spot_img
spot_img

ದಲಿತ ಅಹವಾಲು ಆಲಿಸಲಿರುವ ಡಿಕೆಶಿ ; ದಿ. ೧೭ ಕ್ಕೆ ಸಿಂದಗಿಗೆ

Must Read

- Advertisement -

ಸಿಂದಗಿ: ರಾಜ್ಯದಲ್ಲಿ ದಲಿತರ ಸಮಸ್ಯೆಗಳ ಕುರಿತಾಗಿ ದಲಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತಾಗಿ ಅಹವಾಲುಗಳನ್ನು ಆಲಿಸಲು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಜು. ೧೭ ರಂದು ಬೆಳಿಗ್ಗೆ ೧೧ ಕ್ಕೆ ಸಿಂದಗಿ ನಗರಕ್ಕೆ ಆಗಮಿಸಿ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.

ಪಟ್ಟಣದ ಎಪಿಎಂಸಿ ಅವರಣದಲ್ಲಿರುವ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಎಲ್ಲ ಜಾತಿ ಜನಾಂಗದ ಜೊತೆ ಸಮಾನ ಪ್ರೀತಿ ವಿಶ್ವಾಸ, ರಾಷ್ಟ್ರೀಯ ಆಂದೋಲನ ಆಗಬೇಕಾದರೆ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಆಡಳಿತ ಹಿಡಿಯಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ರಾಜ್ಯಾದ್ಯಂತ ಪ್ರವಾಸ ನಡೆಸಿದ್ದು. ಪಡಗಾನೂರ ಗ್ರಾಮದಲ್ಲಿ ಬಂಜಾರ ಸಮುದಾಯಗಳ ಸ್ಥಿತಿಗತಿ ಕುರಿತಾಗಿ ಸಮುದಾಯದ ಜನರ ಜೊತೆ ಮುಕ್ತ ಮಾತುಕತೆ ನಡೆಸಿ ಕಾಂಗ್ರೆಸ್ ಪಕ್ಷ ಜನರಿಂದ ದೂರವಾಗಿದೆ ಎನ್ನುವ ಸಂದರ್ಭದಲ್ಲಿ ಜನರ ಜೊತೆ ನೇರವಾಗಿ ಬೇಟಿ ಮಾಡುತ್ತಿರುವುದು ಇದು ಜನಮನ್ನಣೆಯ ಕಾರ್ಯವಾಗಿದೆ ಎಂದರು.

ತಾಲೂಕು ಅಧ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, ಅಂದು ಪಕ್ಷದ ಕಾರ್ಯಾಲಯಕ್ಕೆ ಭೇಟಿ ನೀಡಿ ಕರೋನಾ ಸಂಕಷ್ಟದಲ್ಲಿ ವಿವಿಧ ಸಮುದಾಯಗಳ ಪರಿಶೀಲನೆ ಮತ್ತು ಮತ್ತು 275 ಭೂತ್ ಮಟ್ಟದಲ್ಲಿ ಸಮಸ್ಯೆಗೊಳಗಾದವರಿಗೆ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು, ಪರಿಶಿಷ್ಠ ಜಾತಿ ಮತ್ತು ಜನಾಂಗಕ್ಕೆ ಹೆಚ್ಚಿನ ಒತ್ತು ನೀಡಲು ಸಂವಾದ ನಡೆಸಲಿದ್ದಾರೆ ಎಲ್ಲರಿಗೂ ಸಂವಾದದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಸಮುದಾಯದ ಓರ್ವ ಸದಸ್ಯರು ಎಲ್ಲ ಸಮಸ್ಯೆಗಳ ಕುರಿತು ಒಂದು ಪಟ್ಟಿ ಮಾಡಿ ಸಂವಾದದಲ್ಲಿ ಪಾಲ್ಗೊಳ್ಳಬೇಕು ಎಂದರು.

