ಬೆಂಗಳೂರು -ನಮ್ಮ ಮಗಳಿಗೆ ಕೆಲಸದ ಆಮಿಷ ಒಡ್ಡಿದ್ದು ಜಾರಕಿಹೊಳಿ ಅಲ್ಲ ಡಿಕೆ ಶಿವಕುಮಾರ. ಅವಳನ್ನು ಒತ್ತೆಯಾಳಾಗಿಟ್ಟುಕೊಂಡು ನಮ್ಮ ಮಗಳನ್ನು ಆಟ ಆಡಿಸುತ್ತಿದ್ದಾನೆ ಪುಣ್ಯಾತ್ಮ ಎಂದು ಸಿಡಿ ಲೇಡಿಯ ಪೋಷಕರು ಪತ್ರಕರ್ತರೆದುರು ತಮ್ಮ ಅಳಲು ತೋಡಿಕೊಂಡರು.
ನಾಲ್ಕು ದಿನದ ಹಿಂದೆ ಫೋನ್ ಮಾಡಿದ ಮಗಳು ಸಿಡಿಯಲ್ಲಿರುವುದು ನಾನಲ್ಲ. ಅದನ್ನು ಗ್ರಾಫಿಕ್ಸ್ ಮಾಡಲಾಗಿದೆ. ಆದರೆ ನಾನು ಡಿಕೆಶಿ ಹೇಳಿದಂತೆ ಕೇಳಬೇಕಾಗಿದೆ ಎಂದು ಹೇಳಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ಕಣ್ಣೀರಿಟ್ಟು ಹೇಳಿದರು.
ಇವರು ಬೆಳಗಾವಿಯಲ್ಲಿ ಯಾಕೆ ದೂರು ಕೊಡುತ್ತಾರೆ ಎಂದು ಡಿಕೆಶಿ ಪತ್ರಕರ್ತರೆದುರು ಪ್ರಶ್ನೆ ಮಾಡಿದ್ದಕ್ಕೆ ಸಿಡಿದೆದ್ದ ಪೋಷಕರು, ನಾವು ಹನ್ನೆರಡು ವರ್ಷಗಳಿಂದ ಬೆಳಗಾವಿಯಲ್ಲಿ ಇದ್ದೇವೆ ಇಲ್ಲಿ ದೂರು ಕೊಡದೇ ಕನಕಪುರಕ್ಕೆ ಹೋಗಿ ದೂರು ಕೊಡಬೇಕಿತ್ತಾ ಎಂದು ಸಿಡಿಮಿಡಿಗೊಂಡು ಪ್ರಶ್ನೆ ಮಾಡಿದರು.
ನಮ್ಮ ಮಗಳಿಗೆ ಚಿತ್ರಹಿಂಸೆ ಕೊಡಲಾಗುತ್ತಿದೆ. ಅವಳಿಗೆ ಮಾನಸಿಕ ಹಿಂಸೆಯಾಗುತ್ತಿದೆ. ಅವಳನ್ನು ನಾಲ್ಕೈದು ದಿನ ನಮ್ಮ ಮನೆಗೆ ಕಳಿಸಿಕೊಡಿ ಅವಳು ಸ್ವತಂತ್ರಳಾಗಿ ಇರಲು ಬಿಡಿ ಅವಳನ್ನು ಇಟ್ಡುಕೊಂಡು ಹೀನ ರಾಜಕೀಯ ಮಾಡಿದ್ದು ಸಾಕು ಎಂದು ಸಿಡಿ ಲೇಡಿಯ ಪೋಷಕರು ಅಲವತ್ತುಕೊಂಡರು.