಮದಲ್ಲಿ ಬ್ರಿಟೀಷರಿಗೆ ಸೆರೆಸಿಕ್ಕ ವೀರ ಹೋರಾಟಗಾರ ವಾಸುದೇವ ಬಲವಂತ ಫಡಕೆಯವರ ಸ್ಮರಣಾರ್ಥ ಹಾಗೂ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತವಾಗಿ ಯುವ ಸಂಕಲ್ಪ ಯಾತ್ರೆಯ ಮೂಲಕ ದೇವರನಾವದಗಿ ಚಲೋ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ ಹೇಳಿದರು.

ಪಟ್ಟಣದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಯುವ ಘಟಕ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಫಡಕೆಯವರ ಜೀವನ ಚರಿತ್ರೆ ಹಾಗೂ ಹೋರಾಟಗಳು ಯುವಕರ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚುವಂತಿದ್ದವು ಇಂಥ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಈ ತಾಲೂಕಿನ ದೇವರನಾವದಗಿಯಲ್ಲಿ ನಾಲ್ಕು ದಿನಗಳ ವರೆಗೆ ತಂಗಿದ್ದರೆಂಬ ಸಂಗತಿ ಬಹಳ ಜನರಿಗೆ ತಿಳಿದಿಲ್ಲ ಇಂತಹ ವಿಷಯಗಳು ಜನತೆಗೆ ತಿಳಿಸಿಕೊಡಬೇಕೆಂಬುದು ಈ ಜಾಥಾದ ಮುಖ್ಯ ಉದ್ದೇಶವಾಗಿದೆ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಇದೇ 19 ರಂದು ಬೆಳಿಗ್ಗೆ 8.30 ಗಂಟೆಗೆ ಸಿಂದಗಿ ನಗರದಿಂದ ಸುಮಾರು 200 ಸೈಕಲ್‍ಗಳ ಮೂಲಕ ಪ್ರಾರಂಭವಾಗುವ ಈ ಜಾಥಾ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ದೇವರನಾವದಗಿ ಗ್ರಾಮಕ್ಕೆ ತಲುಪಲಿದೆ ಅಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ ಅಲ್ಲದೆ ಮಾರ್ಗ ಮಧ್ಯದ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸೇರಿದಂತೆ ರಾಜ್ಯದ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

- Advertisement -

ಬಿಜೆಪಿ ರಾಷ್ಟ್ರೀಯ ಸದಸ್ಯ ನ್ಯಾಯವಾದಿ ಶಂಭುಲಿಂಗ ಕಕ್ಕಳಮೇಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಸುಮಾರು 132 ವರ್ಷಗಳ ಹಿಂದಿನ ಐತಿಹಾಸಿಕ ಘಟನೆಗಳು ಯುವಕರಿಗೆ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ 9 ಮಂಡಲಗಳ ಬಿಜೆಪಿ ಕಾರ್ಯಕರ್ತರು ಬಾಗವಹಿಸಲಿದ್ದಾರೆ ಎಂದರು. ಬ್ರಿಟೀಷ ಅಧಿಕಾರಿ ಡ್ಯಾನಿಯಲ್‍ನನ್ನು ಹೊಡೆದುರುಳಿಸಲು ಸಂಚು ರೂಪಿಸಿ ವಿಫಲರಾದ ವಾಸುದೇವ ಫಡಕೆ ಅವರು ಹೈದ್ರಾಬಾದ ತಲುಪಿ ಅಲ್ಲಿಂದ ಬೇರೆ ಕಡೆಗೆ ಹೋಗುವ ಮಾರ್ಗಮಧ್ಯ ದೇವರ ಗಾಣಗಾಪುರ ಹಾಗೂ ದೇವರ ನಾವದಗಿ ತಲುಪಿದಾಗ ಅದೇ ಡೇನಿಯಲ್ ಬ್ರಿಟೀಷ ಸೈನಿಕರೊಂದಿಗೆ ಫಡಕೆ ಸೆರೆಯಾದರು ಇಂತಹ ಘಟನಾವಳಗಳಿಗಳನ್ನು ಇಂದಿನ ಯುವಕರಿಗೆ ತಿಳಿಸುವ ಉದ್ದೇಶವಾಗಿದೆ ಎಂದರು

ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಬಿ.ಎಚ್.ಬಿರಾದಾರ, ಸಿದ್ದಣ್ಣ ಬಿರಾದಾರ, ಸಿ.ಎಸ್.ನಾಗೂರ, ನಿಂಗರಾಜ ಬಗಲಿ,ಶ್ರೀಶೈಲ ಚಳ್ಳಗಿ, ಮಲ್ಲು ಬಗಲಿ, ಗುರು ತಳವಾರ, ರವಿ ನಾಯ್ಕೋಡಿ, ಸುದೇಶ್ನ ಜಿಂಗಾಣಿ, ಎಸ್.ಆರ್.ಪಾಟೀಲ ಸೇರಿದಂತೆ ಹಲವರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group