- Advertisement -

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಬಿಜೆಪಿ ಪಕ್ಷ ದಲಿತರ ಪಕ್ಷವಲ್ಲ, ಕೋಮುವಾದಿ, ಜಾತಿವಾದಿ ಬಿಜೆಪಿ ಪಕ್ಷ ಒಡೆದಾಳುವ ನೀತಿಯಿಂದ, ಜಾತಿ ಆಧಾರದ ಮೇಲೆ ಒಡೆದಾಳುವಂತ ನೀತಿಯಲ್ಲಿ ನಮ್ಮನ್ನು ಆಳುತ್ತಿದೆ. ಎಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವಂಥ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕುಂದಿದ್ದೇಕೆ ಎನ್ನುವದನ್ನು ಅವಲೋಕನ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಎಲ್ಲರು ಸಮಾನರು ಎನ್ನುವ ಸಿದ್ದಾಂತದ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಅಹಿಂದ ಅಂದರೆ ಕಾಂಗ್ರೆಸ್ ಪಕ್ಷ ಇದರಲ್ಲಿ ಯಾವುದೇ ಒಡಕಿಲ್ಲ. ಪಕ್ಷದಲ್ಲಿ ಬಿರುಕು ಹುಟ್ಟಿಸುವಂಥ ಕಾರ್ಯ ನಡೆಸುತ್ತಿದೆ ಇದಕ್ಕೆ ಯಾರು ಮನ್ನಣೆ ಕೊಡಬಾರದು. ಬಿಜೆಪಿ ಪಕ್ಷ ಕರೋನಾ ಸಂದರ್ಭದಲ್ಲಿ ದೋಚುವ ಕಾರ್ಯ ನಡೆಸಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಕಳೆದ ಪುರಸಭೆ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಪಕ್ಷಾಂತರ ಕಾಯ್ದೆಯಡಿ ಅವರ ಸದಸ್ಯತ್ವ ರದ್ದಾಗುತ್ತದೆ ಅದು ಕೋರ್ಟ್ ನಲ್ಲಿದೆ ಎಂದು ತಿಳಿಸಿದರು.

ಉಪಚುನಾವಣೆಯ ಅಭ್ಯರ್ಥಿ ಅಶೋಕ ಮನಗೂಳಿ ಅವರು ಮಾತನಾಡಿ, ರಾಜ್ಯದ ಎಲ್ಲ ದಲಿತ ಸಮುದಾಯಗಳ ಸಮಸ್ಯೆಗಳನ್ನು ಆಲಿಸಲು ಪ್ರಥಮ ಬಾರಿಗೆ ಸಿಂದಗಿ ನಗರಕ್ಕೆ ಆಗಮಿಸಲಿದ್ದು ಪಕ್ಷದ ಕಾರ್ಯಕರ್ತರು ಹಾಗೂ ಪರಿಶಿಷ್ಠ ಜಾತಿಯ ಲಂಬಾಣಿ ಸಮುದಾಯದ ಹತ್ತು ಹಲವಾರು ಸಮಸ್ಯೆಗಳ ಕುರಿತು ಸಂವಾದ ನಡೆಸಿ ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷವನ್ನು ಅಡಳಿತಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಉತ್ತಮ ಸಂಘಟನೆ ಮಾಡುತ್ತಿದ್ದಾರೆ ಇದಕ್ಕೆ ಎಲ್ಲ ದಲಿತ ಸಮುದಾಯದ ಮುಖಂಡರು ಸಮಸ್ಯೆಗಳು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಮುಸ್ತಾಕ ಮುಲ್ಲಾ, ಮಹಿಬೂಬಸಾಬ ತಾಂಬೋಳಿ, ಶಿವು ಹತ್ತಿ, ಗೋಲ್ಲಾಳಪ್ಪಗೌಡ ಮಾಗಣಗೇರಿ, ಎಂ.ಎ.ಖತೀಬ, ಅಯುಬ ದೇವರಮನಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫಾರುಕ ಮುಲ್ಲಾ, ಸಂತೋಷ ಹರನಾಳ, ಪರಶುರಾಮ ಕಾಂಬಳೆ, ಚಂದ್ರಕಾಂತ ಸಿಂಗೆ, ರಾಜು ಕೂಚಬಾಳ, ಶಾರದಾ ಬೆಟಗೇರಿ, ಇರ್ಫಾನ್ ಆಳಂದ, ವೈ.ಸಿ.ಮಯೂರ, ಸಂತೋಷ ಮಣಿಗೆರಿ, ಸಿದಣ್ಣ ಹಿರೇಕುರಬರ, ಮುನ್ನಾ ಬೈರಾಮಡಗಿ ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group